ಕುಮಟಾ ತಾಲೂಕಿನಲ್ಲಿ ಖಾತೆ ತೆರೆದ ಕೊರೋನಾ

Source: sonews | By Staff Correspondent | Published on 13th May 2020, 6:40 PM | Coastal News | Don't Miss |

ಭಟ್ಕಳದಲ್ಲಿ ಮೂರು ದಿನ ಬಿಟ್ಟು ಮತ್ತೆ ಕಾಣಿಸಿಕೊಂಡ ಕೊರೋನಾ

ಭಟ್ಕಳ: ಇಲ್ಲಿಯ ವರೆಗೆ ಉ.ಕ. ಜಿಲ್ಲೆಯ ಕೇವಲ ಭಟ್ಕಳದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕೊರೋನಾ ಸೋಂಕು ಇಂದು ಕುಮಟಾ ತಾಲೂಕಿನಲ್ಲಿ 26 ವರ್ಷದ ಯುವಕನಲ್ಲಿ ಕಾಣಿಸಿಕೊಂಡು ತನ್ನ ಖಾತೆ ತೆರೆದುಕೊಂಡಿದೆ.

ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿ ದುಡಿಯುತ್ತಿದ್ದ ಕುಮಟಾ ತಾಲೂಕಿನ ವನ್ನಳ್ಳಿ ಗ್ರಾಮದ ಯುವಕ ಲಾಕ್‍ಡೌನ್ ಸಡಿಲಿಕೆಯ ನಂತರ ರತ್ನಾಗಿರಿಯಿಂದ ಕುಮಟಾಕ್ಕೆ ಹಿಂತಿರುಗಿದ್ದ. ತಾಲೂಕಾಡಳಿತ ಅಲ್ಲಿ ಆತನಿಗೆ ಕ್ವಾರೆಂಟೈನ್ ಮಾಡಿದ್ದರು. ಆದರೆ ಇಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿ ಹೆಲ್ತ್ ಬುಲೆಟಿನ್ ನಲ್ಲಿ ಕುಮಟಾದ ಯುವಕನಿಗೆ ಕೊರೋನಾ ದೃಢಪಟ್ಟಿರುವುದು ಖಾತ್ರಿಯಾಗಿದೆ.

ಭಟ್ಕಳದಲ್ಲಿ ಇಂದು ಒಂದು ಪ್ರಕರಣ: ಕಳೆದೆರಡು ದಿನಗಳಿಂದ ಭಟ್ಕಳ ತಾಲೂಕಿನಲ್ಲಿ ಯಾವುದೇ ಕೋವಿಡ್-19 ಪಾಸಿಟಿವ್ ಪ್ರಕರಣ ಇಲ್ಲದೇ ಇರುವುದರಿಂದ ಕೊಂಚ ನೀರಾಳರಾಗಿದ್ದ ಜನತೆಗೆ ಬುಧವಾರ ಒಂದು ಪ್ರಕರಣ ಪತ್ತೆಯಾಗುವದರೊಂದಿಗೆ ಹೆಚ್ಚಿನ ಆತಂಕ ದೂರವಾದಂತಾಗಿದೆ. ಈ ಹಿಂದೆ ಪ್ರಥಮ ಹಂತದಲ್ಲಿ ವಿದೇಶದಿಂದ ಬಂದ 11 ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡು ಅವರೆಲ್ಲರೂ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದರು.

ನಂತರ ಮಂಗಳೂರಿನ ಫಸ್ಟ್‍ನ್ಯೂರೋ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದ ಕುಟುಂಬವೊಂದರಿಂದ 28 ಜನರು ಕೋವಿಡ್-19 ಪಾಸಿಟಿವ್ ಪೀಡಿತರಾಗಿ ಕಾರವಾರದ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಇವರ ಗಂಟಲು ದ್ರವ ಮತ್ತು ರಕ್ತ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಸೋಮವಾರ ಮತ್ತು ಮಂಗಳವಾರ ಯಾವುದೇ ಪ್ರಕರಣ ಪತ್ತೆಯಾಗದೇ ಬುಧವಾರ ಎರಡು ವರ್ಷದ ಪುಟ್ಟ ಬಾಲಕಿಯಲ್ಲಿ ಸೋಂಕು ದೃಢವಾಗುವ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆ 29ಕ್ಕೇರಿದಂತಾಗಿದೆ. ಬುಧವಾರದ ಮಧ್ಯಾಹ್ನದ ಆರೋಗ್ಯ ಇಲಾಖೆಯ ಹೆಲ್ತಬುಲೇಟಿನ್ ಒಂದು ಮಗುವಿಗೆ ಸೋಂಕು ದೃಢವಾಗಿದೆ ಎನ್ನುವ ಮೂಲಕ ಭಟ್ಕಳದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚೇನು ಹೆಚ್ಚಳವಾಗಿಲ್ಲ ಎನ್ನುವ ಸಮಾಧಾನ ತಂದಿದೆ. ಒಟ್ಟಾರೆ ಅಂತರ್ ರಾಜ್ಯದಿಂದ ಬಂದವರು, ಸೋಂಕಿತರ ಸಂಪರ್ಕದಲ್ಲಿರುವವರು ಸೇರಿ 54 ಜನರು ಸರಕಾರಿ ಕ್ವಾರಂಟೈನ್‍ನಲ್ಲಿ ಅಂತರ್ ಜಿಲ್ಲೆಯಿಂದ ಬಂದವರು, ಸೋಂಕಿತರ ಸಂಪರ್ಕಕ್ಕೆ ಬಂದವರು ಸೇರಿದಂತೆ ಸುಮಾರು 100 ಜನರು ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಲಾಕಡೌನ್ ಸರಳಗೊಂಡಿದ್ದರೂ ಹಾಟಸ್ಪಾಟ್ ಕೇಂದ್ರವಾದ ಭಟ್ಕಳದಲ್ಲಿ ಮಾತ್ರ ಸೀಲ್‍ಡೌನ್ ಮಾಡಲಾಗಿದ್ದು, ಬಿಗು ಕ್ರಮ ಕೈಗೊಳ್ಳಲಾಗಿದೆ.

ಭಟ್ಕಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆಯಿಂದಾಗಿ ಜನರು ಭಯಗೊಂಡಿದ್ದು, ಸೀಲ್‍ಡೌನ್‍ನಿಂದಾಗಿ ಜನರು ಮನೆಯಿಂದ ಹೊರಬರುತ್ತಿಲ್ಲ. ಈ ಹಿಂದೆ ಮೇ.17ಕ್ಕೆ ಲಾಕ್‍ಡೌನ್ ಅವಧಿ ಮುಗಿಯುವ ಹೊತ್ತಿಗೆ ಭಟ್ಕಳಕ್ಕೆ ರಿಯಾಯಿತಿ ಸಿಗಬಹುದು ಎನ್ನುವ ಕುರಿತು ತಿಳಿದು ಬಂದಿತ್ತಾದರೂ ಅದು ಹುಸಿಯಾಗಿದೆ.

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...