ಫೆ.೧೭ರಿಂದ ೧೯ರ ವರೆಗೆ ಶ್ರೀ ಕ್ಷೇತ್ರ ದೇವಿಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ವರ್ಧಂತ್ಯುತ್ಸವ

Source: SOnews | By Staff Correspondent | Published on 12th February 2024, 6:19 PM | Coastal News |

 

ಭಟ್ಕಳ : ತಾಲ್ಲೂಕಿನ ಶಕ್ತಿಸ್ಥಳವಾದ ಶ್ರೀ ಕ್ಷೇತ್ರ ದೇವಿಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ವರ್ಧಂತ್ಯುತ್ಸವ, ಸ್ವರ್ಣಲೇಪಿತ ಶಿಖರ ಕಲಶ ಪ್ರತಿಷ್ಠೆ, ಅನ್ನಪೂರ್ಣೇಶ್ವರಿ ಭೋಜನಾಲಯ ಹಾಗೂ ಶ್ರೀ ದುರ್ಗಾಪರಮೇಶ್ವರಿ ಸಭಾಭವನದ ಲೋಕಾರ್ಪಣೆ ಮತ್ತು ರಥೋತ್ಸವ ಫೆ.೧೭ರಿಂದ ೧೯ರ ವರೆಗೆ ಶ್ರೀರಾಮಚಂದ್ರಾಪುರ ಮಠದ ಶ್ರೀ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿದೆ.

ಈ ಕುರಿತು ಮಾಹಿತಿ ನೀಡಿದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ಅವರು, ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಫೆ.೧೬ರಿಂದಲೇ ಆರಂಭಗೊಳ್ಳಲಿದ್ದು, ಫೆ. ೧೭ ರಂದು ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾಯರ್ಯಕ್ರಮಗಳು, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಮಧ್ಯಾಹ್ನ ೩ ಗಂಟೆಗೆ ರಾಘವೇಶ್ವರ ಶ್ರೀಗಳು ಆಗಮಿಸಲಿದ್ದು, ಅವರಿಗೆ ಪೂರ್ಣಕುಂಭದ ಸ್ವಾಗತ ನೀಡಲಾಗುತ್ತದೆ. ಸಂಜೆ ೬ ಗಂಟೆಯಿಂದ ಯಾಗಶಾಲಾ ಪ್ರವೇಶ, ಸಹಸ್ರಾಧಿಕ ಬ್ರಹ್ಮಕಲಶ ಸ್ಥಾಪನೆ, ಕುಂಭೇಶ ಪೂಜೆ, ಸ್ವರ್ಣಲೇಪಿತ ಶಿಖರ ಕಲಶ ಮತ್ತು ರಜತ ಉತ್ಸವ ಮೂರ್ತಿಯ ಆದಿವಾಸಪೂಜೆ, ಸಂಜೆ ೬.೩೦ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಸಂಜೆ ೫ ಗಂಟೆಗೆ ಸಭಾ ಕಾರ್ಯಕ್ರಮವನ್ನು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ದೇವಿಮನೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಸದ ಅನಂತಕುಮಾರ ಹೆಗಡೆ, ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಎಂ ಗೊಂಡ, ಮಾಜಿ ಶಾಸಕ ಸುನೀಲ ನಾಯ್ಕ, ರಾಮಚಂದ್ರಾಪುರ ಮಠದ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ, ಹೊನ್ನಾವರ ಮಂಡಲದ ಅಧ್ಯಕ್ಷ ಆರ್ ಜಿ ಹೆಗಡೆ, ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಎಂ ಭಟ್ಟ ತೆಕ್ನಗದ್ದೆ, ದೇವಿಮನೆ ಬ್ರಹ್ಮಕಲಶೋತ್ಸವದ ಅಧ್ಯಕ್ಷ ವಿನಾಯಕ ಆರ್ ಭಟ್ಟ ಉಪಸ್ಥಿತರಿರಲಿದ್ದಾರೆ ಎ ರಾತ್ರಿ ಅನ್ನಸಂತರ್ಪಣೆ ಮತ್ತು ೮ ಗಂಟೆಯಿಂದ ಸಶಿವಶಾಂತಿಕಾ ಯಕ್ಷಗಾನ ಬಳಗದವರಿಂದ ಅತಿಥಿಕಲಾವಿದರ ಕೂಡುವಿಕೆಯಲ್ಲಿ ಲವ-ಕುಶ ಯಕ್ಷಗಾನ ಪ್ರದರ್ಶನ ನಡೆಯಲಿದೆ ಫೆ. ೧೮ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ನಂತರ ಸ್ವರ್ಣಲೇಪಿತ ಶಿಖರ ಕಲಶ ಪ್ರತಿಷ್ಠೆ, ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಶ್ರೀದೇವರಿಗೆ ಬ್ರಹ್ಮಕಲಷಾಭಿಷೇಕ, ರಥೋತ್ಸವ,ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ರಾಘವೇಶ್ವರ ಶ್ರೀಗಳಿಂದ ಧರ್ಮಸಭೆ, ಆಶೀರ್ವಚನ, ಅನುಗ್ರಹ ಮಂತ್ರಾಕ್ಷತೆ ನಡೆಯಲಿದೆ. ಸಂಜೆ ಮಹಾರುದ್ರಹವನ-ಪಂಚದುರ್ಗಾ ಹವನದ ಅಂಗವಾಗಿ ಕಲಶಸ್ಥಾಪನೆ, ರುದ್ರಾಕ್ರಮಾರ್ಚನೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ಸಂಜೆ ೫ ಗಂಟಗೆ ಶ್ರೀ ರಕ್ಷಾ ಗಜಾನನ ಹೆಬ್ಬಾರ ಇವರಿಂದ ತಬಲಾ ಸೋಲೋ, ೫.೩೦ಕ್ಕೆ ನಾಟ್ಯದೀಪ ಕಲ್ಚರಲ್ ತಂಡ ಶಿರಸಿ ಇವರಿಂದ ಭರತನಾಟ್ಯ ರೂಪಕ ನೃತ್ಯ, ಸಂಜೆ ೭.೩೦ಕ್ಕೆ ತಾನಸೇನ್ ಪ್ರಶಸ್ತಿ ವಿಜೇತ ಪಂಡಿತ ಗಣಪತಿ ಭಟ್ಟ ಹಾಸಣಗಿ ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ರಾತ್ರಿ ೯ ಗಂಟೆಗೆ ಸರಿಗಮ ಖ್ಯಾತಿಯ ಶ್ರೀಹರ್ಷ ತಂಡದವರಿಂದ ನರಹರಿ ದೀಕ್ಷಿತ ಸಾರಥ್ಯದಲ್ಲಿ ಭಕ್ತಿ ಭಾವ ಸಂಗಮ ನಡೆಯಲಿದೆ. ಫೆ. ೧೯ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮಹಾರುದ್ರ ಮತ್ತು ಪಂಚದುರ್ಗಾ ಹವನದ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪೂರ್ಣ ಸದಾಶಿವ ಹೆಗಡೆ, ಶ್ರೀಯಾ ದತ್ತಾತ್ರಯ ಹೆಬ್ಬಾರ ಇವರಿಂದ ಭರತ ನಾಟ್ಯ, ಸಂಜೆ ೬.೩೦ಕ್ಕೆ ಭವತಾರಿಣಿ ವಲಯದ ಮಾತೆಯರ ಭಜನಾ ತಂಡಗಳಿಂದ ಭಜನ್ ಸಂಧ್ಯಾ ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಮತ್ತು ಶ್ರೀಗಳ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಶಿವಾನಂದ ಹೆಬ್ಬಾರ ಮುಲ್ಲೆಮಕ್ಕಿ, ಬ್ರಹ್ಮ ಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ಮತ್ತು ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಭಟ್ಟ ತೆಕ್ನಗದ್ದೆ, ಬ್ರಹ್ಮ ಕಲಶೋತ್ಸವದ ಉಪಾಧ್ಯಕ್ಷ ಪರಮೇಶ್ವರ ಭಟ್ಟ, ಎಂ ಎಂ ಹೆಬ್ಬಾರ, ಪ್ರಮೋದ ಜೋಷಿ, ರಾಘವೇಂದ್ರ ಹೆಬ್ಬಾರ ಮುಂತಾದವರಿದ್ದರು.

Read These Next

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...