ತೌಕ್ತೆ"ಚಂಡಮಾರುತದಿಂದ ಭಟ್ಕಳದಲ್ಲಿ ಗಾಳಿ ಮಳೆ:ಅಲೆಯ ಅಬ್ಬರಕ್ಕೆ ಮೀನುಗಾರ ಬಲಿ:

Source: so news | By MV Bhatkal | Published on 15th May 2021, 4:21 PM | Coastal News | Don't Miss |

 

ಭಟ್ಕಳ:ತೌಕ್ತೆ ಚಂಡಮಾರುತ ಪರಿಣಾಮ ಉತ್ತರ ಕನ್ನಡ
ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿತ್ತು.ಅದರಂತೆ ಶನಿವಾರ ಬೆಳಗ್ಗೆ ಯಿಂದಲೇ ಮಳೆ ಸುರಿಯುತ್ತಿದೆ.ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಲಿ ಸಮುದ್ರ ತೀರವನ್ನು‘ಡೆಂಜರ್ ಝೋನ್’ಎಂದು ಘೋಷಿಸಲಾಗಿದೆ. 
ಅಲ್ಲಿನ ಕಡಲತೀರದ ನಿವಾಸಿಗಳಿಗೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.ಹೆಬಳೆ ಗ್ರಾಮ ಪಂಚಾಯತ
ವ್ಯಾಪ್ತಿಯ ಹೊನ್ನೆಗದ್ದೆ,ಹೆರ್ತಾರ್‍ಗಳಲ್ಲಿ ನೆಲ ಕೊಚ್ಚಿ ಹೋಗುತ್ತಿದ್ದು, ತಟದಲ್ಲಿ ಬೆಳೆದು ನಿಂತಿರುವ ತೆಂಗಿನ ಮರಗಳಿಗೆ ಆಪತ್ತು ಬಂದೊದಗಿದೆ. ರಸ್ತೆಯೂ ಕಡಲ ಅಬ್ಬರಕ್ಕೆ ಕುಸಿಯುತ್ತಿದೆ.ತಾಲೂಕಿನ ಬಂದರು,ತಲಗೋಡ,
ಕರಿಕಲ್,ಜಾಲಿ,ರ್ಗೊಟೆ,ಬೆಳಕೆ,ಹಾಗೂ ಇತರೆ ಭಾಗಗಳಲ್ಲಿ ಸಮುದ್ರ ಕೊರೆತ ಅಲ್ಲಿಯ ಜನರಿಗೆ ಸಂಕಟವನ್ನು ತಂದಿಟ್ಟಿದೆ. ನೀರು ಒಂದೇ ಸವನೆ ತಡೆಗೋಡೆಯನ್ನು ದಾಟಿ ಮೇಲಕ್ಕೆ ಹರಿಯಲಾರಂಭಿಸಿದೆ.
ಅರಬ್ಬಿ ಸಮುದ್ರದ ತೀರದಲ್ಲಿ ನಿನ್ನೆಯಿಂದಲೇ ಕಡಲು ಪ್ರಕ್ಷುಬ್ಧಗೊಂಡಿದೆ. ಸಮುದ್ರ ತೀರಕ್ಕೆ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿವೆ.ತೌಕ್ತೆ ಚಂಡಮಾರುತದ ಪರಿಣಾಮ ಮೀನುಗಾರರು ಕಡಲಿಗಿಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಎರಡು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿರುವವರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಸಮುದ್ರ ತೀರಕ್ಕೆ ಮರಳಿ ಹೋಗುವಂತೆ ಸೂಚಿಸಿದ್ದರು.ಈ ಹಿನ್ನಲೆಯಲ್ಲಿ ಭಟ್ಕಳ  ವ್ಯಾಪ್ತಿಯ ಎಲ್ಲಾ ಸಮುದ್ರ ತೀರಗಳಿಗೆ ತಹಶಿಲ್ದಾರರ ರವಿಚಂದ್ರನ್
ಕಂದಾಯ ಅಧಿಕಾರಿಗಳು,ಜಾಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೆರಳಿ ತೀರದ ನಿವಾಸಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಅಲೆಯ ಅಬ್ಬರಕ್ಕೆ ಮೀನುಗಾರ ಬಲಿ:
ತೌಕ್ತೆ ಚಂಡಮಾರುತದ ಆರ್ಭಟಕ್ಕೆ ಕೊಚ್ಚಿ ಹೋಗುತ್ತಿದ್ದ ತನ್ನ ದೋಣಿಯನ್ನು ದಡಕ್ಕೆ ತರಲೆಂದು ಸಮುದ್ರಕ್ಕೆ ಇಳಿದ ಮೀನುಗಾರನೊರ್ವ ಎರಡು ದೋಣಿಗಳ ನಡುವೆ ಸಿಲುಕಿ ಮೃತಪಟ್ಟಿದ್ದಾನೆ.
ಜಾಲಿಕೋಡಿ ಸಮುದ್ರ ತೀರದಲ್ಲಿ ಶನಿವಾರ ಲಂಗುರ ಹಾಕಿದ ದೋಣಿಯನ್ನು ಸಮುದ್ರದ ಅಲೆಗಳಿಂದ ರಕ್ಷಣೆ ಮಾಡಲು ಹೋಗಿದ್ದ ಜಾಲಿಕೋಡಿ ನಿವಾಸಿ ಲಕ್ಷ್ಮಣ ಈರಪ್ಪ ನಾಯ್ಕ(60) ಮೃತ ದುರ್ದೈವಿ. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read These Next

ಕಾರವಾರ: ಟ್ಯಾಬ್ ನೊಂದಿಗೆ ಭವಿಷ್ಯ ಕೂಡ ವಿದ್ಯಾರ್ಥಿ ಕೈಯಲ್ಲೇ ಇದೆ : ಶಾಸಕಿ ರೂಪಾಲಿ ನಾಯ್ಕ

“ಇಂದು ವಿತರಿಸಲಾಗುತ್ತಿರುವ ಟ್ಯಾಬ್‍ನೊಂದಿಗೆ ಭವಿಷ್ಯ ಕೂಡ ನಿಮ್ಮ ಕೈಯಲ್ಲೇ ಇದೆ, ವಿದ್ಯಾರ್ಥಿಗಳು ಸರಕಾರ ನೀಡಿರುವ ಟ್ಯಾಬ್ ಪಿಸಿ ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಡೀ ದಿನ ಲಾಕ್ ಡೌನ್ ಸಡಿಲಿಸಬೇಕು. ಮಾಜಿ ಶಾಸಕ ಐವಾನ್ ಡಿಸೋಜಾ ಆಗ್ರಹ.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಇಡೀ ದಿನ ಸಡಿಲಿಕೆ ಮಾಡಬೇಕು. ತಕ್ಷಣ ಬಸ್ ಸಂಚಾರ ಆರಂಭಿಸಬೇಕು. ಎಲ್ಲರಿಗೆ ಲಸಿಕೆ ...

ಮೂರು ತಿಂಗಳ ಅವಧಿಯ ವಿದ್ಯುತ್ ಬಿಲ್ಲು, ನೀರಿನ ಬಿಲ್ಲು ಮನ್ನಾ ಮಾಡಬೇಕು- ಮುನೀರ್ ಕಾಟಿಪಳ್ಳ

ಮಂಗಳೂರು: ಕೊರೋನಾ ಕಾಲದ ಈ ಎರಡನೇ ಅಲೆಯಲ್ಲಿ ಸರಕಾರ ಘೋಷಿಸಿದ ಲಾಕ್ಡೌನ್ ನ ಈ ಸಂಕಷ್ಟದ ಕಾಲದಲ್ಲಿ ಜನರಿಗೆ ಉದ್ಯೋಗ ಇಲ್ಲದೆ ಅನ್ನ , ...