ಕಾರವಾರ: ರೋಟರಿ ಕ್ಲಬ್ ವತಿಯಿಂದ ಪುಸ್ತಕಗಳ ಕೊಡುಗೆ

Source: rotary club karwar | By Arshad Koppa | Published on 21st June 2017, 8:04 AM | Coastal News | Special Report | Guest Editorial |

ಕಾರವಾರ: ರೋಟರಿ ಕ್ಲಬ್ ಮಣ ಪಾಲ ಟೌನ್, ರೋಟರಿ ಕ್ಲಬ್ ಉಡುಪಿ ಮಣಿಪಾಲ, ಮಾಹೆ ಯುನಿವರ್ಸಿಟಿ ಮಣಿಪಾಲದ ಸ್ಕೂಲ ಆಫ್ ಮೆನೇಜ್ಮೆಂಟ್ (ಎಸ್.ಓ.ಎಂ.) ಮತ್ತು ಟಿ.ಎ.ಪೈ ಮೆನೆಜ್ಮೆಂಟ್ ಇಂಸ್ಟಿಟ್ಯೂಟ್ (ಟ್ಯಾಪ್ಮಿ) ಸಂಸ್ಥೆ ಇವರ ಸಂಯುಕ್ತ ಆಶ್ರಯದ ಜೊತೆಗೆ  ಕಾರವಾರ ರೋಟರಿ ಕ್ಲಬ್ ನೆರವಿನಲ್ಲಿ ಸರಕಾರಿ ಕಲಾ, ವಿಜ್ಞಾನ ಮತ್ತು ಕಾಮರ್ಸ ಕಾಲೇಜ ಕಾರವಾರ ಇಲ್ಲಿಗೆ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಬಡಮಕ್ಕಳ ಶಿಕ್ಷಣ ಸೌಲಭ್ಯಕ್ಕಾಗಿ ದೇಣಿಗೆ ನೀಡಲಾಯಿತು.  ಈ ಪುಸ್ತಕಗಳಲ್ಲಿ ಅನೇಕ ಪುಸ್ತಕಗಳು ವಿದೇಶಿ ಎಡಿಷನ್ ಪುಸ್ತಕಗಳು ಆಗಿದ್ದು ಒಂದೊಂದು ಪುಸ್ತಕವೂ ಸಾವಿರ ರೂಪಾಯಿ ಮೌಲ್ಯದ್ದಾಗಿದೆ.  

ಮಾಹೆ ಯುನಿವರ್ಸಿಟಿ ಮಣಿಪಾಲದ ಸ್ಕೂಲ ಆಫ್ ಮೆನೇಜ್ಮೆಂಟ್ (ಎಸ್.ಓ.ಎಂ.) ಮತ್ತು ಟಿ.ಎ.ಪೈ ಮೆನೆಜ್ಮೆಂಟ್ ಇಂಸ್ಟಿಟ್ಯೂಟ್ (ಟ್ಯಾಪ್ಮಿ) ಸಂಸ್ಥೆಗಳು ಸಂಗ್ರಹಿಸಿ ಕೊಡಮಾಡಿದ  ಸುಮಾರು ರೂ. 20.00 ಲಕ್ಷ ಮುಖಬೆಲೆಯ  3200 ಸಂಖ್ಯೆಯ ವಾಣ ಜ್ಯ ವಿಭಾಗಕ್ಕೆ ಸಂಬಂಧಿಸಿದ ಟೆಕ್ಸ್ಟ್ (ಪಠ್ಯ) ಪುಸ್ತಕಗಳನ್ನು ಉತ್ತರ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ತೆರಳಿ ಹಂಚುವ ಕಾರ್ಯ ಮಾಡುತ್ತಿದೆ.  ಶಿಕ್ಷಣ ಮುಗಿದ ತರುವಾಯ ವಿದ್ಯಾರ್ಥಿಗಳು ಉಪಯೋಗಿಸಿ ಹಿಂದಕ್ಕೆ ಉಚಿತವಾಗಿ ನೀಡಿದ ಪುಸ್ತಕಗಳೊಂದಿಗೆ ಹಲವಾರು ದಾನಿಗಳಿಂದ ಸಂಗ್ರಹಿಸಿದ ಕಾರ್ಯಕ್ಕೆ ಎಸ್.ಓ.ಎಂ. ಸಂಸ್ಥೆ ಪ್ರೇರಣೆ ನೀಡುತ್ತಿದೆ.  ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಶನ್ ಸಂಸ್ಥೆಯು ಸ್ವಯಂ ಪ್ರೇರಿತವಾಗಿ ನೆರೆಯ ಜಿಲ್ಲೆಯಲ್ಲಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದೆ. 
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರ ಡಿಗ್ರಿ ಕಾಲೇಜುಗಳಿಗೆ ಪುಸ್ತಕಗಳನ್ನು ಈ ವರ್ಷ ನೀಡಿದ್ದೇವೆ ಎಂದು ರೋಟರಿ ಕ್ಲಬ್ ಮಣಿಪಾಲ ಟೌನ್‍ನ ಅಧ್ಯಕ್ಷ ರೋ. ಸಚ್ಚಿದಾನಂದ ವಿ. ನಾಯಕ ತಿಳಿಸಿದರು.  
ಮುಂಬರುವ ಪ್ರತೀ ವರ್ಷವೂ ಇದೇ ರೀತಿ ಮೆನೆಜ್‍ಮೆಂಟ್, ಅಕೌಂಟನ್ಸಿ, Human Resource Management, Project Management ಮುಂತಾದ ಪುಸ್ತಕಗಳನ್ನು ನೀಡುವುದಾಗಿ ಸ್ಕೂಲ್ ಆಪ್ ಮೆನೆಜಮೆಂಟ್ ಮಣ ಪಾಲ, ನಿರ್ದೇಶಕರಾದ  ರವಿಂದ್ರನಾಥ ನಾಯಕ ತಿಳಿಸಿದರು, ಕಾರ್ಯಕ್ರಮದಲ್ಲಿ  ರೋಟರಿ ಕ್ಲಬ್ ಮಣಿಪಾಲ ಟೌನ್ ಸದಸ್ಯ  ರೋ. ಡಾ|| ಶೇಷಪ್ಪ ರೈ ಹಾಗೂ ಕಾರವಾರದ ನಿವೃತ್ತ ತಹಶೀಲ್ದಾರ ಮಧುಕರ ನಾಯಕ ಹಾಗೂ  ಕಾರವಾರ ಉಪತಹಶೀಲ್ದಾರ ಪರಸಪ್ಪ ನಾಯ್ಕ ಉಪಸ್ಥಿತರಿದ್ದರು. ಡಿಗ್ರಿ ಕಾಲೇಜಿನ ಪ್ರಾಧ್ಯಾಪಕರಾದ ಡಾ|| ವಿ.ಎಂ.ಗಿರಿ ಸರ್ ರವರು ಪುಸ್ತಕಗಳನ್ನು ಕಾಲೇಜಿನ ಪರವಾಗಿ ಸ್ವೀಕರಿಸಿದರು.  ಈ ಸಂದರ್ಭದಲ್ಲಿ ಕಾರವಾರ ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಅಮರನಾಥ ಶೆಟ್ಟಿ ಎಲ್ಲರಿಗೂ ಸ್ವಾಗತಿಸಿದರು.  ಕಾರ್ಯದರ್ಶಿ ರೋ. ಅನಮೋಲ ರೇವಣಕರ, ಸದಸ್ಯರುಗಳಾದ  ರೋ. ಎಲ್. ಎಸ್. ಫರ್ನಾಂಡಿಸ್, ರೋ. ಸುರೇಶ ನಾಯ್ಕ, ರೋ. ಸುನೀಲ ಸೋನಿ, ರೋ. ರಾಜೇಶ ವೆರ್ಣೇಕರ, ರೋ. ರಾಘವೇಂದ್ರ ಪ್ರಭು, ರೋ. ಕೃಷ್ಣಾ ಕೇಳಸ್ಕರ,  ರೋ. ಡಾ|| ಸಮೀರಕುಮಾರ ನಾಯಕ, ರೋ. ಶ್ಯಾಮ ಸೈಲ್ ಹಾಗೂ ಇನ್ನರ್‍ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಅರ್ಚನಾ ಶೆಟ್ಟಿ ಮತ್ತು ಶ್ರೀಮತಿ ರಾಧಿಕಾ ವೆರ್ಣೇಕರ ಭಾಗವಹಿಸಿದ್ದರು.   

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...