ಕುಂದಾಪುರ : ಬಸ್ಸಿನಿಂದ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು

Source: S O News service | By Staff Correspondent | Published on 29th July 2016, 4:46 PM | Coastal News | State News | Don't Miss |


ವಿದ್ಯಾರ್ಥಿಗಳಿಂದ ಪ್ರತಿಭಟನೆ : ಲಘು ಲಾಠೀ ಚಾರ್ಜ್

ಕುಂದಾಪುರ : ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಯೊಬ್ಬ ಸರ್ಕಾರೀ ಬಸ್ಸಿನ ಪೂಟ್ಬೋರ್ಡಿನಲ್ಲಿ ನಿಂತಿದ್ದಾಗ ಇನ್ನೊಂದು ಬಸ್ಸಿನ ಸೈಡ್ ಮಿರರ್ ತಾಗಿ ಕೆಳಕ್ಕೆಸೆಯಲ್ಪಟ್ಟು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ಉಪ್ಪುಂದ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು ೯ಗಂಟೆಗೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯನ್ನು ಉಪ್ಪುಂದದ ತಿರ್ಕನಮನೆ ನಿವಾಸಿ ಸದಾಶಿವ ಶೆಟ್ಟಿ ಎಂಬುವರ ಮಗ ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ರಾಘವೇಂದ್ರ ಶೆಟ್ಟಿ(೨೦) ಎಂದು ಗುರುತಿಸಲಾಗಿದೆ.


ಸರ್ಕಾರೀ ಬಸ್ ಭಟ್ಕಳದಿಂದ ಪ್ರತೀ ದನ ಕುಂದಾಪುರಕ್ಕೆ ಬರುತ್ತಿತ್ತು. ಈ ಹಿಂದೆ ಈ ರಸ್ತೆಯಲ್ಲಿ ಖಾಸಗೀ ಬಸ್‌ಗಳೇ ಸಂಚರಿಸುತ್ತಿದ್ದು, ನಿಯಮಿತ ನಿಲುಗಡೆಯ ಲಾಂಗ್ ರೂಟ್ ಬಸ್‌ಗಳು ಮಾತ್ರ ಸಂಚರಿಸುತ್ತಿದ್ದವು. ಆದರೆ ಕುಂದಾಪುರಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹೋರಾಟ ಫಲವಾಗಿ ಭಟ್ಕಳ-ಕುಂದಾಪುರ ಬಸ್‌ಗಳನ್ನು ಬಿಡಲಾಗಿತ್ತು.


ಶುಕ್ರವಾರ ಬೆಳಿಗ್ಗೆ ಉಪ್ಪುಂದದ ಅಂಬಾಗಿಲಿನಲ್ಲಿ ತುಂಬಿ ತುಳುಕುತ್ತಿದ್ದ ಬಸ್ಸಿಗೆ ರಾಘವೇಂದ್ರ ಶೆಟ್ಟಿಯೂ ಏರಿದ್ದಾನೆ. ಅಲ್ಲಿಂದ ಬಸ್ ಹೊರಟು ಇನ್ನೇನು ಐದು ನಿಮಿಷಗಳಾಗಿರಬಹುದು. ಅಷ್ಟರಲ್ಲಿ ಎಡಬದಿಯಿಂದ ಹೋಟೇಲೊಂದರಲ್ಲಿ ಚಹಾ ಕುಡಿದು ಹೆದ್ದಾರಿಗೆ ಬರುತ್ತಿದ್ದ ವಿ‌ಆರ್‌ಎಲ್ ಬಸ್ ಹೆದ್ದಾರಿ ತಲುಪುವಷ್ಟರಲ್ಲಿ ಸರ್ಕಾರೀ ಬಸ್ ಓವರ್ ಟೇಕ್ ಮಾಡಲೆತ್ನಿಸಿದಾಗ ಫುಟ್ ಬೋರ್ಡಿನಲ್ಲಿದ್ದ ರಾಘವೇಂದ್ರ ಶೆಟ್ಟಿ ಬ್ಯಾಗ್ ವಿ‌ಆರ್‌ಎಲ್ ಬಸ್ಸಿನ ಸೈಡ್ ಮಿರರ್‌ಗೆ ತಾಗಿ ಕೆಳೆಕ್ಕೆಸೆಯಲ್ಪಟ್ಟಿದ್ದಾನೆ. ಎಸೆತದ ರಭಸಕ್ಕೆ ರಾಘವೇಂದ್ರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮರವಂತೆ ಸಮೀಪ ಸಾವಿಗೀಡಾಗಿದ್ದಾನೆ.


ಘಟನೆ ಬೆಳಕಿಗೆ ಬರುತ್ತಿದ್ದಂತೆ ಬಿಬಿಹೆಗ್ಡೆ ಕಾಲೇಜು ವಿದ್ಯಾರ್ಥಿಗಳು ಮನೃತದೇಹದ ದರ್ಶನ ಪಡೆದ ನಂತರ ಆಕ್ರೋಶಿತಗೊಂಡ ಘಟನೆಯೂ ನಡೆಯಿತು. ಕುಂದಾಪುರ ಸರ್ಕಾರೀ ಆಸ್ಪತ್ರೆಯ ಶವಾಗಾರಕ್ಕೆ ಬಮದಿದ್ದ ನೂರಾರು ವಿದ್ಯಾರ್ಥಿಗಳು ರಸ್ತೆ ತಡೆದು ಎಲ್ಲಾ ಬಸ್ಸುಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ನಂತರ ಅವರಲ್ಲಿ ಕೆಲವರು ಬಸ್ಸುಗಳಿಗೆ ಕಲ್ಲು ಹೊಡೆಯುವ ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆದ ಕುಮದಾಪುರ ಪೊಲೀಸರು ಲಘು ಲಾಠೀ ಪ್ರಹಾರ ನಡೆಸಿ ಆಕ್ರೋಶಿತ ಗುಂಪನ್ನು ಚದುರಿಸಿದ್ದಾರೆ.


ನಂತರ ಮೂರು ಖಾಸಗೀ ಬಸ್ಸುಗಳಲ್ಲಿ ಉಪ್ಪುಂದಕ್ಕೆ ಪ್ರಯಾಣಿಸಿದ ವಿದ್ಯಾರ್ಥಿಗಳು ಸುಮಾರು ಒಂದೂವರೆ ಸಾವಿರ ಜನರ ಬೆಂಬಲದೊಂದಿಗೆ ಉಗ್ರ ಪ್ರತಿಭಟನೆ ನಡೆಸಿದ್ದಾರೆ. ನಂತರ ಪ್ರತಿಭನಟಾ ಸ್ಥಳಕ್ಕೆ ಆಗಮಿಸಿದ ಎಸ್ಪಿ ಅಣ್ಣಾಮಲೈ ಅವರಿಗೆ ಪ್ರಕರಣದ ಕುರಿತಾಗಿ ತನಿಖೆ ನಡೆಸುವ ಭರವಸೆ ನಿಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಲಾಯಿತು. ಕುಂದಾಪುರ ಎಜ್ಯುಕೆಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ ವಿದ್ಯಾರ್ಥಿಗಳನ್ನು ಸಮಾಧಾನಿಸಿದರು.

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...