ಕಾರವಾರ: ಜಿಲ್ಲಾಮಟ್ಟದ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ

Source: S O News | By I.G. Bhatkali | Published on 23rd November 2023, 7:32 PM | Coastal News | Don't Miss |

ಕಾರವಾರ:  ಮೂರು ದಿನಗಳ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕ್ರೀಡಾಕೂಟವು ಕಾರವಾರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಆರಂಭಗೊAಡಿತು. 
ರಾಷ್ಟçಮಟ್ಟದ ಕುಸ್ತಿ ಪಟು ಶ್ವೇತಾ ಸಂಜು ಅನ್ನಿಕೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವಂತೆ ತಿಳಿಸಿ, ತಮ್ಮ ಸಾಧನೆಗೆ ಪೊಲೀಸ್ ಇಲಾಖೆ ನೀಡಿದ ಸಹಕಾರವನ್ನು ಸ್ಮರಿಸಿದರು.

ಪೊಲೀಸ್ ಅಧೀಕ್ಷಕ ವಿಷ್ಣ್ಣುವರ್ಧನ್. ಎನ್, ಮಾತನಾಡಿ, ಕ್ರೀಡಾಪಟುಗಳು ಕ್ರೀಡಾಕೂಟಗಳಲ್ಲಿ ಸ್ಪರ್ಧಿಸುವುದು ಅತ್ಯಂತ ಮುಖ್ಯ. ಕ್ರೀಡೆಯಲ್ಲಿ ಸೋಲು ಗೆಲುವುಗಳ ಬಗ್ಗೆ ಗಮನ ಕೊಡದೇ ಕ್ರೀಡಾ ಮನೋಭಾವದಿಂದ ಆಡುವಂತೆ ತಿಳಿಸಿದರು.

ಪೊಲೀಸ್ ಸಿಬ್ಬಂದಿಯ ಮಗಳಾದ ರಾಷ್ಟçಮಟ್ಟದ ಕುಸ್ತಿ ಪಟು ಶ್ವೇತಾ ಸಂಜು ಅನ್ನಿಕೇರಿ ಅವರ ಕ್ರೀಡಾ ಸಾಧನೆಗೆ ಎಸ್.ಪಿ. ಮೆಚ್ಚುಗೆ ವ್ಯಕ್ತಪಡಿಸಿದರು. 
ನವೆಂಬರ್ 22 ರಿಂದ 24 ರ ವರೆಗೆ ನಡೆಯುವ ಜಿಲ್ಲಾ ಪೊಲೀಸ್ ಕ್ರೀಡಾಕೂಟದಲ್ಲಿ, ಜಿಲ್ಲಾ ಸಶಸ್ತç ಮೀಸಲು ಪಡೆ, ಕಾರವಾರ, ಭಟ್ಕಳ, ಶಿರಸಿ, ದಾಂಡೇಲಿ ವಿಭಾಗಗಳ ಹಾಗೂ ಮಹಿಳಾ ಪೊಲೀಸ್ ತಂಡದ ಸಿಬ್ಬಂದಿಗಳು ಅತ್ಯಂತ ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿದ್ದರು.

ಸರ್ವೋತ್ತಮ ಪ್ರಶಸ್ತಿ ವಿಜೇತ ಪೊಲೀಸ್ ಸಿಬ್ಬಂದಿ ನಾಗರಾಜ ಎಮ್ ಹುನಗುಂದಿ ಕ್ರೀಡಾಜ್ಯೋತಿ ಬೆಳಗಿಸಿದರು. ಜಿಲ್ಲಾ ಸಶಸ್ತç ಮೀಸಲು ಪಡೆಯ ಆರ್.ಎಸ್.ಐ.ಮೊಹ್ಮದ್ ಮೋಸಿನ್ ಮಿರ್ಜಿ ಕ್ರೀಡಾಕೂಟದ ಪ್ರಮಾಣ ವಚನ ಭೋದಿಸಿದರು. ಕ್ರೀಡಾಪಟುಗಳಿಂದ ಪಥ ಸಂಚಲನ ಕಾರ್ಯಕ್ರಮ ನಡೆಯಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ ವಂದಿಸಿದರು.

ಜೋಯಿಡಾ ಪಿ.ಎಸ್.ಐ. ನಿತ್ಯಾನಂದ, ಮಹಿಳಾ ಪೊಲೀಸ್ ಸಿಬ್ಬಂದಿ ಭಾರತಿ ಮತ್ತು ಅಮಿತಾ ನಿರೂಪಿಸಿದರು.
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...