ಚಾಲಕನ ನಿಯಂತ್ರಣ ತಪ್ಪಿ ಮೀನು ತುಂಬಿದ ಬುಲೆರೋ ವಾಹನ ಪಲ್ಟಿ: ಚಾಲಕ ಪ್ರಾಣಾಪಾಯದಿಂದ ಪಾರು

Source: so news | Published on 30th October 2019, 12:15 AM | Coastal News | Don't Miss |


ಭಟ್ಕಳ: ತಾಲೂಕಿನ ಬಸ್ತಿಮಕ್ಕಿ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಮೀನು ತುಂಬಿದ ಬುಲೆರೋ ವಾಹನವೊಂದು ಪಲ್ಟಿಯಾದ ಪರಿಣಾಮ ಬುಲೆರೋ ಚಾಲಕನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಪ್ರಾಣಾಪಾಯದಿಂದ ಚಾಲಕ ಪಾರಾದ ಘಟನೆ ಮಂಗಳವಾರದಂದು  ನಡೆದಿದೆ

ಬೈಂದೂರಿನಿಂದ ಹೊನ್ನಾವರದ ಕಡೆಗೆ ಸಾಗುತಿದ್ದ ಕೆ.ಎ. 20, ಸಿ 9380 ವಾಹನ ಸಂಖ್ಯೆಯ ಮೀನು ತುಂಬಿದ ಬೊಲೆರೊವೊಂದು ಮುರ್ಡೇಶ್ವರದ ಬಸ್ತಿ ಸಮೀಪ ತನ್ನ ಪಥವನ್ನು ಇನ್ನೋಂದೆಡೆ ತೆಗೆದುಕೊಳ್ಳುವ ಸಂದರ್ಭದಲ್ಲಿ ರಸ್ತೆಯ ಪಕ್ಕಕ್ಕೆ ಮಗುಚಿ ಬಿದ್ದು, ಬೊಲೇರೋ ವಾಹನ ಸಂಪೂರ್ಣ ಜಖಂಗೊಡಿದ್ದು ಚಾಲಕ ಕುಂದಾಪುರ ಮೂಲದ ರಾಘು ಮೊಗವೀರ  ಗಾಯಗೊಂಡ ಹಿನ್ನೆಲೆ ತಕ್ಷಣಕ್ಕೆ ಅಲ್ಲಿನ ಸ್ಥಳೀಯರು ಚಾಲಕನನ್ನು ಅಲ್ಲೇ ಹತ್ತಿರದ ಮುರುಡೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಲಕನ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಯ ಪರಿಣಾಮ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಅಪಘಾತದಲ್ಲಿ ರಸ್ತೆಯ ತುಂಬೆಲ್ಲ ಮೀನು ಚಲ್ಲಾಪಿಲ್ಲಿಯಾಗಿದ್ದು ನಂತರ ಮೀನುಗಳನ್ನೆಲ್ಲ ಇನ್ನೊಂದು ವಾಹನಕ್ಕೆ ತುಂಬಿ ಹೊನ್ನಾವರಕ್ಕೆ ಸಾಗಿಸಲಾಗಿದ್ದು ಸ್ವಲ್ಪ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.

ಸ್ಥಳಕ್ಕೆ ಮುರ್ಡೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...