ಕಾರವಾರ: ವಿಶ್ವ ಜನಸಂಖ್ಯಾ ದಿನಾಚರಣೆ ಜುಲೈ-11

Source: jagadish vaddina | By Arshad Koppa | Published on 9th July 2017, 8:39 AM | Special Report | Guest Editorial |


ಮಾನವನ ಜೀವನವೇ ಇಂದು ದುರಂತದಂಚಿನಲ್ಲಿದೆ.

ನಮ್ಮ ಭಾರತ ದೇಶದಲ್ಲಿ ಮಹಾಭಾರತ ಕಾಲದಿಂದಲೂ ಸಹ ಜನಸಂಖ್ಯೆಯ ಸಮಸ್ಯೆ ಇತ್ತು. ಆ ಕಾಲದಲ್ಲಿ 5 ಜನ ಮಕ್ಕಳನ್ನು ಪಡೆಯುವ ಅವಕಾಶವಿತ್ತು (ಪಂಚ ಪಾಡವರು). ಮುಂದೆ ಜನಸಂಖ್ಯೆ ಪ್ರಮಾಣ ಹೆಚ್ಚಾದಂತೆ 3 ಮಕ್ಕಳನ್ನು ಪಡೆಯುವ ಅವಕಾಶ ನೀಡಿತು. “ಒಂದು ಎರಡು ಬೇಕು ಮೂರು ಮಕ್ಕಳು ಸಾಕು”. ಬರುಬರುತ್ತ ಜನಸಂಖ್ಯೆ ಪ್ರಮಾಣ ಇನ್ನೂ ಹೆಚ್ಚಾದಂತೆ 2 ಮಕ್ಕಳನ್ನು ಪಡೆಯುವ ಅವಕಾಶ ನೀಡಿತ್ತು. “ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ”. ಈಗ ಜನಸಂಖ್ಯೆ ಸ್ಪೋಟದಿಂದಾಗಿ ಒಂದೇ ಮಗುವನ್ನು ಪಡೆಯಲು ಅವಕಾಶವಿದೆ. “ಗಂಡಿರಲಿ ಹೆಣ್ಣರಲಿ ಮಗು ಒಂದೇ ಇರಲಿ”.


    ಒಂದು ಕೆರೆಯಲ್ಲಿ ಒಂದು ಕಮಲದ ಹೂ ಎರಡು ಆಗಲು ಒಂದೇ ದಿನ ಬೇಕು. ಅದೇ ರೀತಿ ಎರಡು ಕಮಲಗಳು ನಾಲ್ಕು ಆಗಲು ಒಂದೇ ದಿನಬೇಕು. ಅರ್ಧ ಕೆರೆಯಲ್ಲಿ ಇರುವ ಕಮಲಗಳು ಪೂರ್ಣ ಕೆರೆಯಾಗಲು ಬೇಕಾದ ದಿನವೂ ಒಂದೇ, ಈಗ ನಮ್ಮ ದೇಶದ ಜನಸಂಖ್ಯೆಯ ಪರಿಸ್ಥಿತಿಯೂ ಇದೆ ರೀತಿಯಾಗಿದೆ.“A crowded Society is a restrictive Society; on overcrowded society becomes an authoritarian, repressive and murderous Society”. 

    ಚೀನಾ ದೇಶವು ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೆ ಪ್ರಥಮ ಸ್ಥಾನದಲ್ಲಿದೆ. ಆದರೆ ಚೀನಾ ದೇಶದಲ್ಲಿ ಜನ ಸಂಪನ್ಮೂಲವನ್ನು ಸರಿಯಾಗಿ ಉಪಯೋಗಿಸಿಕೊಂಡು ಇಂದು ವಿಶ್ವದಲ್ಲಿಯೇ ಮುಂದುವರೆದ ಮೊದಲ ರಾಷ್ಟ್ರವಾಗಿದೆ. ನಮ್ಮ ಭಾರತ ದೇಶವು ಜನಸಂಖ್ಯೆಯಲ್ಲಿ ಎರಡನೇಯ ಸ್ಥಾನದಲ್ಲಿದೆ. ಜುಲೈ 2017 ರಲ್ಲಿ ವಿಶ್ವದ ಜನ ಸಂಖ್ಯೆ 7,516,464,800, ಭಾರತ ದೇಶದ ಜನಸಂಖ್ಯೆ 1,342,696,956 ಕರ್ನಾಟಕ ರಾಜ್ಯದ ಜನಸಂಖ್ಯೆ 66,805,106.
    ಇಂದಿನ ಯುಗ ಪ್ರಗತಿಯ ಮತ್ತು ಅಭಿವೃದ್ಧಿಶೀಲ ಯುಗವಾಗಿದೆ. ಮಾನವನ ಸಾಧನೆಗಳು ಜೀವನದ ಪ್ರತಿಯೊಂದು ಹಂತದಲ್ಲಿಯೂ ಚಿರಸ್ಮರಣೆಯವಾದಂತಹುಗಳಾಗಿವೆ. ವೈಜ್ಞಾನಿಕ ಪ್ರಗತಿಯ ಮಾನವನನ್ನು ಈ ವಿಶ್ವದ ಒಡೆಯನಾಗಿ ಮಾಡಿದರೂ, ಅವನು ಮಾತ್ರ ತನ್ನನ್ನು ತಾನೇ ನಿಯಂತ್ರಣಕ್ಕೊಳಪಡಿಸಿಕೊಳ್ಳುವುದು ಅಸಾಧ್ಯವಾಗಿದೆ. ಅವನ ನಿಯಂತ್ರಣಕ್ಕೊಳ ಪಡೆದಿರುವಂತೆ ಕೆಲವು ಸಮಸ್ಯೆಗಳಿವೆ. ಅವುಗಳಲ್ಲಿ ಜನಸಂಖ್ಯಾ ಸಮಸ್ಯೆಯು ಒಂದು. ಈ ಸಮಸ್ಯೆ ಜಗತ್ತಿನ ಬಹುತೇಕ ಭಾಗಗಳಲ್ಲಿ ಕಂಡು ಬರುವಂಥದು. ಜನಸಂಖ್ಯಾ ಸ್ಪೋಟವು ಮಾನವನ ಅಸ್ಥಿತ್ವದ ಬಗ್ಗೆ ಚಿಂತನಶೀಲರಾದ ಸಮಾಜ ಶಾಸ್ತ್ರಜ್ಞರಿಗೆ ಬಿಡಿಸಲಾಗದ ಒಗಟಾಗಿದೆ. ಇಂದಿನ ಯುಗದಲ್ಲಿ ಅಭಿವೃದ್ಧಿಯಾದ ವೈದ್ಯಕೀಯ ಸೌಲಭ್ಯವು ಮರಣದ  ಪ್ರಮಾಣಕ್ಕಿಂತ ಜನನ ಪ್ರಮಾಣ ಹೆಚ್ಚಾಗಿದೆ. ಜನಸಂಖ್ಯೆ ಬೆಳವಣ ಗೆಯ ಸಮಸ್ಯೆಯು ಮಾನವನ ಮೂಲಭೂತ ಸಮಸ್ಯೆಗಳಲ್ಲೊಂದಾಗಿದೆ. ಇದು ವ್ಯಕ್ತಿಯ ವೈಯಕ್ತಿಕ, ರಾಷ್ಟ್ರೀಯ, ಜಾಗತಿಕ ಪ್ರತಿಯೊಂದು ಅಂಶದಲ್ಲಿಯೂ ಧಕ್ಕೆಯನ್ನುಂಟು ಮಾಡುತ್ತಿದೆ. ಈ ಸಮಸ್ಯೆಯು ಆರೋಗ್ಯ, ಆಹಾರ, ವಸತಿ, ಉಡುಪು, ಶಿಕ್ಷಣ, ಸಂಪತ್ತು, ಸುಖ-ಸಂತೋಷ ಮತ್ತು ಆನಂದಗಳ ಮೇಲೆ ರಾಷ್ಟ್ರದ ಉನ್ನತಿ ಮತ್ತು ಪ್ರಗತಿ ಹಾಗೂ ಜಾಗತಿಕ ಭದ್ರತೆ ಮತ್ತು ಶಾಂತಿಯ ಮೇಲೆ ವಿಶೇಷ ಪರಿಣಾಮವನ್ನುಂಟು ಮಾಡುತ್ತದೆ.“Ozon depletion, lack of water and pollution are not the disease – they are the symptoms. The disease is over population. And  unless we face world population head-on, we are doing nothing more than sticking a Band-Aid on a fast-growing cancerous tumor”. ಜನಸಂಖ್ಯಾ ಸಮಸ್ಯೆಯಿಂದಾಗಿ ಪ್ರಪಂಚದ ಅನೇಕ ರಾಷ್ಟ್ರಗಳು ಆಹಾರ ಸಾಮಗ್ರಿಗಳ ಪೂರೈಕೆ, ಜೀವನಮಟ್ಟ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣ ಕ ಸಂಬಂಧಗಳು, ನೈಸರ್ಗಿಕ ಸಂಪನ್ಮೂಲಗಳು ಮತ್ತು ರಾಜಕೀಯವಾಗಿ ಸಮಸ್ಯೆಗಳಂದೊಡಗೂಡಿದೆ. ಹಾಗಾಗಿ ಕೆಲವು ಜನರಿಂದ ಮೇಲಿಂದ ಮೇಲೆ ಕೆಳಬರುತ್ತಿರುವ ಒಂದೇ ಒಂದು ಮಾತೆಂದರೆ “ಮಾನವನ ಜೀವನವೇ ಇಂದು ದುರಂತದಂಚಿನಲ್ಲಿದೆ.” ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಜನಸಂಖ್ಯಾ ನಿಯಂತ್ರಣ.“The chief cause for the impending collapse of the world-the cause sufficient in and by itself-is the enormous growth of the human population: the human flood. The worst enemy of life is too much  life: the excess of human life”.  
    ಜಾಗತಿಕ ಜನಸಂಖ್ಯೆಯ ಸಮಸ್ಯೆಗಳ ಅರಿವನ್ನು ಸಾಮಾನ್ಯ ಜನರಲ್ಲಿ ಮುಡಿಸಲು The Governing Council of the United nations development programme. ಆಡಳಿತ ಮಂಡಳಿಯು 1989 ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲು ಕರೇನೀಡಿತು.
    ವಿಶ್ವ ಜನಸಂಖ್ಯಾ ದಿನ ಆಚರಿಸುವ ಉದ್ದೇಶಗಳು :- “India is overpopulation, the world will soon be in the same condition, and if the self-reproduction of man is not rationalized. We shall have war.” ಈ ಆಂದೋಲನವು ಪ್ರತಿವರ್ಷ ವಿಶ್ವದಾದ್ಯಂತ ತಮ್ಮ ಸಂತಾನೋತ್ಪತ್ತಿ, ಆರೋಗ್ಯ ಮತ್ತು ಕುಟುಂಬ ಯೋಜನೆ ಕಡೆಗೆ ಜನರ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಹೆಚ್ಚಿದ ಜನಸಂಖ್ಯೆಯು ಕುಟುಂಬ ಯೋಜನೆಗೆ ಪ್ರಾಮುಖ್ಯತೆಯನ್ನು, ಲಿಂಗ ಸಮಾನತೆ, ತಾಯಿಯ ಮತ್ತು ಬೇಬಿ ಆರೋಗ್ಯ, ಬಡತನ ಬಗ್ಗೆ, ಮಾನವ ಹಕ್ಕುಗಳ ಬಗ್ಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಲೈಂಗಿಕ ಶಿಕ್ಷಣ, ಗರ್ಭ ನಿರೋಧಕಗಳು ಮತ್ತು ಕಾಂಡೋಮಗಳ ರೀತಿಯಲ್ಲಿ ಸುರಕ್ಷತಾ ಕ್ರಮಗಳು, ಸಂತಾನೋತ್ಪತ್ತಿ ಆರೋಗ್ಯ ವಯಸ್ಸಿನ ಗರ್ಭಧಾರಣೆಯ, ಹೆಣ್ಣು ಮಗುವಿನ ಶಿಕ್ಷಣ, ಬಾಲ್ಯ ವಿವಾಹ, ಲೈಂಗಿಕ ಸೋಂಕಿನಿಂದ ಹರಡುವ ರೋಗಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ. ಹದಿಹರೆಯ ಯುವಕರು ಹಾಗೂ ಯುವತಿಯವರಿಗೆ ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಡಲು ಸಾಧ್ಯವಾಗುತ್ತದೆ. ಅವರಿಗೆ ಲೈಂಗಿಕ ಮತ್ತು ವಿಳಂಬ ಮದುವೆ ಬಗ್ಗೆ ವಿವರ ಜ್ಞಾನ ನೀಡುವುದು ಸಮಂಜನಸವಾದ ಮತ್ತು ಯುವ ಸ್ನೇಹಿ ಕ್ರಮಗಳನ್ನು ಬಳಸಿಕೊಂಡು ಅನಗತ್ಯ ಗರ್ಭಧಾರಣೆ ತಡೆಯಲು ಯುವಕರಿಗೆ ತಿಳುವಳಿಕೆ ನೀಡುವುದು. “Ours is an overpopulated, Under educated, Shithole in the throes of mass extinctions-it’s a wonderful world.”
    ಭಾರತದ ಜನಸಂಖ್ಯಾ ಬೆಳವಣ ಗೆಗೆ ಕಾರಣಗಳು –
ಕೃಷಿ ಪ್ರಧಾನ ಉದ್ಯೋಗ, ಸಾಮಾಜಿಕ ಮೌಲ್ಯಗಳು, ಸ್ತ್ರೀಯರ ಸ್ಥಾನಮಾನ, ಅನಕ್ಷರತೆ, ಜನನ-ಮರಣ ಪ್ರಮಾಣದಲ್ಲಿಯ ಅಂತರ, ವೈವಾಹಿಕ ಸಂಪ್ರದಾಯ ಅಂತರ, ವಿವಾಹಿತ ಸ್ತ್ರೀಯರ ಫಲವತ್ತತೆ, ಸಂತಾನೋತ್ಪತ್ತಿ ಅವಧಿ, ಧಾರ್ಮಿಕ ಪ್ರಭಾವ, ಪುತ್ರ ವ್ಯಾಮೋಹ ಹಾಗೂ ಕುಟುಂಬ ಯೋಜನೆಯ ವ್ಯಾಫಲ್ಯ. Our object must be to bring our territory in to harmony with the numbers of our population”. 
    
ವಿಶ್ವ ಜನಸಂಖ್ಯಾ ದಿನಾಚರಣೆಯ ಉದ್ದೇಶ ಸಫಲವಾಗಬೇಕಾದರೆ, ವಿಶ್ವಮಾನವರೆಲ್ಲ ಜನಸಂಖ್ಯಾ ನಿಯಂತ್ರಣದಲ್ಲಿ ಸಹಕರಿಸಬೇಕು.
“You Cannot control your own population by force, but it can be distracted by consumption.”ಜನಸಂಖ್ಯಾ ನಿಯಂತ್ರಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಎಲ್ಲ ಸಮಸ್ಯೆಗಳ ಮೂಲ ಜನಸಂಖ್ಯೆ.

ಜಗದೀಶ ವಡ್ಡಿನ
                                         ಗ್ರಂಥಪಾಲಕರು
 ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ, ಕಾರವಾರ
ಮೊ: 9632332185
 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...