ಭಟ್ಕಳ ವಿವಿಧ ಚರ್ಚಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿದ ಆಚರಣೆ

Source: SO News | By MV Bhatkal | Published on 25th December 2023, 11:29 PM | Coastal News |

ಭಟ್ಕಳ: ತಾಲೂಕಿನ ವಿವಿಧ ಚರ್ಚಗಳಲ್ಲಿ ಹಾಗೂ ಮನೆ ಮನೆಗಳಲ್ಲಿ ಸಡಗರ-ಸಂಭ್ರಮದಿದ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಯಿತು. 
ಹಬ್ಬದ ಪ್ರಯುಕ್ತ ಸೋಮವಾರ ತಾಲೂಕಿನ ಎಲ್ಲಾ ಚರ್ಚುಗಳಲ್ಲಿ ವಿಷೇಶ ಪ್ರಾರ್ಥನೆಯನ್ನು ಏರ್ಪಡಿಸಲಾಗಿದ್ದು ಆಯಾಯ ಚರ್ಚುಗಳಲ್ಲಿಯ ಧರ್ಮಗುರುಗಳು ಪ್ರಾರ್ಥನೆ ಬೋಧಿಸಿದರಲ್ಲದೇ ಕ್ರಿಸ್‌ಮಸ್ ಹಬ್ಬದ ಆಚರಣೆಯ ಕುರಿತು ಉಪನ್ಯಾಸ ನೀಡಿದರು. 
ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಪ್ಯಾರಿಸ್ ಟ್ರಿಸ್ಟ್  ಫಾದರ್ ಪ್ರೇಮ್‌ಕುಮಾರ್ ಅವರು ನಾವು ದೇವರಲ್ಲಿ ಒಳಿತನ್ನೇ ಬೇಡಿಕೊಳ್ಳುತ್ತೇವೆ. ಮೊದಲು ನಾವು ನಮ್ಮ ಮನಸ್ಸು ಮತ್ತು ಹೃದಯವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ನಮ್ಮ ಅಕ್ಕಪಕ್ಕದವರನ್ನು ದ್ವೇಷಿಸದೇ ಪ್ರೀತಿಯಿಂದ ಕಾಣುವಂತಾಗಬೇಕು. ದೇವರ ದಯೆ ನಮಗೆ ಸದಾ ಇರುತ್ತದೆ ಎಂದು ಕ್ರಿಸ್‌ಮಸ್ ಹಬ್ಬದ ಮಹತ್ವವನ್ನು ತಿಳಿಸಿದರು.  
ಹಬ್ಬದ ಪ್ರಯುಕ್ತ ತಾಲೂಕಿನ ಮುಂಡಳ್ಳಿ, ಪುರವರ್ಗ, ಕರಿಕಲ್, ತರ‍್ನಮಕ್ಕಿ, ಸಣ್ಬಾವಿ, ಮುರ್ಡೇಶ್ವರ, ಚರ್ಚಗಳಲ್ಲಿ ಕ್ರಿಶ್ಚನ್ ಬಾಂಧವರು ಸೇರಿ ಅತ್ಯಂತ ಉತ್ಸಾಹ ಸಂಭ್ರಮಾಚರಣೆಯಿದ ಪ್ರಾರ್ಥನೆಯನ್ನು ಮಾಡಿದ್ದು ಎಲ್ಲಾ ಚರ್ಚುಗಳು ಕೂಡಾ ಅತ್ಯಂತ ಸುಂದರವಾಗಿ ದೀಪಾಲಂಕೃತಗೊಡಿದ್ದವು. ಚರ್ಚಗಳಲ್ಲಿ ಏಸು ಕ್ರೆöಸ್ತನ ಬಾಲ್ಯವನ್ನು ನೆನಪಿಸುವ ಉದ್ದೇಶದಿಂದ ನಿರ್ಮಿಸಲಾದ ಗೋದಲಿಗಳು ಎಲ್ಲರ ಗಮನ ಸೆಳೆದರೆ, ಮನೆ ಮನೆ ಗಳಲ್ಲಿ ಕೂಡಾ ಗೋದಲಿಗಳನ್ನು ನಿರ್ಮಿಸಲಾಗಿತ್ತು.

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...