ಕಾರವಾರ:ವಿಶೇಷ ಲೇಖನ: ತಂಬಾಕು ರಹಿತ ದಿನಾಚರಣೆ ಮೇ-31

Source: jagadisha vaddina | By Arshad Koppa | Published on 30th May 2017, 11:37 AM | Special Report | Guest Editorial |

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ, ಗುಟಕಾ ಕೊಟ್ಟೆ ಮೇಲೆ WARNING “Tobacco Kills, Chewing Tobacco Not for Minors”, ಹಾಗು ಸಿಗರೇಟು ಪ್ಯಾಕಿನ ಮೇಲೆWarning “Smoking Kills” ಎಂದು ಬರೆದಿದ್ದರೂ ಸಹ ಬುದ್ಧಿವಂತ ಮಾನವ ಇದನ್ನು ಬರೆದಿದ್ದನ್ನು ಓದಿದ ಬಳಿಕವೂ ತಂಬಾಕು ಸೇವನೆ ಮಾಡುತ್ತಾನೆ. ಹಗಲು ಕಂಡ ಬಾವಿಗೆ ಬಿದ್ದಂತೆ ತಂಬಾಕು ಸೇವನೆಯನ್ನು ನಿಯಂತ್ರಿಸಲು ಸಮಗ್ರ ಕಾನೂನು ಇದ್ದರೂ ಕೂಡ ನಮ್ಮ ದೇಶದಲ್ಲಿ ತಂಬಾಕು ಸೇವನೆ ಸಾರ್ವಜನಿಕ ಜೀವನಕ್ಕೆ ಒಂದು ಗಂಭೀರ ಸವಾಲಾಗಿ ಪರಿಣಮಿಸಿದೆ. ಅಪಾರ ಪ್ರಮಾಣದಲ್ಲಿ ರೋಗರುಜಿನು ಹಾಗೂ ಸಾವು ನೋವುಗಳಿಗೆ ಕಾರಣವಾಗಿದೆ.
    ತಂಬಾಕನ್ನು ಪೋರ್ಚಗಿಸರು ಭಾರತದಲ್ಲಿ 16ನೇ ಶತಮಾನದಲ್ಲಿ ಪರಿಚಯಿಸಿದರು. ಇದೊಂದು ಹಾನಿಕಾರಕ ಪದಾರ್ಥ ಎಂದು ವೈದ್ಯರು ಸಂದೇಹಿಸಿದರಾದರೂ ತಂಬಾಕು ಶೀಘ್ರವೇ ಭಾರತದಲ್ಲಿ ಜನಪ್ರಿಯವಾಯಿತು. 17ನೇ ಶತಮಾನದಲ್ಲಿ ಜಹಂಗೀರ್ ಮಹಾರಾಜ ಧೂಮಪಾನ ನಿಷೇದ ಜಾರಿಗೆ ತಂದನಾದರೂ ಈ ಕಾಯ್ದೆ ಬಹುಕಾಲ ಉಳಿಯಲಿಲ್ಲ. ನಂತರ 1960ರ ದಶಕದಲ್ಲಿ ಬ್ರಿಟನ್ನಿನ ರಾಯಲ್ ಕಾಲೇಜ್ ಹಾಗೂ ಅಮೇರಿಕದ ಸರ್ಜನ್ ಜನರಲ್ ಸಲಹಾ ಸಮಿತಿ ನಡೆಸಿದ ಅಧ್ಯಯನಗಳು ತಂಬಾಕು ಹಾಗೂ ಕ್ಯಾನ್ಸರ್ ನಡುವಣ ಕಾರಣ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದವು. 1987ರಲ್ಲಿ ಜಾಗತಿಕ ಆರೋಗ್ಯ ಸಂಸ್ಥೆಯು ಮೇ 31 ರಂದು ತಂಬಾಕು ರಹಿತ ದಿನಾಚರಣೆ ಆಚರಿಸಲು ಕರೆ ನೀಡಿತು. 2017 ನೇ ಸಾಲಿನ ಉದ್ದೇಶ “Tobacco – a threat to Development ಇದರ ಅರ್ಥ “ತಂಬಾಕು – ಅಭಿವೃದ್ಧಿಗೆ ಬೆದರಿಕೆ”.


    ಭಾರತದ ಮಾರುಕಟ್ಟೆಯಲ್ಲಿ ತಂಬಾಕು ಒಳ್ಳೆಯ ಲಾಭಕಾರಿಯಾಗಿರುವುದರಿಂದ ನಮ್ಮ ದೇಶದ ಪ್ರಮುಖ ಗುರಿಯಾಗಿದೆ. ನಮ್ಮ ದೇಶದ 100 ಕೋಟಿಗು ಅಧಿಕ ಜನಸಂಖ್ಯೆಯಲ್ಲಿ ಅನೇಕ ಸಂಭಾವ್ಯ ಬಳಕೆದಾರರನ್ನು ಸೇರಿಸಿ 25 ಕೋಟಿ ಜನ ತಂಬಾಕನ್ನು ಉಪಯೋಗಿಸುತ್ತಾರೆ. ಜನಸಂಖ್ಯೆಯಲ್ಲಿ ಶೇಕಡಾ 50 ಕ್ಕಿಂತಲೂ ಹೆಚ್ಚು ಜನ ಯುವಕರಾಗಿರುವುದರಿಂದ ಯುವಕರನ್ನೆ ಹೆಚ್ಚು ಗುರಿಯಾಗಿಸಿಕೊಳ್ಳಲಾಗಿದೆ. ಯುವ ಬಳಕೆದಾರರು ಧೀರ್ಘ ಕಾಲದವರೆಗೆ ತಂಬಾಕನ್ನು ಬಳಸುತ್ತಾರೆ. ಅಂದಾಜಿನ ಪ್ರಕಾರ ಶೇಕಡಾ 70 ರಷ್ಟು ತಂಬಾಕಿನಿಂದ ಉಂಟಾಗುವ ಸಾವುಗಳು ಅಭಿವೃದ್ಧಿಶೀಲ ದೇಶಗಳಲ್ಲಿ ಆಗುತ್ತಿದೆ.
    ತಂಬಾಕಿನಲ್ಲಿರುವ ವಿಷಪೂರಿತ ರಾಸಾಯನಿಕ ವಸ್ತುಗಳು : 
ಸಿಗರೇಟ್ ಮತ್ತು ಬೀಡಿಗಳಲ್ಲಿ – ಅಮೋನಿಯಾ, ಅರ್ಸೆನಿಕ್, ಕಾರ್ಬನ್ ಮನೋಕ್ಸೈಡ್, ಹೈಡ್ರೋಜನ್ ಸೈನೈಡ್, ನಾಪ್ತಾಲಿನ್, ನೀಕೋಟಿನ್, ಟಾರ್, ವಿಕಿರಣವುಂಟು ಮಾಡಬಲ್ಲ ಮಿಶ್ರಣಗಳು.
ಜಗಿಯುವ ತಂಬಾಕು  -  ನಿಕೊಟಿನ್, ಅಡಿಕೆ, ಕ್ಯಾಡ್ಮಿಯಂ, ಫಾರ್ಮಾಲ್ಡಿಹೈಡ್, ಸುಣ್ಣ, ಮೆಂಥಾಲ್, ಸತು.
ತಂಬಾಕು ಸೇವನೆಯಿಂದ ಆಗುವ ಅನಾಹುತಗಳು :  ಜಾಗತಿಕವಾಗಿ ತಂಬಾಕು 5.4 ಮಿಲಿಯನ್ ಜನರನ್ನು ಸಾಯಿಸುತ್ತದೆ. ಪ್ರತಿ ವರ್ಷ 8 ರಿಂದ 9 ಲಕ್ಷ ಭಾರತೀಯರು ತಂಬಾಕು ಸಂಬಂಧಿ ರೋಗಗಳ ಕಾರಣ ಸಾವನ್ನಪ್ಪುತ್ತಾರೆ. 
ಭಾರತವು ಅತಿ ಹೆಚ್ಚು ಸಂಖ್ಯೆಯ ಬಾಯಿಯ ಕ್ಯಾನ್ಸರ್ ಪ್ರಸಂಗಗಳನ್ನು ಹೊಂದಿದೆ ಮತ್ತು ಶೇಕಡಾ 90 ರಷ್ಟು ಎಲ್ಲ ಬಾಯಿಯ ಕ್ಯಾನ್ಸರಗಳ ಕಾರಣವು ತಂಬಾಕಿಗೆ ಸಂಬಂಧಿಸಿದ್ದಾಗಿದೆ. 
ಭಾರತದಲ್ಲಿ ಎಲ್ಲ ಕ್ಯಾನ್ಸರ್‍ಗಳ ಶೇಕಡಾ 40 ರಷ್ಟು ಕಾರಣ ತಂಬಾಕು ಸೇವನೆ. 
ಭಾರತದಲ್ಲಿ ಧೂಮಪಾನದ ಕಾರಣದಿಂದ ಪ್ರತಿವರ್ಷ 10 ಲಕ್ಷ ಜನ ಸಾವಿಗಿಡಾಗುತ್ತಾರೆ. 
ಸಾಯುವ ಶೇಕಡಾ 70 ರಷ್ಟು ಧೂಮಪಾನಿಗಳು 30 ರಿಂದ 69 ವಯಸ್ಸಿನ ಒಳಗಿನವರಾಗಿರುತ್ತಾರೆ.
ತಂಬಾಕು ಸೇವನೆಯಿಂದ ಉಂಟಾಗುವ ಪ್ರಮುಖ ರೋಗಗಳು : 
    ಬಾಯಿಯ ಕ್ಯಾನ್ಸರ್, ಗ್ಯಾಂಗ್ರಿನ್, ಪುಪ್ಪಸದ ಕ್ಯಾನ್ಸರ್, ಹೃದ್ರೋಗ (ಕಾರ್ಡಿಯೋವಾಸ್ಕ್ಯುಲರ್ ಕಾಯಿಲೆ), ಶ್ವಾಸಕೋಶದ ಕಾಯಿಲೆಗಳು, ಧೀಘಕಾಲಿಕ ಶ್ವಾಸಕೋಶದ ಅಡಚಣೆಯ ಕಾಯಿಲೆ (ಓಪಿಡಿ) ಕಡಿಮೆ ತೂಕದ ಮಗುವಿನ ಜನನ, ಮೆದುಳಿನ ಸಂಕೋಚನ ಅಲ್ಜೈಮರ್ ಕಾಯಿಲೆ, ಕುರುಡುತನ, ನಾಳೀಯ ಬಾಹ್ಯಾವರಣದ ಕಾಯಿಲೆ ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ), ಎಂಫಿಸೀಮಾ (ಶ್ವಾಸಕೋಶದ ವಾಯುಕೋಶಗಳ ಊತಕ) ಪಾಶ್ರ್ಚವಾಯು, ನೆನಪಿನ ಶಕ್ತಿ ಕುಂದಿರುವುದು ಮತ್ತು ಜ್ಞಾನಗ್ರಹಣದ ಕಾರ್ಯಹೀನತೆ. ಇದು ನಪುಂಸಕತ್ವವನ್ನು ಸಹ ಉಂಟು ಮಾಡುತ್ತದೆ. ಧೂಮಪಾನ ಮಾಡುವ ಪುರುಷರಲ್ಲಿ ನಪುಂಸಕತ್ವ ಉಂಟಾಗುವಿಕೆಯು ಶೇಕಡಾ 85 ರಷ್ಟು ಹೆಚ್ಚಾಗಿರುತ್ತದೆ. ಧೂಮಪಾನವು ಎರಕ್ಟೈಲ್ ಡಿಸ್‍ಫಂಕ್ಷನ್‍ನ ಪ್ರಮುಖ ಕಾರಣವಾಗಿದೆ. ವೀರ್ಯದ ಸೆಲ್‍ಗಳನ್ನು ಧೂಮಪಾವು ಸಾಯಿಸುತ್ತದೆ. ಗರ್ಭದರಿಸಿರುವ ಧೂಮಪಾನಿಗಳಲ್ಲಿ ನಿರಂತರವಾಗಿ ಪದೇ ಪದೇ ಉಂಟಾಗುವ ಗರ್ಭಪಾತಕ್ಕೆ ಧೂಮಪಾನ ಮಹತ್ವದ ಕಾರಣವಾಗಿದೆ. ಇದು ಭ್ರೂಣದ ಆರೋಗ್ಯಕ್ಕೆ ಹಾನಿ ಮಾಡುವ ಅನೇಕ ಅಪಾಯಗಳಿಗೆ ಕೊಡುಗೆ ಸಲ್ಲಿಸುತ್ತದೆ. ಯುವಜನ ಮತ್ತು ತಂಬಾಕು ಸೇವನೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಪ್ರಕಾರ, ಇವತ್ತು ಧೂಮಪಾನ ಮಾಡುತ್ತಿರುವ 50 ಜನ ಹದಿವಯಸ್ಕರಲ್ಲಿ 50 ಜನ ತಂಬಾಕು ಸಂಬಂಧಿ ರೋಗಗಳ ಕಾರಣ ಸಾವಿಗೀಡಾಗುತ್ತಾರೆ.
ತಂಬಾಕು ಸೇವನೆಯನ್ನು ಬಿಡುವ ಕ್ರಮ :
    ತಂಬಾಕಿನ ಉಪಯೋಗವನ್ನು ಬಿಡುವುದಕ್ಕೆ ಯಾವಾಗಲೂ ಕಾಲಮೀರುವುದಿಲ್ಲ. ಜಾಹಿರಾತು, ಚಳುವಳಿಗಳು, ಧೂಮಪಾನ ಪ್ರತಿಬಂಧಕ ಕಾರ್ಯನೀತಿಗಳು ಮತ್ತು ತಂಬಾಕಿನ ಮೇಲೆ ತೆರಿಗೆಗಳು ತಂಬಾಕಿನ ನಿಲುಗಡೆಯನ್ನು ಪ್ರೋತ್ಸಾಹಿಸುವ ವ್ಯಾಪ್ತಿಯ ಕಾರ್ಯನೀತಿಯನ್ನು ಉಪಯೋಗಿಸಬಹುದು.
ಧೂಮಪಾನ ಸೇವನೆಯನ್ನು ಬಿಡುವ ಕ್ರಮ :
    ನಡುವಳಿಕೆ ಚಿಕಿತ್ಸೆ (Behavioral therapy), ಫಾರ್ಮಕೋಥೆರಪಿ, ಕೋಲ್ಡ್ ಟರ್ಕಿ ಧೂಮಪಾನವನ್ನು ಯಾವುದೇ ಮುಂದಾಲೋಚನೆ ಅಥವಾ ಪೂರ್ವತಯಾರಿ, ಧೂಮಪಾನದ ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡದೇ ಏಕಾ ಏಕಿ ಬಿಟ್ಟು ಬಿಡುವ ಕ್ರಿಯೆಗೆ ವಿಶ್ವದ್ಯಾದಂತ ಕೋಲ್ಡ್‍ಟರ್ಕಿ ಎನ್ನುವ ಶಬ್ದವನ್ನು ಅರ್ಥೈಸಲಾಗುತ್ತದೆ.
    ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಇರುವ ಸಂವಿಧಾನಿಕ ಜವಾಬ್ದಾರಿ ಹಾಗೂ ಉತ್ತಮ ಜೀವನದ ಹಕ್ಕನ್ನು ರಕ್ಷಿಸುವ ಕಾರಣದಿಂದಾಗಿಯೂ ತಂಬಾಕು ನಿಯಂತ್ರಣ ಕಾಯ್ದೆ ಅತ್ಯವಶ್ಯಕವಾಗಿದೆ.
ತಂಬಾಕು ಸೇವನೆಯ ನಿಯಂತ್ರಣ ಕಾಯಿದೆ-2013:
ಸೆಕ್ಷನ್ 4 :- ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದ, ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸಾರಿಗೆ, ಹೋಟೆಲ್, ರೆಸ್ಟೋರೆಂಟಗಳು, ಉದ್ಯಾನವನ, ಆಸ್ಪತ್ರೆ, ಶಾಲೆಗಳು ಇತ್ಯಾದಿ ಉಲ್ಲಂಘನೆ ರೂ. 200 ರವರೆಗೆ ದಂಡ.
ಸೆಕ್ಷನ್ 5 :- ಎಲ್ಲ ರೂಪಗಳ ನೇರ ಅಥವಾ ಪರೋಕ್ಷ ತಂಬಾಕು ಜಾಹಿರಾತುಗಳ ಮೇಲೆ ನಿಷೇದ, ಉಲ್ಲಂಘನೆಗೆ ರೂ. 1000 ದಂಡ ಅಥವಾ ಸೆರೆವಾಸ ಅಥವಾ ಎರಡನ್ನೂ ವಿಧಿಸಬಹುದು.
ಸೆಕ್ಷನ್ 6 :- 18 ವರ್ಷದೊಳಗಿನವರಿಗೆ ತಂಬಾಕಿನ ಉತ್ಪನ್ನಗಳ ಮಾರಾಟ ಮತ್ತು ಖರೀದಿಯ ಮೇಲೆ ನಿಷೇಧ ಉಲ್ಲಂಘನೆಗೆ ರೂ. 200 ರವರೆಗೆ ದಂಡ.
ಸೆಕ್ಷನ್ 7 :- ತಂಬಾಕಿನ ಉತ್ಪನ್ನಗಳ ಪ್ಯಾಕೇಜ್ ಮೇಲೆ ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳ ಚಿತ್ರಣ. ಉಲ್ಲಂಘನೆಗೆ ರೂ. 5000 ದಂಡ. ಅಥವಾ ಎರಡನ್ನೂ ವಿಧಿಸಬಹುದು.
     ತಂಬಾಕು ರಹಿತ ಸಮಾಜ ನಿರ್ಮಾಣದಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಸರಕಾರೇತರ ಸಂಘಟನೆಗಳ ಕಾರ್ಯಗಳು, ಕಾರ್ಯನೀತಿ ರೂಪಿಸುವುದು, ರಾಜಕೀಯ ಇಚ್ಛಶಕ್ತಿ, ತಂಬಾಕು ನಿಯಂತ್ರಣ ಕಾರ್ಯಕ್ರಮಗಳಿಗಾಗಿ ಸಮರ್ಪಣಾ ನಿಧಿಗಳು, ಮೂಲಭೂತ ಸೌಕರ್ಯ, ಗ್ರಾಮೀಣ, ಪಟ್ಟಣ, ಆರೋಗ್ಯ, ಪಂಚಾಯತ್, ಹಣಕಾಸು, ರೈಲ್ವೆ ಮುಂತಾದ ಇತರ ಸರ್ಕಾರಿ ಇಲಾಖೆಗಳೊಂದಿಗೆ ಸಹಯೋಗ, ತೆರಿಗೆ ಏರಿಸುವುದು, ತಂಬಾಕು ನಿಯಂತ್ರಣ ಮತ್ತು ಸಂಶೋಧನೆ. “ತಂಬಾಕು ಸೇವನೆ ಜೀವಗಳನ್ನು ಕೊಲ್ಲುತ್ತದೆ. ತಂಬಾಕು-ನಿಯಂತ್ರಣವು ಜೀವಗಳನ್ನು ಉಳಿಸುತ್ತದೆ.”
        
                                    ಜಗದೀಶ ವಡ್ಡಿನ
                                     ಗ್ರಂಥಪಾಲಕರು
                                ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
                                    ಬಾಡ, ಕಾರವಾರ
                                    ಮೊ: 9632332185

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...