ಕಾರವಾರದ ಸ್ಟಾರ್ ಚಾಯ್ಸ್ ಅಕಾಡೆಮಿಯ ಸ್ಕೇಟರ್ಸ್ ಸಾಧನೆ. ರೋಲರ್ ಹಾಕಿ ಮತ್ತು ಸ್ಪೀಡ್ ಸ್ಕೇಟ್‌ನಲ್ಲಿ ರಾಜ್ಯಮಟ್ಟಕ್ಕೆ

Source: SO News | By Laxmi Tanaya | Published on 6th September 2023, 7:11 PM | Coastal News | Don't Miss |

ಕಾರವಾರ : ಶಿರಸಿಯಲ್ಲಿ ಜರುಗಿದ ಉತ್ತರಕನ್ನಡ ಜಿಲ್ಲಾ ರೋಲರ್ಸ್ ಸ್ಕೇಟಿಂಗ್ ಅಸೋಸಿಯೇಶನ್ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ದೆಯಲ್ಲಿ ಕಾರವಾರದ ಸ್ಟಾರ್ ಚಾಯ್ಸ್ ಅಕಾಡೆಮಿಯ ಸ್ಕೇಟರ್ಸ್ ಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸ್ಪೀಡ್ ಸ್ಕೇಟಿಂಗ್ : ಐದರಿಂದ ಏಳು ವರ್ಷದೊಳಗಿನ ವಿಭಾಗದಲ್ಲಿ ವಿಹಾನ್ ಮಾಳ್ಸೆಕರ್ ಒಂದು ಗೋಲ್ಡ್ ಮತ್ತು ಸಿಲ್ವರ್ ಪದಕ, ಸಮರ್ಥ ಗೌಡ ಒಂದು ಗೋಲ್ಡ್, ಪಿಯುಷ್ ಬಾನಾವಳಿ 2 ಕಂಚು ಪಡೆದಿದ್ದಾರೆ. ಐದರಿಂದ ಏಳು ವರ್ಷದ ಬಾಲಕಿಯರ ವಿಭಾಗದಲ್ಲಿ ಎಲ್ ಶೆರ್ಲಿ ಎರಡು ಬೆಳ್ಳಿ ಪದಕ ಪಡೆದರೇ ಏಳರಿಂದ 9 ವರ್ಷದ ವಿಭಾಗದಲ್ಲಿ ರಾಜವೀರ್ ಎಸ್ ಎಚ್ ಗೆ ಒಂದು ಗೋಲ್ಡ್, ದ್ರುವ ನಾಯ್ಕ 1 ಸಿಲ್ವರ್ ಪಡೆದಿದ್ದಾರೆ. 9ರಿಂದ 11 ವರ್ಷದ ವಿಭಾಗದಲ್ಲಿ ದೇವಾಂಶ ಗೆ ಒಂದು ಗೋಲ್ಡ್, ಬಾಲಕಿಯರ ವಿಭಾಗದಲ್ಲಿ ಕಾವೇರಿ ಚಕ್ರಸಾಲಿ ಎರಡು ಗೋಲ್ಡ್ ತನ್ನದಾಗಿಸಿಕೊಂಡಿದ್ದಾರೆ. 11ರಿಂದ 14 ವರ್ಷದ ವಿಭಾಗದಲ್ಲಿ ಕಾರ್ತಿಕ ಮಾಳ್ಸೆಕರ್ ಗೆ ಒಂದು ಗೋಲ್ಡ್, ಸಾಯಿರಾಜ ಹರಗಿ ಒಂದು ಸಿಲ್ವರ್, ಮಹಮದ್ ಫೌಜಾನ್ ಮಾಂಡ್ಲಿಕ್ ಗೆ ಒಂದು ಸಿಲ್ವರ್ ಮತ್ತು ಬಾಲಕಿಯರ ವಿಭಾಗದಲ್ಲಿ ಕೀತ್ ಸಿಂಗ್ ಎರಡು ಗೋಲ್ಡ್ ಪಡೆದಿದ್ದಾರೆ.

ರಾಜ್ಯಮಟ್ಟದ ರೋಲರ್ಸ್ ಹಾಕಿಗೆ ಆಯ್ಕೆ : ರೋಲರ್ ಹಾಕಿಯಲ್ಲಿ ಪಾರ್ಥ ಹೆಗಡೆ, ನಂದನ ಸಿ, ಭುವನ ಸಿ, ಶ್ರೀಶ ಮೊಗೇರ, ಪ್ರಜ್ವಲ್, ಆರ್ಯನ್ ಹುಂದಲ, ಅನಯಾ ಹುಂದಲ, ಅನ್ಶುಲ್, ವಿಸ್ಮಯ ಉಳ್ವೇಕರ, ಆರಾಧ್ಯ ಮೆನನ್, ಮನಸ್ವಿ ಮತ್ತು ನಿರ್ವಾನ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಎಲ್ಲಾ ಸಾಧಕರು ಕಾರವಾರದ ಸ್ಟಾರ್ ಚಾಯ್ಸ್ ಡಾನ್ಸ್ ಅಕಾಡೆಮಿ ನೇತೃತ್ವದಲ್ಲಿ ತರಬೇತಿ ಪಡೆಯುತ್ತಿದ್ದು, ಸಾಧಕರನ್ನ ಉತ್ತರಕನ್ನಡ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಅಧ್ಯಕ್ಷರಾದ ರಾಜನ್ ಬಾನಾವಳಿಕರ್ ಅಭಿನಂದಿಸಿದ್ದಾರೆ. ಹಿರಿಯ ಸ್ಕೇಟಿಂಗ್ ತರಬೇತುದಾರ ದಿಲೀಪ್ ಹಣಬರ ಮತ್ತು ತರಬೇತುದಾರ ಸಚಿನ್ ದೇಸಾಯಿ ಇವರಿಗೆ ತರಬೇತಿ ನೀಡಿದ್ದರು. ಮುಂದೆ ಮಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ದೆಗೆ ಅರ್ಹರಾಗಿದ್ದಾರೆ.

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...