ಭಟ್ಕಳ ಪೊಲೀಸ್ ವಿಭಾಗಕ್ಕೆ ಹೊಸ ಎಎಸ್ಪಿ:ಐಪಿಎಸ್ ಅಧಿಕಾರಿ ಸ್ವೀಕಾರ'

Source: so news | Published on 7th September 2019, 12:34 AM | Coastal News | Don't Miss |


ಭಟ್ಕಳ: 2017ರ ಬ್ಯಾಚಿನ ಐಪಿಎಸ್ ಅಧಿಕಾರಿಯು ಭಟ್ಕಳ ಉಪವಿಭಾಗದ ನೂತನ ಎಎಸ್ಪಿಯಾಗಿ ಚಿತ್ರದುರ್ಗ ಮೂಲದ ಐಪಿಎಸ್ ಅಧಿಕಾರಿ ನಿಖಿಲ್ ಬುಳ್ಳಾವರ ಅವರು ಗುರುವಾರದಂದು ಅಧಿಕಾರ ಸ್ವೀಕರಿಸಿದ್ದಾರೆ.
ಭಟ್ಕಳದ ಡಿವೈಎಸ್ಪಿ ಕಚೇರಿಯಲ್ಲಿ ನಿರ್ಗಮನ ಡಿವೈಎಸ್ಪಿ ವೆಲೈಂಟೈನ್ ಡಿಸೋಜಾ ಅವರು ಮಂಗಳುರು ಐ.ಜಿ.ಪಿ. ಕಚೇರಿಗೆ ವರ್ಗಾವಣೆಗೊಂಡಿದ್ದು ನಿಖಿಲ್ ಬುಳ್ಳಾವರ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. 
ಚಿತ್ರದುರ್ಗ ಮೂಲದ ನಿಖಿಲ್ ಬುಳ್ಳಾವರ ಅವರು ತರಬೇತಿ ಮುಗಿಸಿದ ಬಳಿಕ ರಾಯಚೂರಿನಲ್ಲಿ ಪ್ರೊಬೇಶನರಿ ಎಎಸ್ಪಿಯಾಗಿ ಸೇವೆಗೆ ಸೇರಿದ್ದರು. ಲೋಕಸಭಾ ಚುನಾವಣಾ ನಿಮಿತ್ತ ಬಂದೋಬಸ್ತಗೆ ಕೊಪ್ಪರ ಗ್ರಾಮದ ಮತಗಟ್ಟೆಯು ಅತೀ ಸೂಕ್ಷ್ಮ ಮತಗಟ್ಟೆ ಹಿನ್ನೆಲೆ ತೆರಳಿದ ಇವರು ಮಕ್ಕಳೊಂದಿಗೆ ಬಿಸಿಯೂಟ ಸವಿದು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಮಾಡಿ ಸರಳತೆಯನ್ನು ಮೆರೆದಿರುವದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 
ಎರಡು ತಿಂಗಳು ಹೈದರಬಾದಿನಲ್ಲಿ ಎರಡನೇ ಹಂತದ ತರಬೇತಿ ಮುಗಿಸಿ ಭಟ್ಕಳ ಉಪವಿಭಾಗದ ಎಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. 

ಬೆಂಗಳೂರಿನ ಬಿ.ಎಮ್.ಎಸ್. ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡಿ ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ಬರೆದಿದ್ದರು.

2014 ರಲ್ಲಿ ತಮ್ಮ ಸಿವಿಲ್‌ ಸರ್ವಿಸ್ ಸೇವೆ ಆರಂಭಿಸಿದ ಇವರು 2017 ಡಿಸೆಂಬರನಲ್ಲಿ ಸಿವಿಲ್ ಸೇವೆಗೆ ಆಯ್ಕೆಯಾಗಿದ್ದರು. ನಂತರ 2015ರ ಮೊದಲ ಹಂತದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗದ ಹಿನ್ನೆಲೆ 2016ರ ಪರೀಕ್ಷೆಯ ಎರಡನೇ ಅವಧಿಯಲ್ಲಿ ಐ.ಪಿ.ಎಸ್.‌ಪರೀಕ್ಷೆಯನ್ನು 107ನೇ ರ್ಯಾಂಕನಲ್ಲಿ ತೇರ್ಗಡೆ ಹೊಂದಿದ್ದು, ಇದೀಗ ಭಟ್ಕಳ ಉಪವಿಭಾಗಕ್ಕೆ ಐಪಿಎಸ್ ಅಧಿಕಾರಿಯಾಗಿ ಅಧಿಕಾರ ವಹಿಸಿದ್ದಾರೆ.‌
ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ತಮ್ಮ‌ ವಿಭಾಗದ ಎಲ್ಲಾ ಠಾಣೆಗೆ ತೆರಳಿ ಪೋಲೀಸರ ಕಾರ್ಯ ವೈಖರಿಯನ್ನು ಪರಿಶೀಲನೆ ಮಾಡಿದ್ದಾರೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...