ಗಡಿಮುಡ್ಕಿ ಶಾಲೆ ಚಿಕ್ಕದಾಗಿದ್ದರು ಮಕ್ಕಳ ಕಲಿಕೆ ಅಧಿಕವಾಗಿದೆ. - ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೋಗೇರ

Source: SO News | By MV Bhatkal | Published on 14th January 2024, 12:17 AM | Coastal News | Don't Miss |

ಭಟ್ಕಳ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಡಿಮುಂಡ್ಕಿ 
ಕೆಳಗಿನಮನೆಯ ಎಸ್.ಡಿ.ಎಮ್.ಸಿ. ಹಾಗೂ ವಿದ್ಯಾಸಿರಿ ಹಳೆ ವಿದ್ಯಾರ್ಥಿಗಳ ಸಂಘ ಇವರ ಸಂಯಕ್ತ ಆಶ್ರಯದಲ್ಲಿ ಸ್ನೇಹ ಸಮ್ಮೇಳನವು ಶನಿವಾರದಂದು ಶಾಲಾ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೋಗೇರ ಶಾಲೆ ಚಿಕ್ಕದಾದರು ಮಕ್ಕಳಿಗೆ ಶಿಕ್ಷಕರು ನೀಡುತ್ತಿರುವ ಕಲಿಕೆ ದೊಡ್ಡದಾಗಿದೆ. ಮಕ್ಕಳ ಕಲಿಕಾ ಪ್ರಗತಿಯನ್ನು ಅವರ ಪಾಲಕರು ಶಾಲೆಗೆ ಬಂದು ಅವರ ವರ್ಗ ಶಿಕ್ಷಕರನ್ನು ಭೇಟಿ ಮಾಡಬೇಕು. ಇದು ಪಾಲಕರ ಜವಾಬ್ದಾರಿ ಅತೀ ಮುಖ್ಯ. ಉನ್ನತ ಮಟ್ಟದ ಗುರಿ ಮಕ್ಕಳು ಸಾಧಿಸಬೇಕಾದರೆ ಅವರ ಇಚ್ಚೆಗನುಸಾರ ಅವರ ಗುರಿ ಸಾಧನೆಗೆ ಪ್ರೋತ್ಸಾಹಿಸಬೇಕು. ಈ ಶಾಲೆಗೆ ಬಹಳ ದಾನಿಗಳ ಸಹಕಾರ ಇದೆ. ಅವರೆಲ್ಲರಿಗೂ ಸಹ ಇಲಾಖೆಯಿಂದ ಅಭಿನಂದನೆಗಳು. ಮಗು ಶ್ರದ್ದೆಯಿಂದ ಗುರಿ ಸಾಧನೆಯತ್ತ ತೊಡಗಿಸಿಕೊಳ್ಳಬೇಕು. ಇದರಲ್ಲಿ ಅತೀ ವಿರಳವಾದ ಮಕ್ಕಳು ತಮ್ಮ ಇಚ್ಛಾನುಸಾರ ಗುರಿ ಸಾಧಿಸಲಿದ್ದಾರೆ. ಉಳಿದವರು ಸಾಮಾಜಿಕವಾಗಿ ಬೆಳೆಯಬೇಕು ಎಂದು ಕಿವಿ ಮಾತನ್ನು ಹೇಳಿದರು.

ಮುಖ್ಯ ಅತಿಥಿಗಳಾದ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಪೂರ್ಣಿಮಾ ಮೊಗೇರ ಮಾತನಾಡಿ ' ಸರಕಾರಿ ಶಾಲೆಯೆಂದರೆ ಮೂಗು ಮೂರಿಯುವ ಕಾಲದಲ್ಲಿ ಅದ್ಭುತವಾದ ಸರಕಾರಿ ಶಾಲೆಯ ಬೆಳವಣಿಗೆ ನೋಡಿ ಸಂತಸ ತಂದಿದೆ. ಇದು ಶಾಲಾ ಶಿಕ್ಷಕರ ಇಚ್ಛಾಶಕ್ತಿಯ ಜೊತೆಗೆ ಪಾಲಕರ ಸಹಕಾರದಿಂದ ಕಂಡು ಬರುತ್ತದೆ. ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಶೈಕ್ಷಣಿಕವಾಗಿ ಶಾಲೆಯ ಏಳಿಗೆಯು ಸಹ ಮುಖ್ಯ ಎಂದರು.

ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ ಅಧ್ಯಕ್ಷ ಮೋಹನ ನಾಯ್ಕ,ಈಗಿನ ವಿದ್ಯಮಾನದಲ್ಲಿ ಶಾಲೆಯ ಬೆಳವಣಿಗೆಗೆ 
ಮಕ್ಕಳ ಕಲಿಕಾ ಗುಣಮಟ್ಟವು ಸಹ ಈ ಶಾಲೆಯು ಮುಂದಿದೆ.
ಅಂಬೇಡ್ಕರ್ ಅವರಿಗೆ ಓದುವ ಆಸೆ ಜೋರಾಗಿತ್ತು. ಎಷ್ಟರ ಮಟ್ಟಿಗ ಎಂದರೆ ಅವರಿರುವ ಪಕ್ಕದ ಕೋಣೆಯ ಗೋಡೆ ಕುಸಿದು ಬಿದ್ದರು ಸಹ ಅವರಿಗೆ ಅದರ ಗಮನವಿಲ್ಲವಾಗಿತ್ತು. 
ಮಕ್ಕಳ ಮಾನಸಿಕ ಸ್ಥಿತಿಯ ಬೆಳವಣಿಗೆಯು ಅವರ ಪೂರಕ ಸಕಾರಾತ್ಮಕವಾದ ವಾತಾವರಣದ ಜೊತೆಗೆ ಸಮಾಜದ ಜೊತೆಗೆ ಬೆಳೆಯಬೇಕಾಗುತ್ತದೆ. ಮನೆಯ ವಾತಾವರಣವು ಸಹ ಅವರ ಶಿಕ್ಷಣದ ಜೊತೆಗೆ ಸಮಾಜದೊಂದಿಗಿನ ಸಂಬಂಧವನ್ನು ಪಾಲಕರು ಗ್ರಹಿಸಬೇಕು ಎಂದರು.

ಪ್ರಜಾವಾಣಿ ಪತ್ರಿಕೆ ವರದಿಗಾರರಾದ ಮೋಹನ ನಾಯ್ಕ  
ಆಂಗ್ಲ ಮಾಧ್ಯಮದ ಮಕ್ಕಳು ಬೋನಿನಲ್ಲಿರುವ ಪ್ರಾಣಿಯಂತೆ ಆದರೆ ಸರಕಾರಿ ಶಾಲೆಯಲ್ಲಿ ಎಲ್ಲಾ ರೀತಿಯಲ್ಲಿಯೂ ಅವಕಾಶ ಮತ್ತು ಮಕ್ಕಳ ಸರ್ವಾಂಗೀಣ ಬೆಳವಣಿಗೆ ಮಾಡಲು ಸಾಧ್ಯ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಾರಿ ಎಸ್.ಎಸ್‌.ಎಲ್.‌ಸಿ. ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಮಕ್ಕಳಿಗೆ ಕಾರ್ಯಾಗಾರ ಮಾಡುತ್ತಿರುವುದು ಪ್ರಶಂಸೆಯ ಜೊತೆಗೆ ಅವರಿಗೆ ಶಿಕ್ಷಣದ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ. ಈ ಶಾಲೆಯ ಬೆಳವಣಿಗೆ ಆಂಗ್ಲ ಮಾಧ್ಯಮ ಶಾಲೆಗಿಂತ ಅಧಿಕವಾಗಿದೆ ಎಂದರು.
ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ 
ಉಲ್ಲಾಸ ನಾಯ್ಕ,ಸಮಾಜ ಸೇವಕ ಭಾಸ್ಕರ ನಾಯ್ಕ ಮಾತನಾಡಿದರು.
ವೇದಿಕೆಯಲ್ಲಿ ಕಾಯ್ಕಿಣಿ ಗ್ರಾಮ ಪಂಚಾಯತ ಅಧ್ಯಕ್ಷ
ರಾಜು ನಾಯ್ಕಎಸ್.ಡಿ.ಎಮ್.ಸಿ.ಅಧ್ಯಕ್ಷ ವಿಷ್ಣು ನಾಯ್. ಸದಸ್ಯೆ ಲಕ್ಷ್ಮೀ ಮಂಜುನಾಥ ನಾಯ್ಕ,ದಾನಿಗಳಾದ ಡಾ ಬಿ ರಾಘವೇಂದ್ರ ರಾವ್,ಕಸಾಪ ತಾಲ್ಲೂಕು ಕಾರ್ಯದರ್ಶಿ ಶ್ರೀಧರ್ ಶೇಟ್ ಮುಂತಾದವರು ಇದ್ದರು.
ಶಾಲೆ ಮುಖ್ಯಾಧ್ಯಾಪರಾಧ ಆಯ್.ವಿ.ಹೆಗಡೆ ಸ್ವಾಗತಿಸಿದರು.ಶಿಕ್ಷಕ ಪರಮೇಶ್ವರ ನಾಯ್ಕ ನಿರೂಪಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ನ್ರತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...