ನಾಮಧಾರಿ ಸಮಾಜದ ಅಧ್ಯಕ್ಷರಾಗಿ ಉದ್ಯಮಿ ಅರುಣ್ ನಾಯ್ಕ ಮುಂಡಳ್ಳಿ ಅವಿರೋಧ ಆಯ್ಕೆ

Source: SOnews | By Staff Correspondent | Published on 22nd October 2023, 10:13 PM | Coastal News | Don't Miss |

ಭಟ್ಕಳ: ೧೮ ಕೂಟದ ನಾಮಧಾರಿ ಸಮಾಜದ ಅಧ್ಯಕ್ಷರಾಗಿ  ಮುಂದಿನ ಮೂರು ವರ್ಷದ ಅವಧಿಗೆ ಮುಂಡಳ್ಳಿ ಕೂಟದಿಂದ ಆಯ್ಕೆಯಾಗಿದ್ದ ಉದ್ಯಮಿ ಅರುಣ ನಾಯ್ಕ ಮುಂಡಳ್ಳಿ ಅವರು ಅವಿರೋಧವಾಗಿ ಅಯ್ಕೆಯಾದರು. ಶನಿವಾರ ಭಟ್ಕಳದ ನಾಮಧಾರಿ ಸಮಾಜದ ೧೮ ಕೂಟದಿಂದ ಆಯ್ಕೆಯಾದ ಪ್ರತಿನಿಧಿಗಳ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. 

ಪ್ರಧಾನ ಕಾರ್ಯದರ್ಶಿಯಾಗಿ ಹಡೀನ ಕೂಟದಿಂದ ಆಯ್ಕೆಯಾಗಿದ್ದ  ಜನತಾ ಪತ್ತಿನ ಸಹಕಾರಿ ಸಂಘದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಡಿ.ಎಲ್.ನಾಯ್ಕ, ಉಪಾಧ್ಯಕ್ಷರಾಗಿ ಮುಟ್ಟಳ್ಳಿ ಕೂಟದಿಂದ ಆಯ್ಕೆಯಾಗಿದ್ದ ನ್ಯೂ ಇಂಗ್ಲೀಷ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಂ.ಕೆ.ನಾಯ್ಕ ಆಯ್ಕೆಯಾಗಿದ್ದಾರೆ. 

ನಗರದ ಆಸರಕೇರಿ ನಿಚ್ಛಲಮಕ್ಕಿ ವೆಂಕಟ್ರಮಣ ದೇವಸ್ಥಾನದ ಅಭಿವೃದ್ದಿಯ ಜೊತಗೆ ದೇವಸ್ಥಾನದ ಆಡಳಿತ ವ್ಯಾಪ್ತಿಯಲ್ಲಿ ಬರುವ ೧೮ ಕೂಟದ ನಾಮಧಾರಿ ಸಮಾಜದ ಸಮಗ್ರ ಅಭಿವೃದ್ದಿಗೆ ಈ ಆಡಳಿತ ಮಂಡಳಿ ಶ್ರಮಿಸಲಿದೆ. ಚುನಾವಣಾ ಪ್ರಕ್ರಿಯೆಯನ್ನು ಜಾಲಿ ವಿ.ಎಸ್.ಎಸ್.ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶಾಂತಾರಾಮ ನಾಯ್ಕ, ಪಿ.ಎಲ್.ಡಿ. ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ವಾಸು ಎಂ. ನಾಯ್ಕ ನಡೆಸಿಕೊಟ್ಟರು. 

ನಿಕಟಪೂರ್ವ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ, ಸದಸ್ಯರಾದ ಪ್ರಕಾಶ ನಾರಾಯಣ ನಾಯ್ಕ ಆಸರಕೇರಿ, ಮುಕುಂದ ಶನಿಯಾರ ನಾಯ್ಕ ಬೆಳ್ನಿ, ಕೆ.ಆರ್.ನಾಯ್ಕ ತಲಗೋಡ, ಮಬ್ಲೇಶ್ವರ ಲಚ್ಮಯ್ಯ ನಾಯ್ಕ ಜಾಲಿ, ರೋಹಿದಾಸ ಮಂಜಪ್ಪ ನಾಯ್ಕ ಹೊನ್ನೆಗದ್ದೆ, ಶ್ರೀಧರ ನಾರಾಯಣ ನಾಯ್ಕ ಹೆಬಳೆ, ವಾಸುದೇವ ನಾರಾಯಣ ನಾಯ್ಕ ಹಾಡವಳ್ಳಿ, ಕೆ.ಜೆ. ನಾಯ್ಕ ಮಾರುಕೇರಿ, ನಾಗೇಶ ನಾರಾಯಣ ನಾಯ್ಕ ಸಂಕದಹೊಳೆ, ಮಂಜುನಾಥ ಸುಬ್ಬಯ್ಯ ನಾಯ್ಕ ಬೆಣಂದೂರು, ನಾಗಪ್ಪ ಮಾಸ್ತಯ್ಯ ನಾಯ್ಕ ಪಿನ್ನುಪಾಲು, ದೇವಿದಾಸ ಮಾಸ್ತಪ್ಪ ನಾಯ್ಕ ಗೊರ್ಟೆ, ವೆಂಕಟರಮಣ ಮಾಸ್ತಪ್ಪ ನಾಯ್ಕ ಯಲ್ವಡಿಕವೂರು, ಅಣ್ಣಪ್ಪ ಶಂಕರ ನಾಯ್ಕ ಮಣ್ಕುಳಿ, ದೇವೇಂದ್ರ ನಾಯ್ಕ  ಹುರುಳಿಸಾಲ್ ಮುಂತಾದವರು ಉಪಸ್ಥಿತರಿದ್ದರು.
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...