ಹೆದ್ದಾರಿ ಅಗಲೀಕರಣ; ನಿರಾಶ್ರಿತರಿಗೆ ಏಕ ರೂಪ ಗರಿಷ್ಠ ಪರಿಹಾರಕ್ಕೆ ಶಾಸಕ ಸುನಿಲ್ ಆಗ್ರಹ

Source: sonews | By Staff Correspondent | Published on 13th December 2018, 7:32 PM | Coastal News | Don't Miss |

ಭಟ್ಕಳ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಪರಿಹಾರ ನೀಡಿಕೆ ನೀತಿಯಿಂದ ಭೂಮಿ ಮನೆ, ತೋಟ ಕಳೆದುಕೊಂಡ ನಿರಾಶ್ರಿತರಿಗೆ ಗರಿಷ್ಟ ಪ್ರಮಾಣದಲ್ಲಿ ಏಕರೂಪ ಪರಿಹಾರ ಘೋಷಿಸಲು ಕ್ರಮ ಕೈಗೊಳ್ಳಬೇಕೆಂದು ವಿಧಾನ ಸಭೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಸರ್ಕಾರವನ್ನು ಒತಾಯಿಸಿದ್ದಾರೆ.

ಅಧಿವೇಶನದ ಚುಕ್ಕೆ ಗುರುತಿಲ್ಲದ 149ನೇ ಪ್ರಶ್ನೆ ಸಂಖ್ಯೆಯಲ್ಲಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಭೂ ಸ್ವಾದೀನ ಪ್ರಕ್ರಿಯೆಯಲ್ಲಿ ನಿರಾಶ್ರಿತರಾಗುವವರಿಗೆ ಯೋಗ್ಯ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಲಿಖಿತವಾಗಿ ಒತ್ತಾಯಿಸಿದ್ದಾರೆ. 

ಇದಕ್ಕೆ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಲಿಖಿತವಾಗಿ ಉತ್ತರಿಸಿ ಸಾರ್ವಜನಿಕರಿಂದ ವಶಪಡಿಸಿಕೊಂಡಿರುವ ಭೂಮಿ ಮತ್ತು ಮನೆಗಳಿಗೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 ಹಾಗೂ ಖಈಅಖಿಐಂಂಖರ ಕಾಯ್ದೆ 2013ರ ರನ್ವಯ ನಿಯಮಾನುಸಾರ ಭೂ ಪರಿಹಾರ ತ್ವರಿತವಾಗಿ ನೀಡಲಾಗುತ್ತಿದೆ. ಸರ್ಕಾರದಿಂದ ನೊಂದಣಿ ಹೊಂದಿರುವ ಮೌಲ್ಯ ಮಾಪಕರಿಂದ ಮೌಲ್ಯ ಮಾಪನ ಗೊಳಿಸಿ ಮನೆ, ಕಂಪೌಂಡ್, ಗೋಡೆ ಮುಂತಾದ ಕಟ್ಟಡಗಳಿಗೆ ಸಂಬಂದಿಸಿದ ಪರಿಹಾರ ಮೊತ್ತವನ್ನು ನೀಡಲಾಗಿರುತ್ತದೆ. ಆಯಾಯ ಗ್ರಾಮ/ ಹಳ್ಳಿಗಳಲ್ಲಿ ಅನ್ವಯವಾಗುವ ಮಾರ್ಗದರ್ಶನ ಮೌಲ್ಯಮಾಪನ ಹಾಗೂ ಈಗಾಗಲೇ ನೋಂದಾಯಿತ ಅಂಕಿ ಅಂಶಗಳ ಮತ್ತು ಮಾರ್ಗದರ್ಶನಗಳ ಕಾಯ್ದೆನುಸಾರ ಕೃಷಿ ಭೂಮಿ ಮತ್ತು ತೋಟ ಮುಂತಾದ ಭೂಮಿಗಳಿಗೆ ಪರಿಹಾರ ಮೊತ್ತವನ್ನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ/ ಭಾರತೀಯ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು  ಖಈಅಖಿಐಂಂಖ   ಕಾಯ್ದೆನುಸಾರ ನೀಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ತಿಳಿಸಿದ್ದಾರೆ. 

 

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...