ಡಾಕ್ಟರ್ ಗೋನ್ಸಾಲ್ವೀಸ್ ನಿದನ

Source: S O News Service | By I.G. Bhatkali | Published on 2nd June 2018, 11:32 PM | Coastal News | Don't Miss |

ಭಟ್ಕಳ: ಗೋನ್ಸಾಲ್ವೀಸ್ ಡಾಕ್ಟರ್ ಎಂದೇ ಖ್ಯಾತರಾಗಿದ್ದ ವೈದ್ಯ ಆರೋಗ್ಯ ಮಾತಾ ನರ್ಸಿಂಗ್ ಹೋಮ್ ಮಾಲಕ ಡಾ. ಪೀಟರ್ ಗೋನ್ಸಾಲ್ವೀಸ್ (75) ಹೃದಾಘಾತದಿಂದ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಿದನರಾಗಿದ್ದಾರೆ. 

ತಮ್ಮ ವೈದ್ಯಕೀಯ ಅಧ್ಯಯನ ಮುಗಿಸಿದ ನಂತರ ಡಾ. ಪೀಟರ್ ಗೋನ್ಸಾಲ್ವೀಸ್ ಭಟ್ಕಳದಲ್ಲಿ ನರ್ಸಿಂಗ್ ಹೋಮ್ ಸ್ಥಾಪಿಸಿದ್ದು ಇವರ ನರ್ಸಿಂಗ್ ಹೋಮ್ ಅಂದು ಪ್ರಥಮದ್ದಾಗಿತ್ತೆನ್ನುವುದು ವಿಶೇಷವಾಗಿದೆ. ಆರಂಭದ ದಿನಗಳಲ್ಲಿ ಬೇರೆ ಎಲ್ಲಿಯೂ ನರ್ಸಿಂಗ್ ಹೋಮ್ ಇಲ್ಲದೇ ಇರುವುದರಿಂದ ಬಡವರಿಗಾಗಿಯೇ ಒಂದು ವಾರ್ಡನ್ನು ತೆರೆದು ಅತೀ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದ ಅವರು, ಆ ದಿನಗಳಲ್ಲಿ ಚಿಕ್ಕ ಪುಟ್ಟ ಪ್ಲಾಸ್ಟಿಕ್ ಸರ್ಜರಿಯಂತಹ ಆಪರೇಶನ್‍ಗಳನ್ನು ಕೂಡಾ ಮಾಡುತ್ತಿದ್ದರು. ಮೃದುವಾದ ಮಾತು, ಉತ್ತಮ ಚಿಕಿತ್ಸೆಯಿಂದ ಮನೆ ಮಾತಾಗಿರುವ ಅವರು ಕಳೆದ ಸುಮಾರು 43 ವರ್ಷಗಳ ಕಾಲ ಆರೋಗ್ಯ ಮಾತಾ ನರ್ಸಿಂಗ್ ಹೋಮ್ ನಡೆಸಿಕೊಂಡು ಬಂದಿದ್ದಾರೆ.  ತಮ್ಮ   ಮೂವರು ಪುತ್ರಿಯರನ್ನು ಕೂಡಾ ವೈದ್ಯಕೀಯ ಸೇವೆಗೆ ತೊಡಗಿಸಿದ ಅವರು ಪತ್ನಿ, ಮೂವರು ಪುತ್ರಿಯರು, ಮೂವರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಸಂತಾಪ: ಡಾ. ಪೀಟರ್ ಗೋನ್ಸಾಲ್ವೀಸ್ ಅವರ ನಿದನಕ್ಕೆ ಭಟ್ಕಳ ಐ.ಎಂ.ಎ. ತೀವ್ರ ಸಂತಾಪ ಸೂಚಿಸಿದೆ.  ಐ.ಎಂ.ಎ. ಅಧ್ಯಕ್ಷ ಡಾ. ಆರ್. ವಿ. ಸರಾಫ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದೆ ಐ.ಎಂ.ಎ. ಸದಸ್ಯರುಗಳು ಅವರ ಆತ್ಮಕ್ಕೆ ಚಿರ ಶಾಂತಿ ಕೋರಿ, ಅವರ ಕುಟುಂಬಕ್ಕೆ ದುಖ ಸಹಿಸುವ ಶಕ್ತಿ ದೊರೆಯಲಿ ಎಂದು ಹಾರೈಸಿದರು.  ಅಲ್ಲದೆ ಭಟ್ಕಳದ ಮಜ್ಲಿಸೆ ಇಸ್ಲಾಹ್ ತಂಜೀಮ್ ಸಂಸ್ಥೆಯ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ, ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ ಸೇರಿದಂತೆ ಹಲವು ಮುಸ್ಲಿಮ್ ಸಂಘಟನೆಗಳ ಪದಾಧಿಕಾರಿಗಳು ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದು ಮೃತರ ಕುಟುಂಬಕ್ಕೆ ಭಗವಂತನು ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...