ಮಕ್ಕಳ ಪಾಲನೆ ರಕ್ಷಣೆಗೆ ಸಂಬಂದಿಸಿದಂತೆ ಮಕ್ಕಳ ಗುರುತು ಬಹಿರಂಗ ಪಡಿಸದಿರುವ ಬಗ್ಗೆ

Source: S O News | By I.G. Bhatkali | Published on 18th October 2023, 9:14 PM | Coastal News | Don't Miss |

ಕಾರವಾರ:  ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015 ತಿದ್ದುಪಡಿ ಕಾಯ್ದೆ 2021 ಹಾಗೂ ಮಾದರಿ ನಿಯಮ 2016 ತಿದ್ದುಪಡಿ ನಿಯಮಗಳು 2022 ಸೆಕ್ಷನ್ 74(1) ರನ್ವಯ,  ಕಾಯ್ದೆಯೊಂದಿಗೆ ಸಂಘರ್ಷದಲ್ಲಿರುವಂತಹ ಮಗುವಿನ ಅಥವಾ ಪಾಲನೆ ಮತ್ತು ಸಂರಕ್ಷಣೆಯ ಅಗತ್ಯವಿರುವಂತಹ ಮಗುವಿನ ಅಥವಾ ಸಂತ್ರಸ್ಥ ಮಗುವಿನ ಅಥವಾ ಅಪರಾಧದ ಸಂಬಂದ ಸಾಕ್ಷಿಯಾಗಿರುವ ಗುರುತನ್ನು ತಿಳಿಸಬಹುದಾದ ಹೆಸರು, ವಿಳಾಸ, ಶಾಲೆ, ಇನ್ನೀತರ ವಿವರಗಳು ಅಥವಾ ಮಗುವಿನ ಭಾವಚಿತ್ರವನ್ನು,  ವೃತ್ತ ಪತ್ರಿಕೆಯಲ್ಲಿ, ನಿಯತಕಾಲಿಕವಾಗಲಿ ಅಥವಾ ದೃಶ್ಯ ಶ್ರವಣ ಮಾಧ್ಯಮಗಳಲ್ಲಿ ಅಥವಾ ಸಾಮಾಜಿಕ ಜಾಲ ತಾಣಗಳಲ್ಲಿ ಅಥವಾ ಸಂವಹನದ ಇನ್ನಿತರ ವಿಧಗಳಲ್ಲಿ ಪ್ರಕಟಿಸುವಂತಿಲ್ಲ.

ಒಂದು ವೇಳೆ ಪ್ರಕಟವಾದ್ದಲ್ಲಿ, ಪ್ರಕಟಪಡಿಸಿದವರ ವಿರುದ್ಧ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015 ತಿದ್ದುಪಡಿ ಕಾಯ್ದೆ 2021 ಹಾಗೂ ಮಾದರಿ ನಿಯಮ 2016 ತಿದ್ದುಪಡಿ ನಿಯಮಗಳು 2022 ಸೆಕ್ಷನ್ 74(3) ಉಪಪ್ರಕರಣ (1) ನ್ನು ಉಲ್ಲಂಘಿಸುವಂತಹ ಯಾರೇ ವ್ಯಕ್ತಿಯು ಆರು ತಿಂಗಳವರೆಗೆ ವಿಸ್ತರಿಸಲ್ಪಡಬಹುದಾದ ಕಾರಾಗೃಹ ದಂಡನೆ ಅಥವಾ 2 ಲಕ್ಷ ರೂ ವಿಸ್ತರಿಸಲ್ಪಡಬಹುದಾದ ಜುಲ್ಮಾನೆ ಅಥವಾ ಉಭಯ ಶಿಕ್ಷೆಗಳಿಗೂ ಸಹ ದಂಡನೀಯರಾಗಲಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...