ಕೇಂದ್ರದ ನೂತನ ಶಿಕ್ಷಣ ನೀತಿಯಿಂದಾಗಿ ಲಾಭಕ್ಕಿಂತ ನಷ್ಟವೇ ಹೆಚ್ಚು-ನಿಹಾಲ್

Source: sonews | By Staff Correspondent | Published on 25th October 2019, 11:44 PM | Coastal News | Don't Miss |

ಭಟ್ಕಳ; ಕೇಂದ್ರದ ನೂತನ ಶಿಕ್ಷಣ ನೀತಿಯಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಕರ್ನಾಟಕ ಘಟಕದ ಅಧ್ಯಕ್ಷ ನಿಹಾಲ್ ಕಿದಿಯೂರು ಹೇಳಿದರು. 

ಉತ್ತರಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಅವರು ಶುಕ್ರವಾರ ಸಂಜೆ ಭಟ್ಕಳದ ಖಾಸಗಿ ಹೊಟೇಲ್ ನಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. 

ಕೇಂದ್ರ ನೂತನ ಶಿಕ್ಷಣ ನೀತಿಯಲ್ಲಿ ಕೆಲವೊಂದು ಉತ್ತಮ ಅಂಶಗಳಿದ್ದರೂ ಕೂಡ ಅದು ರಾಜ್ಯಗಳ ಸ್ವಾಯುತ್ತತೆಗೆ ಧಕ್ಕೆ ತರುತ್ತದೆ, ದೇಶದ ಧಾರ್ಮಿಕ, ಸಾಮಾಜಿಕ ಸೌಹಾರ್ಧತೆಗೆ ಮಾರಕವಾಗಲಿದೆ. ನಮ್ಮ ದೇಶ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವಿಭಿನ್ನವಾಗಿದ್ದು ಆಯಾ ರಾಜ್ಯಗಳು ತನ್ನದೇ ಆದ ಸಾಂಸ್ಕೃತಿಯ ಬೇರುಗಳನ್ನು ಹೊಂದಿದೆ. ಕೇಂದ್ರದ ನೂತನ ಶಿಕ್ಷಣ ನೀತಿಯಿಂದಾಗಿ ರಾಜ್ಯಗಳ ವಿಭಿನ್ನ ಸಂಸ್ಕೃತಿಗೆ ಪೆಟ್ಟುಬೀಳುತ್ತಿದೆ ಎಂದ ಅವರು ಇದನ್ನು ಎಸ್.ಐ.ಓ ಪ್ರಭಲವಾಗಿ ವಿರೋಧಿಸುತ್ತಿದೆ ಎಂದರು.  

ಕೇಂದ್ರ ಶಿಕ್ಷಣ ನೀತಿಯಲ್ಲಿ ರಾಷ್ಟ್ರೀಯ ಪಠ್ಯಕ್ರಮವನ್ನು ಅಳವಡಿಸಲಾಗುತ್ತದೆ. ಶಿಕ್ಷಣದಲ್ಲಿ ರಾಜ್ಯದ ಇತಿಹಾಸ, ಇಲ್ಲಿನ ಪ್ರಾಮುಖ್ಯತೆಯುಳ್ಳ ವಿಷಯಗಳು ಸೇರ್ಪಡೆಯಾಗುವುದಿಲ್ಲ. ಅದು ಬರಬೇಕು, ಕೇಂದ್ರದಲ್ಲಿ ಶಿಕ್ಷಣ ನೀತಿ ರೂಪಿಸುವುದರಿಂದ ನಾವು ವಂಚಿತರಾಗುತ್ತಿದ್ದೇವೆ ಎಂದ ಅವರು ನಮ್ಮದು ಜಾತ್ಯಾತೀತ ರಾಷ್ಟ್ರವಾಗಿದ್ದು ಅದಕ್ಕನುಗುಣವಾಗಿ ಶಿಕ್ಷಣದಲ್ಲಿನ ಪಠ್ಯಕ್ರಮ ಇರಬೇಕು ಎಂದ ಅವರು, ಹೊಸ ಶಿಕ್ಷಣ ನೀತಿಯಲ್ಲಿಯ ಲೋಪ ದೋಷಗಳ ಕುರಿತು ಈಗಾಗಲೇ ನಾವು ವಿರೋಧ ವ್ಯಕ್ತಪಡಿಸಿದ್ದು ಅದರಲ್ಲಿರುವ ಲೋಪ ದೋಷಗಳನ್ನು ಪಟ್ಟಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದರು.

ನಮ್ಮ ದೇಶ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವಿಭಿನ್ನವಾಗಿದ್ದು ಆಯಾ ರಾಜ್ಯಗಳು ತನ್ನದೇ ಆದ ಸಾಂಸ್ಕೃತಿಯ ಬೇರುಗಳನ್ನು ಹೊಂದಿದೆ. ಕೇಂದ್ರದ ನೂತನ ಶಿಕ್ಷಣ ನೀತಿಯಿಂದಾಗಿ ರಾಜ್ಯಗಳ ವಿಭಿನ್ನ ಸಂಸ್ಕೃತಿಗೆ ಪೆಟ್ಟುಬೀಳುತ್ತಿದೆ

ಹೊಸ ಶಿಕ್ಷಣ ನೀತಿ 2019 ಯಲ್ಲಿ ಸರಕಾರಿ ಶಾಲೆಯಲ್ಲಿಯೇ ಎಲ್.ಕೆ.ಜಿ., ಯು.ಕೆ.ಜಿ. ಆರಂಭಿಸುವುದರಿಂದ ಮುಂದೆ ಮಕ್ಕಳು ಸರಕಾರಿ ಶಾಲೆಯಲ್ಲಿಯೇ ಓದುವಂತಾಗುವುದು ಇದು ಶಿಕ್ಷಣ ನೀತಿಯಲ್ಲಿನ ಉತ್ತಮ ಅಂಶವಾಗಿದೆ. ನಾವು ಖಾಸಗೀ ಶಾಲೆಗಳನ್ನು ವಿರೋಧಿಸುವುದಿಲ್ಲ, ಆದರೆ ಅಲ್ಲಿನ ಡೊನೇಶನ್ ಪದ್ಧತಿಯು ತೀರಾ ಹದಗೆಟ್ಟಿದ್ದು ಸರಕಾರದ ನಿಯಂತ್ರಣ ಮೀರಿ ಬೆಳೆದಿದೆ. ಖಾಸಗೀ ಶಾಲೆಗಳಲ್ಲಿಯ ವಿಪರೀತ ಡೊನೇಶನ್ ಪಡೆಯುವುದಕ್ಕೆ ತಮ್ಮ ಸಂಘಟನೆ ವಿರೋಧವಿದೆ ಎಂದೂ ಹೇಳಿದರು. 

7ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ವಿರೋಧ; ರಾಜ್ಯದಲ್ಲಿ ಮತ್ತೆ ಪುನಃ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ತರುವುದಕ್ಕೆ ನಮ್ಮ ಸಂಘಟನೆ ವಿರೋಧವಿದೆ. ವಿದ್ಯಾರ್ಥಿಗಳು ಎಸ್. ಎಸ್. ಎಲ್. ಸಿ. ತನಕ ಬರುವುದೇ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ 7ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಮಾಡಿದರೆ ತೀವ್ರ ತೊಂದರೆಯಾಗುವುದು, ಬದಲಿಗೆ ನಮ್ಮ ಪರೀಕ್ಷಾ ಪದ್ಧತಿಯನ್ನೇ ಬದಲಾಯಿಸಿ ಎಂದು ಕರೆ ನೀಡಿದರು.  ಹಂಪಿ ವಿಶ್ವವಿದ್ಯಾಲಯದಲ್ಲಿನ ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳು ತಮಗೆ ಕೊಡುತ್ತಿದ್ದ ಸ್ಟೈಫಂಡ್‍ಗಾಗಿ ಪ್ರತಿಭಟನೆ ಮಾಡುತ್ತಿದ್ದು ಅದನ್ನೂ ಕೂಡಾ ಸರಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದನ್ನು ಖಂಡಿಸುತ್ತೇವೆ ಎಂದ ಅವರು ಐ.ಐ.ಟಿ.ಯಲ್ಲಿ ಅತ್ಯಂತ ಕಡಿಮೆಯಲ್ಲಿ ಶಿಕ್ಷಣ ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.

ಭಟ್ಕಳದಲ್ಲಿ ಎಸ್.ಎಸ್.ಎಲ್.ಸಿ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಆಗ್ರಹ; ಭಟ್ಕಳದಲ್ಲಿ ಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬಾಹ್ಯ ಅಭ್ಯರ್ಥಿ(ಖಾಸಗಿ)ಯಾಗಿ ಬರೆಯುವವರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಲೇ ಇದ್ದು ಭಟ್ಕಳದಲ್ಲಿ ಒಂದು ಪರೀಕ್ಷಾ ಕೇಂದ್ರವನ್ನು ಆರಂಭಿಸುವಂತೆ ನಿಹಾಲ್ ಶಿಕ್ಷಣ ಆಧಿಕಾರಿಗಳಿಗೆ ಆಗ್ರಹಿಸಿದರು. ದೂರದ ಕಾರವಾರಕ್ಕೆ ಮೂರು ತಾಸುಗಳ ಪ್ರಯಣಿಸಿ ಪರೀಕ್ಷೆ ಬರೆಯಲು ಖಾಸಗೀ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯುಂಟಾಗುತ್ತಿದ್ದು ಹಲವು ಅನಾಹುತಗಳಿಗ ಕಾರಣವಾಗುತ್ತಿದೆ. ಕಳೆದ ವರ್ಷ ಓರ್ವ ವಿದ್ಯಾರ್ಥಿಯ ಅಪಘಾತದಲ್ಲಿ ಮರಣವೊಂದಿದ್ದು ಇದರಿಂದಾಗಿ ಖಾಸಗಿಯಾಗಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹೆದರುವಂತಾಗಿದೆ. ಭಟ್ಕಳದಲ್ಲಿ ವಿದ್ಯಾರ್ಥಿನೀಯರು, ಮದರಸಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಯನ್ನು ಬರೆಯುತ್ತಿದ್ದು ಅವರ ಹಿತದೃಷ್ಟಿಯಿಂದ ಮುಂಬರು ವರ್ಷದಿಂದಲೇ ಖಾಸಗಿ ಪರೀಕ್ಷಾ ಕೇಂದ್ರವನ್ನು ಆರಂಭಿಸಬೇಕೆಂದು ಅವರು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಎಸ್.ಐ.ಓ. ಭಟ್ಕಳ ಘಟಕದ ಅಧ್ಯಕ್ಷ ಸನಾವುಲ್ಲಾ ಅಸಾದಿ, ಅನಮ್ ಆಲಾ, ಉಮ್ಮರ್ ಸಾನಿ ಮುಂತಾದವರು ಉಪಸ್ಥಿತರಿದ್ದರು. 


 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...