ಹೆಸರಾಂತ ಯಕ್ಷಗಾನ ಕಲಾವಿದ ಚಂದ್ರಹಾಸ ಹುಡುಗೋಡು ರಂಗಸ್ಥಳದಲ್ಲಿ ಕುಸಿದು ಬಿದ್ದು ಸಾವು..!

Source: so news | By MV Bhatkal | Published on 12th March 2019, 12:35 AM | Coastal News | Don't Miss |

ಕುಂದಾಪುರ: ಕಳಚಿತು ಯಕ್ಷಗಾನದ ಇನ್ನೊಂದು ಕೊಂಡಿ.ವೇಷದಲ್ಲಿಯೆ ರಂಗದಲ್ಲಿ ಕುಸಿದು ಹೃದಯಾಘಾತದಿಂದ ಮರಣ ಹೊಂದಿದ್ದಾರೆ.
ಬೈಂದೂರುಲ್ಲಿ ನಡೆಯುತ್ತಿದ್ದ ಯಕ್ಷಗಾನದಲ್ಲಿ ಈ ಘಟನೆ ನಡೆದಿದೆ. ರಂಗದಲ್ಲೇ ಕುಸಿದು ಕಲಾ ಮಾತೆಯ ಮಡಿಲು ಸೇರಿದ ಅಭಿನವ ಸಾಲ್ವ ಚಂದ್ರಹಾಸ ಹುಡುಗೋಡು.ಚಂದ್ರಹಾಸರವರ ಅಪಾರ ಅಭಿಮಾನಿಗಳು ಅವರನ್ನು ‌ಅಗಲಿದ್ದಾರೆ.
ಖ್ಯಾತ ಯಕ್ಷಗಾನ ಕಲಾವಿದ ಹುಡಗೋಡು ಚಂದ್ರಹಾಸ ವೇದಿಕೆಯಲ್ಲೇ ಕುಸಿದು ಮೃತಪಟ್ಟ ಘಟನೆ ಬೈಂದೂರಿನ ಜೋಗಿಬೆಟ್ಟು ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.ಉತ್ತರ ಕನ್ನಡ ಮೂಲದ ಬಡಗುತಿಟ್ಟು ಯಕ್ಷಗಾನದ ಹೆಸರಾಂತ ಕಲಾವಿದರಾಗಿದ್ದ ಹುಡಗೋಡು ಚಂದ್ರಹಾಸ ಅವರಿಗೆ 52 ವರ್ಷ ವಯಸ್ಸಾಗಿತ್ತು.
ಜೋಗಿಬೆಟ್ಟುವಿನಲ್ಲಿ ಜಲವಳ್ಳಿ ಮೇಳದ ವತಿಯಿಂದ ಕಳೆದ ರಾತ್ರಿ ನಡೆದ ಭೀಷ್ಮ ವಿಜಯ ಪ್ರಸಂಗದಲ್ಲಿ ಸಾಲ್ವನ ಪಾತ್ರ ನಿರ್ವಹಿಸಿದ್ದರು. ಸಂಭಾಷಣೆ ಮುಗಿಸಿ ಕುಣಿತ ಆರಂಭಿಸುತ್ತಿದ್ದಂತೆ ಹೃದಯಾಘಾತಕ್ಕೊಳಗಾದ ಚಂದ್ರಹಾಸ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಮೇಲೆತ್ತಿ ಉಪಚರಿಸಿದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...