ಕಾರವಾರ: ಒಂದು ಹೆಜ್ಜೆ ಸ್ವಚ್ಛತೆ ಕಡೆಗೆ- “ಸ್ವಚ್ಛ ಭಾರತ ಅಭಿಯಾನ”

Source: jagadish | By Arshad Koppa | Published on 12th September 2017, 8:14 AM | Coastal News | Special Report | Guest Editorial |

ಮಹಾತ್ಮಾಗಾಂಧೀಜಿ ಹಾಗೂ ನಮ್ಮ ಪ್ರಧಾನ ಮಂತ್ರಿಗಳ ಕನಸಿನ ಯೋಜನೆ “ಸ್ವಚ್ಛ ಭಾರತ ಅಭಿಯಾನ” ಯೋಜನೆಗೆ 2016 ಅಕ್ಟೋಬರ್ ಎರಡರ ಗಾಂಧಿ ಜಯಂತಿಯತಂದು ನಮ್ಮ ಪ್ರಧಾನಮಂತ್ರಿಗಳು ಚಾಲನೆ ನೀಡಿದರು.  “I am seeing that Gandhi is looking through these specs  that whether we have made India claen or not, what we have done and what we have done”.  ನಮ್ಮ ದೇಶ ಹಳ್ಳಿಗಳ ದೇಶ ಪ್ರತಿ ಹಳ್ಳಿಗಳಲ್ಲಿಯು ಅನೇಕ ದೇವಾಲಯಗಳಿವೆ ಆದರೆ ಹಳ್ಳಿಗಳಲ್ಲಿ ಶೌಚಾಲಯಗಳಿಲ್ಲ. ಇಂದಿಗೂ ನಮ್ಮ ತಾಯಂದಿರು ಮತ್ತು ಸಹೋದರಿಯರು ಬಯಲು ಶೌಚಾಲಯವನ್ನೇ ಅವಲಂಬಿಸಿರುವುದು ನೋವಿನ ವಿಷಯವಾಗಿದೆ. ಇದನ್ನು ಗಮನಿಸಿದ ನಮ್ಮ ಪ್ರಧಾನಮಂತ್ರಿಗಳು ಹೇಳಿದಂತೆ “ಪಹಲೆ ಶೌಚಾಲಯ್, ಫಿರ್ ದೇವಾಲಯ್”. ಗಾಂಧಿಜಿಯವರೂ ಸಹ ಶೌಚಾಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ಇಂದಿಗೂ ಶೇ.64 ರಷ್ಟು ಭಾರತಿಯರು ಬಲಯ ಶೌಚಾಲಯವನ್ನೇ ಅವಲಂಬಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅಪೌಷ್ಠಿಕತೆಗೆ ಇದೂ ಒಂದು ಕಾರಣವಾಗಿದೆ.  “Is cleaning only the responsibility of the  karmacharis? Do citizens have no role in this? We have to change this mindset”.

    ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವಬ್ಯಾಂಕ್ 150 ಕೋಟಿ ಡಾಲರ್ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. 2019ರ ಒಳಗೆ ಗ್ರಾಮೀಣ ಭಾರತದ ಎಲ್ಲ ನಾಗರಿಕರಿಗೆ ಶೌಚಾಲಯ ಸೌಲಭ್ಯ ಕಲ್ಪಿಸುವುದು ಮತ್ತು ಬಯಲು ಶೌಚ ರಹಿತ ಗ್ರಾಮ ನಿರ್ಮಾಣ ಸ್ವಚ್ಛ ಭಾರತ ಅಭಿಯಾನದ ಮುಖ್ಯ ಉದ್ದೇಶವಾಗಿದೆ. “Though it is a difficult task, it can be achieved and for that people will have to change their habits”.

    ನಮ್ಮ ದೇಶ ಚಂದ್ರ ಹಾಗೂ ಮಂಗಳ ಗ್ರಹಕ್ಕೆ ಉಪಗ್ರಹ ಹಾರಿಸುವ ಸಾಮಥ್ರ್ಯ ಪಡೆದಿದೆಯಾದರೂ ಅದಕ್ಕಿಂತ ಹೆಚ್ಚಿನ ಗಮನ ಶೌಚಾಲಯಕ್ಕೆ ನೀಡಬೇಕಾಗಿದೆ. “We reached Mars. No PM or Minister went. It was the people who did it, our scientists who did it. So can’t  we create a Clean India?”.. ಭಾರತದ ಮೂರನೇ ಎರಡರಷ್ಟು ಪ್ರಜೆಗಳು ಅತಿಸಾರ, ಮಲೇರಿಯಾ, ಟ್ರಕೋಮಾ ಮತ್ತು ಕರುಳಿನ ಭಾದೆಯಿಂದ ನರಳುತ್ತಿರುವುದು ಸರ್ವವಿಧಿತ. ಅದಕ್ಕೆ ಮುಖ್ಯ ಕಾರಣ ಬಡತನ, ಮನೆರಹಿತ ಸ್ಥಿತಿಯಿಂದ ಸೂಕ್ತವಾದ ಶೌಚಾಲಯವನ್ನು ಹೊಂದದೇ ಇರುವುದೇ ಆಗಿದೆ.
    ವಿಶ್ವಬ್ಯಾಂಕ್ ಅಂಕಿ ಅಂಶದ ಪ್ರಕಾರ ವಿಶ್ವದಾದ್ಯಂತ 240 ಕೋಟಿ ಜನರು ಶೌಚಾಲಯ ಸೌಲಭ್ಯ ಹೊಂದಿಲ್ಲ. ಈ ಪೈಕಿ ಶೇ. 80 ರಷ್ಟು ಜನರು ಭಾರತದ ಗ್ರಾಮೀಣ ಭಾಗದಲ್ಲಿದ್ದಾರೆ. ಗ್ರಾಮೀಣ ಭಾರತದ ಜನಸಂಖ್ಯೆಯಲ್ಲಿ ಐದು ಕೋಟಿಗೂ ಹೆಚ್ಚು ಜನ ಇಂದಿಗೂ ಬಯಲಿನಲ್ಲಿ ಮಲವಿಸರ್ಜನೆಗೆ ಹೋಗುವುದನ್ನೇ ರೂಢಿಸಿಕೊಂಡಿದ್ದಾರೆ. ಇದರಿಂದಾಗಿ ಅವರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಭಾರತದಲ್ಲಿ ಸಾವನ್ನಪ್ಪುವ ಪ್ರತಿ ಹತ್ತು ಮಂದಿಯಲ್ಲಿ ಒಬ್ಬರು ಸಾವು ನೈರ್ಮಲ್ಯ ಸಮಸ್ಯೆಯಿಂದ ಸಂಭವಿಸುತ್ತದೆ. ಅಲ್ಲದೆ ಕಡಿಮೆ ಆದಾಯ ಹೊಂದಿರುವವರು ಶೌಚಾಲಯ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವ ಅಂಶ ಅಧ್ಯಯನದಿಂದ ಗೊತ್ತಾಗಿದೆ ಎಂದು ವಿಶ್ವಬ್ಯಾಂಕ್‍ನಲ್ಲಿನ ಭಾರತದ ನಿರ್ದೇಶಕ ಒನ್ನೊ ರುಲ್ಡ್ ಹೇಳಿದ್ದಾರೆ.
    ಇಂದಿಗೂ ಸಹ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ, ಶಾಲಾ, ಕಾಲೇಜುಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಅಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಶಾಲೆಗೆ ನೀರು ಕುಡಿಯದೇ ಶಾಲೆಗೆ ಬರುತ್ತಾರೆ. ಏಕೆಂದರೆ ಅಲ್ಲಿ ಯಾವುದೇ ಶೌಚಾಲಯದ ವ್ಯವಸ್ಥೆ ಇಲ್ಲ. ಇನ್ನು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಶೌಚಾಲಯ ವ್ಯವಸ್ಥೆ ಇದೆ, ಆದರೆ ದುರ್ವಾಸನೆಯಿಂದ ಕೂಡಿದ್ದು ಅದನ್ನು ಶುಚಿಪಡಿಸಲಾಗುತ್ತಿಲ್ಲ. ನಗರದ ಮಹಿಳೆಯರು ಉಪಯೋಗಿಸುವ ಸಾರ್ವಜನಿಕ ಶೌಚಲಯಗಳು ಅವ್ಯವಸ್ಥೆಯ ಗೂಡಾಗಿದ್ದು ಮಹಿಳೆಯರಿಗೆ ಮಾನ ಕಾಪಾಡಿಕೊಳ್ಳುವುದೇ ಒಂದು ಸಮಸ್ಯೆಯಾಗಿದೆ. ನಮ್ಮ ರಾಜ್ಯದಲ್ಲಿ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರು ಹೇಳುವಂತೆ ಕತ್ತಲಾದ ಮೇಲೆ ಬಹುದೂರ ನಡೆದು ದೇಹಬಾಧೆ ತೀರಿಸಿಕೊಳ್ಳಬೇಕಾಗುವುದು ಎಷ್ಟು ಕಷ್ಟ ?
    ಭಾರತದಲ್ಲಿ ಶೌಚಾಲಯದ ಪರಿಸ್ಥಿತಿಯನ್ನೊಮ್ಮೆ ಪರಿಶೀಲಿಸೋಣ. ಶೇ. 64ರಷ್ಟು ಭಾರತಿಯರು ಬಯಲು ಶೌಚಾಲಯವನ್ನು ಅವಲಂಬಿಸಿದ್ದಾರೆ. ಭಾರತದ ಶೇ. 0.02ರಷ್ಟು ಮಾತ್ರ ಶೌಚಾಲಯಕ್ಕೆ ಬಜೆಟ್‍ನಲ್ಲಿ ಮೀಸಲಾಗಿರಿಸಲಾಗಿದೆ. ಇತ್ತೀಚಿನ ಮನೆಗಣತಿಯ ಪ್ರಕಾರ ಕೇವಲ ಪ್ರಸ್ತುತ ಇರುವ 2,46,692,667 ಮನೆಗಳಲ್ಲಿ ಕೇವಲ 8.71 ಕೋಟಿ ಮನೆಗಳಲ್ಲಿ ಮಾತ್ರ ಶೌಚಾಲಯ ವ್ಯವಸ್ಥೆಯಿದೆ. ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಸ್ವಾಸ್ಥ್ಯ ಪರಿಪಾಲನೆಗೆ 45 ಸಾವಿರ ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. 2017ರವರೆಗೆ 1.08 ಲಕ್ಷ ಕೋಟಿ ರೂ.ಗಳನ್ನು ಸ್ವಾಸ್ಥ್ಯ ಪರಿಪಾಲನೆಗಾಗಿ ವೆಚ್ಚ ಮಾಡಲಾಗುವುದು. “Cleaning up the country cannot be the sole responsibility of sweepers. Do  citizens have no role in this? We have to change this mindset.”

    ಭಾರತದಲ್ಲಿ ಸುಮಾರು ಪ್ರಮುಖ ನಗರಗಳ ಮಲಮೂತ್ರವನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಜನ ಕಲುಷಿತ ನೀರನ್ನು ಕುಡಿದು, ಅನಾರೋಗ್ಯದಿಂದ ಬಳಲುತ್ತಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 8.7 ಕೋಟಿ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ 2011ರ ಗಣತಿಯ ರೀತ್ಯಾ ವಾಸ್ತವದಲ್ಲಿ ನಿರ್ಮಾಣವಾದ ಶೌಚಾಲಯಗಳು ಕೇವಲ 5.16 ಕೋಟಿ ಶೌಚಾಲಯಗಳು. ಹಾಗಾದರೆ ಉಳಿದ 3.5 ಕೋಟಿ ಶೌಚಾಲಯಗಳೆಲ್ಲಿ? ಎಂಬುದಕ್ಕೆ ಸಮಂಜಸ ಉತ್ತರವಿಲ್ಲ. ಬಯಲಿನಲ್ಲಿ ಮಲವಿಸರ್ಜನೆ ಮಾಡುವುದರಿಂದ ಇಂಗಾಲದ ಡೈ ಆಕ್ಸೈಡಗಿಂತ ಹಾನಿಕರವಾದ ಮಿಥೇನ್ ಅನಿಲ ಬಿಡುಗಡೆ ಮಾಡುತ್ತದೆ. ಪಶ್ಚಿಮ ಬಂಗಾಳ ಒಂದರಲ್ಲೇ ಪ್ರತಿನಿತ್ಯ 19,800 ಕಿ.ಗ್ರಾಂ ಮಿಥೇನ್ ಅನಿಲ ಬಿಡುಗಡೆಯಾಗುತ್ತದೆ. ಇದು ಮಾನವನ ಆರೋಗ್ಯದ ಮೇಲೆ ತುಂಬ ದುಷ್ಪರಿಣಾಮ ಬಿರುತ್ತದೆ. 
    ಮೇಲ್ಕಂಡ ಅಂಶಗಳನ್ನು ಗಮನಿಸಿದಾಗ ಶೌಚಾಲಯದ ಸಮಸ್ಯೆಗಳು ಅದೇಷ್ಟು ಘೋರ ಎಂದು ತಿಳಿದುಬರುತ್ತದೆ. ಇದಕ್ಕೆಲ್ಲ ಇರುವ ಏಕೈಕ ಪರಿಹಾರವೆಂದರೆ, ಪ್ರತಿಯೊಬ್ಬರೂ ಶೌಚಾಲಯವನ್ನು ಕಟ್ಟಿಸಿಕೊಳ್ಳುವುದು. ಕೆಲವೆಡೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಗಂಡಿನ ಮನೆಯಲ್ಲಿ ಶೌಚಾಲಯವಿರಬೇಕೆಂದು ಷರತ್ತು ವಿಧಿಸಲಾಗುತ್ತಿದೆ. ಕೆಲವಂದು ವಿದ್ಯಾರ್ಥಿನಿಯರು ಮನೆಯಲ್ಲಿ ಶೌಚಾಲಯ ಕಟ್ಟಿದರೆ ಮಾತ್ರ ಶಾಲೆಗೆ ಹೋಗುತ್ತೇವೆ ಎಂದು ಪಾಲಕರಿಗೆ ಷರತ್ತು ವಿಧಿಸಲಾಗುತ್ತಿದೆ.
    ನಮ್ಮ ಪರಿಸರವನ್ನು ನಾವು ಸುಂದರವಾಗಿ ಮತ್ತು ಶುಚಿಯಾಗಿ ಇಡಬೇಕು. “Every road, path, office, home, hut, stream and particle of air around us can and must be kept clean”.. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಮನೆಕಸವನ್ನು ವಿರ್ಧಿಷ್ಟ ಪಡಿಸಿದ ಸ್ಥಳದಲ್ಲಿ ಹಾಕಬೇಕು. ಅಥವಾ ಕಸ ಸಂಗ್ರಹಿಸುವವರಿಗೆ ನೀಡಬೇಕು. ಈಗ ಕಸದಿಂದ ರಸ ತೆಗೆಯುವ ಪ್ರಯತ್ನಗಳೂ ಅಲ್ಲಲ್ಲಿ ನಡೆಯುತ್ತಿದೆ. ಸಾವಯವ ಗೊಬ್ಬರ ತಯಾರಿಸಲು ಕೆಲವಡೆ ಬಳಕೆಯಾಗುತ್ತಿದೆ. ಚರಂಡಿ ನೀರಿನ ಪುನರ್ ಶುದ್ಧಿಕರಣ ಘಟಕಗಳು ಸ್ಥಾಪನೆಯಾಗುತ್ತಿವೆ. ಕೆಲವೊಂದು ಬಸ್ ನಿಲ್ದಾಣದಲ್ಲಿ, ಬಸ್ ನಿಲ್ದಾಣಕ್ಕೆ ಬೇಕಾದ ವಿದ್ಯುತನ್ನು ಬಸ್ ನಿಲ್ದಾಣದ ಶೌಚಾಲಯಗಳಿಂದಲೆ ಪಡೆಯಲಾಗುತ್ತಿದೆ. ಎಲ್ಲರೂ ತಮ್ಮ ತಮ್ಮ ಮನೆಯ ಶೌಚಾಲಯದಿಂದ ಬಯೋಗ್ಯಾಸ್ ಮತ್ತು ವಿದ್ಯುತ್‍ನ್ನು ತಮ್ಮ ತಮ್ಮ ಮನೆಗೆ ಪಡೆದರೆ ಉರುವಲು ಮತ್ತು ವಿದ್ಯುತ್ ಸಮಸ್ಯೆ ಇಂದ ಪಾರಾಗಬಹುದು. ರೈತರು ವ್ಯವಸಾಯದಲ್ಲಿ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಉಪಯೋಗಿಸುವ ಬದಲು ಕಸದಿಂದ ತಯಾರಿಸಿದ ಸಾವಯವ ಗೊಬ್ಬರವನ್ನೇ ಉಪಯೊಗಿಸಬೇಕು. ನಾವು ಮೊದಲು ಪರಿಸರ ಪ್ರಜ್ಞೆಯನ್ನು ಬೆಳಿಸಿಕೊಳ್ಳೋಣ ಮತ್ತು ಸ್ವಚ್ಛಭಾರತ ನಿರ್ಮಾಣದಲ್ಲಿ ಸಕ್ರೀಯವಾಗಿ ತೊಡಗೋಣ. “Devote 100 hours every year towards the cause of cleanliness.”

    ಸ್ವಚ್ಛ ಭಾರತ ಅಭಿಯಾನ ಜಾರಿಯಿಂದ ಬಡ ಮತ್ತು ಅದರಲ್ಲೂ ಗ್ರಾಮೀಣ ಭಾರತದಲ್ಲಿ ನೆಲೆಸಿರುವ ದುರ್ಬಲರಿಗೆ ಆರೋಗ್ಯದ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಉತ್ತಮ ಸಾಧನೆ ಮಾಡಿದ ರಾಜ್ಯಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಸ್ವಭಾವ ಬದಲಾವಣೆಯತ್ತ ಗಮನ ನೀಡುವುದು ಈ ಯೋಜನೆಯ ಪ್ರಮುಖ ಅಂಶಗಳು ಎಂದಿದ್ದಾರೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಈ ಯೋಜನೆಯ ಮೇಲ್ವಿಚಾರಣೆ ನೋಡಿಕೊಳ್ಳಲಿವೆ. ಶೌಚಾಲಯ ಬಳಸಲು ಗ್ರಾಮೀಣ ಭಾರತೀಯರಲ್ಲಿ ಅರಿವು ಮೂಡಿಸುವ ಸಮುದಾಯ ಸ್ವಭಾವ ಬದಲಾವಣೆ ಕಾರ್ಯಕ್ರಮಕ್ಕೂ ವಿಶ್ವಬ್ಯಾಂಕ್ 250 ಲಕ್ಷ ಡಾಲರ್ ತಾಂತ್ರಿಕ ನೆರವನ್ನೂ ನೀಡಲಿದೆ.“It is our social responsibility as citizens of India to help fulfil Gandhiji’s vision of clean India, by his 150th birth anniversary in 2019”.

ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ, ಕಾರವಾರ
ಮೊ: 9632332185
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...