ಕುಂದಾಪುರ: ಗುರುಕುಲ ಪದವಿ ಪೂರ್ವ ಕಾಲೇಜು ಕುಂದಾಪುರ-ವಿವಿಧ ಕೋರ್ಸುಗಳ ದಾಖಲಾತಿಗೆ ಆಹ್ವಾನ

Source: gurukula kundapura | By Arshad Koppa | Published on 18th January 2017, 8:23 AM | Coastal News | Technology |


ಕುಂದಾಪುರ, ಜ ೧೭: ಅವಿಭಾಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯ ಪ್ರತಿಷ್ಠಿತ ಸಂಸ್ಥೆಗಳಲ್ಲಿಯ ವಿಶಿಷ್ಟವಾದ ಮತ್ತು ಗುಣಮಟ್ಟದ ಶಿಕ್ಷಣವನ್ನು ಕಾಪಾಡಿಕೊಂಡು ಬರುತ್ತಿರುವ ಸಂಸ್ಥೆಯು ಕುಂದಾಪುರ ತಾಲೂಕಿನ ಕೋಟೇಶ್ವರದ ವಕ್ವಾಡಿಯ ಗುರುಕುಲ ಪದವಿ ಪೂರ್ವ ವಿಜ್ಞಾನ ಮತ್ತು ವಾಣ ಜ್ಯ  ಮಹಾವಿದ್ಯಾಲಯ. ಬಾಂಡ್ಯ ಶಿಕ್ಷಣಸಂಸ್ಥೆಯ ಅಡಿಯಲ್ಲಿ ಸ್ಥಾಪಿತವಾದ ಈ ಸಂಸ್ಥೆ ಕುಂದಾಪುರದ ಸುತ್ತ-ಮುತ್ತಲಿನ ವಿದ್ಯಾರ್ಥಿಗಳಿಗಷ್ಟೆ ಅಲ್ಲದೇ, ರಾಜ್ಯದ ನಾನಾ ಭಾಗಗಳಿಂದ ಶಿಕ್ಷಣ ಅರಸಿ ಬರುವ ಕಲಿಕಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ಈ ಮಹಾವಿದ್ಯಾಲಯವು ಸುಮಾರು 36 ಎಕರೆ ಹಚ್ಚ ಹಸುರಿನ ಕ್ಯಾಂಪಸ್ ಹೊಂದಿರುವುದು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲಕರ ವಾತವರಣವನ್ನು ನಿರ್ಮಿಸಿದೆ. ಶಿಕ್ಷಣವು ಕೇವಲ ವ್ಯಾಪಾರೀಕರಣವಾಗಬಾರದು ಬದಲಾಗಿ ವಿದ್ಯಾರ್ಥಿಗಳು ತಮ್ಮ ಮುಂದಿನ ವೃತ್ತಪರ ಬದುಕಿಗೆ ಗುಣಾತ್ಮಕವಾಗಿ ಮತ್ತು ಸ್ಪರ್ಧಾತ್ಮಕವಾಗಿ ಪರೀಕ್ಷೆಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಬೆಳೆಸುವ ಮೂಲ ಉದ್ದೇಶ ಈ ಸಂಸ್ಥೆಯದ್ದಾಗಿದೆ. ಇದಕ್ಕೆ ಪೂರಕವೆಂಬಂತೆ ಸುಸಜ್ಜಿತ ಕಟ್ಟಡ, ಅನುಕೂಲಕರ ವರ್ಗಕೋಣೆಗಳು, ಗ್ರಂಥಾಲಯ, ಪ್ರಯೋಗಾಲಯ, ವಿಶಾಲವಾದ ಕ್ರೀಡಾಂಗಣ, ಅನುಭವಿ ಮತ್ತು ಕೌಶಲಪೂರಿತ ಶಿಕ್ಷಕವೃಂದ, ನಿರಂತರ ಮೌಲ್ಯಮಾಪನಕ್ಕೆ ಬೇಕಾಗುವ ಆಧುನಿಕ ಕಲಿಕಾ ಸಾಮಗ್ರಿಗಳು ಇವೇ ಮುಂತಾದವುಗಳು ವಿದ್ಯಾರ್ಥಿಗಳನ್ನು ಯಾವುದೇ ಬಾಹ್ಯ ಆಕರ್ಷಣೆಗಳಿಗೆ ಒಳಗಾಗದೇ ತಮ್ಮ ಭವಿಷ್ಯದ ಕನಸನ್ನು ಕಟ್ಟಿಕೊಳ್ಳಲು ಈ ವಿದ್ಯಾಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ.
ಆಯ್ಕೆಗೆ ಅವಕಾಶವಿರುವ ವಿಷಯಗಳು :
ಗುರುಕುಲ ವಿಜ್ಞಾನ ಮತ್ತು ವಾಣ ಜ್ಯ ಮಹಾವಿದ್ಯಾಲಯದಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಈ ಕೆಳಗಿನ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ವಿಜ್ಞಾನ ವಿಭಾಗ 
ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣ ತ ಮತ್ತು ಜೀವಶಾಸ್ತ್ರ (PCMB)
ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣ ತ ಮತ್ತು ಗಣಕಶಾಸ್ತ್ರ(PCMCS)
ವಾಣ ಜ್ಯ ವಿಭಾಗ
ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಗಣಕ ಶಾಸ್ತ್ರ(BASCS)
 ಭಾಷೆಗಳು;
ಇಂಗ್ಲಿಷ್, ಕನ್ನಡ, ಹಿಂದಿ
ಈ ಮೇಲೆ ನಮೂದಿಸಿದ ವಿಷಯಗಳಿಗೆ ನಿರಂತರವಾದ ಭೋದನೆ ಮತ್ತು ಮೌಲ್ಯಮಾಪನವನ್ನು ನಿಗಧಿತ ವೇಳೆಯಲ್ಲಿ ಪೂರ್ಣಗೊಳಿಸುವ ಕ್ರೀಯಾ ಯೋಜನೆ ಸಿದ್ಧಗೊಂಡಿರುವುದು ಪ್ರಮುಖ ವಿಷಯವಾಗಿದೆ.
ವಿಶ್ವಾಸನೀಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ:
(PUC,CET,COMED-K,JEE Mains& Advance, M edical and CPT)
ಎರಡು ವರ್ಷಗಳ ಪದವಿ ಪೂರ್ವ ಹಂತಗಳ ತನ್ಮಧÀ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಪ್ರವೇಶಾತಿಗಾಗಿ ಬೇಕಾಗುವ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ PUC,CET,COMED-K,JEE Mains& Advance, M edical and CPT ಗೆ ತರಬೇತಿಯನ್ನು ಅನುಭವಿ ಉಪನ್ಯಾಸಕ ವೃಂದದವರಿಂದ ನೀಡಲಾಗುತ್ತದೆ. ಈ ತರಬೇತಿಗಳು ನಿರಂತರವಾಗಿ ಎರಡು ವರ್ಷಗಳವರೆಗೆ ನಡೆಯುವುದರಿಂದ ವಿದ್ಯಾರ್ಥಿಗಳು ನಿರ್ಭಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ಗಳಿಸಲು ಸುಲಲಿತವಾಗಲಿದೆ. ಇದಕ್ಕಾಗಿ ನಮ್ಮ ಮಹಾ ವಿದ್ಯಾಲಯದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಈಗಾಗಲೇ ವಾರ್ಷಿಕ ಕ್ರೀಯಾಯೋಜನೆಯನ್ನು ತಯಾರಿಸಿ ಪೂರ್ವ ಸನ್ನದ್ಧ್ದರಾಗಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ.

ಉಚಿತ ಬ್ರಿಡ್ಜ್ ಕೋರ್ಸ್
ಸತತ ಮೂರು ವರ್ಷಗಳಿಂದ ಗುರುಕುಲ ಮಹಾ ವಿದ್ಯಾಲಯವು ಎಪ್ರಿಲ್ ತಿಂಗಳಿನಲ್ಲಿ ಉಚಿತವಾಗಿ ಬ್ರಿಡ್ಜ್ ಕೋರ್ಸ್‍ನ್ನು ಕೈಗೊಳ್ಳುತ್ತಾ ಬಂದಿದೆ. ಈ ಸೇತುಬಂದ ತರಬೇತಿಯು ಕುಂದಾಪುರದ ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ರಾಜ್ಯದ ನಾನಾ ಭಾಗಗಳಿಂದ ಬರುವ ಕಲಿಕಾರ್ಥಿಗಳಿಗೆ ಒಂದು ಸುವರ್ಣಾವಕಾಶ. 30 ದಿನಗಳ ಕಾಲ ನಿರಂತರವಾಗಿ ನಡೆಯುವ ಈ ತರಬೇತಿಯು ವಿದ್ಯಾರ್ಥಿಗಳಲ್ಲಿ ತಾವು ಯಾವರೀತಿ ಪದವಿ ಪೂರ್ವ ಪಠ್ಯಕ್ರಮಕ್ಕೆ ಹೊಂದಿಕೊಳ್ಳಬೇಕು ಮತ್ತು ಯಾವ ಆಯ್ಕೆಯ ವಿಷಯಗಳು ಮುಂದಿನ ವೃತ್ತಿಪರ ಶಿಕ್ಷಣಕ್ಕೆ ಸುಲಲಿತವಾಗಲಿದೆ ಎಂದು ತಿರ್ಮಾನಿಸಲು ಸಹಾಯಕವಾಗಿದೆ. ತರಬೇತಿ ಹೊಂದಿದ ಉಪನ್ಯಾಸಕವೃಂದ ಈಗಾಗಲೇ ಬ್ರಿಡ್ಜ್‍ಕೋರ್ಸ್ ನ ಪಠ್ಯವನ್ನು ಈ ಕೆಳಗಿನ ವಿಷಯಕ್ಕೆ ಸಂಭದಿಸಿದಂತೆ ತಯಾರಿಸಲಿದ್ದಾರೆ.
ವಿಜ್ಞಾನ ವಿಭಾಗ 
ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣ ತ ಮತ್ತು ಜೀವಶಾಸ್ತ್ರ (PCMB)

ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣ ತ ಮತ್ತು ಗಣಕಶಾಸ್ತ್ರ(PCMCS)
ವಾಣ ಜ್ಯ ವಿಭಾಗ
ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಗಣಕ ಶಾಸ್ತ್ರ(BASCS)

ಪ್ರತ್ಯೇಕ ವಸತಿ ಸೌಲಭ್ಯದ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಸ್ಥೆಯ ಇನ್ನಿತರ ಸೌಲಭ್ಯಗಳು:
          ಗುರುಕುಲ ವಿಜ್ಞಾನ ಮತ್ತು ವಾಣ ಜ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳ ಪಠ್ಯ ವಿಷಯಕ್ಕೆ ಸಂಭಂದಿಸಿದ ಮಹಾವಿದ್ಯಾಲಯವಾಗಿರದೇ ಮಗುವಿನ ಸರ್ವಾಂಗೀಣ ವಿಕಾಸಕ್ಕೆ ಬೇಕಾಗುವ ಸಹಪಠ್ಯ ಸಟುವಟಿಕೆಗಳಿಗೂ ನಿರಂತರವಾದ ಅವಕಾಶವನ್ನು ನೀಡುತ್ತಾ ಬಂದಿದೆ. ಕಲಾಂಗಣ, ಕ್ರೀಡಾಂಗಣ , ಸಾಂಸ್ಕ್ರತಿಕರಂಗ ಇವೇ ಮುಂತಾದ ವೇದಿಕೆಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅವಕಾಶಗಳನ್ನು ಕಲ್ಪಿಸಲಾಗಿಗೆ.

ಊಟ ಮತ್ತು ವಸತಿ ಸೌಲಭ್ಯ:
      ಗುರುಕುಲ ವಿದ್ಯಾಸಂಸ್ಥೆಯ ವಿಶಾಲವಾದ ಕ್ಯಾಂಪಸ್ನಲ್ಲಿ ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕವಾದ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಅನುಭವಿ ಉಪನ್ಯಾಸಕ ವೃಂದದವರು ವಸತಿ ನಿಲಯದ ವಿದ್ಯಾರ್ಥಿಗಳಿಗೆ ತರಬೇತಿಗಳನ್ನು ನೀಡುವುದರ ಮೂಲಕ ವಿಶೇಷವಾದ ಕಾಳಜಿಯನ್ನು ವಹಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಬೇಕಾಗುವ ವೈದ್ಯಕೀಯ ಸೌಲಭ್ಯ, ಅಂತರ್ಜಾಲದ ವ್ಯವಸ್ಥೆ ಹಾಗೂ ಇನ್ನಿತರ ಸೇವಾ ಸೌಲಭ್ಯಗಳನ್ನು ವಸತಿನಿಲಯದ ಮುಖ್ಯಸ್ಥರ ಮಾರ್ಗದರ್ಶನದ ಮೂಲಕ ನೀಡಲಾಗುತ್ತದೆ. 
ನೊಂದಣ  ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

08254 261887, 9482098367, 8762050367
Email: [email protected]   
www.bhandyagurukula.com

ಜಂಟಿ ಕಾರ್ಯನಿರ್ವಾಹಕ
ಕೆ ಸುಭಾಶ್ಚಂದ್ರ ಶೆಟ್ಟಿ

Read These Next

ಭಟ್ಕಳ ಜಾಲಿ ಪಟ್ಟಣ ಪಂಚಾಯತ ಕೊನೆಯ ಸಭೆಯಲ್ಲಿ ಮೇಲ್ದರ್ಜೆಗೆರಲು ಸದಸ್ಯರ ಹಂಬಲ; ಮತ್ತೆ ಒಳಚರಂಡಿ ಬಗ್ಗೆ ಅಪಸ್ವರ

ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ವಿಳಂಬ, ಕೊರೊನಾ ಆತಂಕ, ಒಳಚರಂಡಿ ಗದ್ದಲ ಇತ್ಯಾದಿ ಎಲ್ಲ ಗೊಂದಲವನ್ನು ಕಟ್ಟಿಕೊಂಡೇ ತಾಲೂಕಿನ ಜಾಲಿ ...

ಜಿಲ್ಲೆಯ ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ : ಸಿಇಓ ಪ್ರಿಯಾಂಗ ಎಂ.

ಕಾರವಾರ : ಮುಂದಿನ ಎರಡು ವರ್ಷದೊಳಗಾಗಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ...

ಪ್ರತಿಭಾವಂತ ಕಬ್ಬಡ್ಡಿ ಆಟಗಾರ ಮನೋಜ್ ನಾಯ್ಕ ಹೃದಯಾಘಾತದಿಂದ ಸಾವು. ಕ್ರೀಡಾ ಪ್ರೇಮಿಗಳ ಕಂಬನಿ.

ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಪ್ರಮುಖ ಕಬಡ್ಡಿ ಆಟಗಾರ, ಅತ್ಯುತ್ತಮ ಆಲ್ ರೌಂಡರ್ ಭಟ್ಕಳದ ಮನೋಜ‌ ನಾಯ್ಕ ಹೃದಯಾಘಾತದಿಂದ ...

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...

ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ...