ಕಾಂಗ್ರೇಸ್ ನಲ್ಲಿ ಬದಿಗೆ ತಳ್ಳಲ್ಪಟ್ಟ ಬಿ.ಕೆ.ಹರಿಪ್ರಸಾದ್-ಮುಂದಿನ ರಾಜಕೀಯ ಭವಿಷ್ಯವೇನು?

Source: SOnews | By Staff Correspondent | Published on 16th June 2023, 3:53 PM | Special Report |

ಎಂ.ಆರ್.ಮಾನ್ವಿ

ಕಾಂಗ್ರೇಸ್ ಪಕ್ಷದಲ್ಲಿ ಸಿದ್ಧರಾಮಯ್ಯನವರಷ್ಟೆ ಅತ್ಯಂತ ಖಡಕ್ ಆಗಿ ಮತ್ತು ತೀಕ್ಷ್ಣವಾಗಿ ಬಿಜೆಪಿ ಮತ್ತು ಸಂಘಪರಿವಾರದ ಸಿದ್ದಾಂತಗಳನ್ನು ವಿರೋಧಿಸುವ ವ್ಯಕ್ತಿ ಎಂದರೆ ಅದು ಬಿ.ಕೆ. ಹರಿಪ್ರಸಾದ್. ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಬಹುಮತ ಪಡೆಯಲು ಸಿದ್ಧರಾಮಯ್ಯ, ಡಿಕೆಶಿ, ಪ್ರಿಯಾಂಕ್ ಕರ್ಗೆ ಯವರಷ್ಟೇ ಬಿ.ಕೆ. ಹರಿಪ್ರಸಾದ್ ರು ಕಾರಣರು. ಇವರ ಪ್ರಖರ ಜಾತ್ಯಾತೀತ ಚಿಂತನೆಗಳು, ಮಾತಿನ ವೈಖರಿ, ಸೈದ್ಧಾಂತಿಕ ನಿಲುವು. ಈ ಎಲ್ಲ ಗುಣಗಳಿಂದ ಅವರೊಬ್ಬ ಪ್ರಭಾವಿ ನಾಯಕನಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದರು.

ಫಲಿತಾಂಶ ಬಂದ ಮೇಲೆ ಬಿಕೆ ಯವರಿಗೆ ಪವರ್ ಫುಲ್ ಖಾತೆ ಸಿಗುತ್ತದೆ ಎಂದು ಜನರು ಭಾವಿಸಿದ್ದರು. ಆದರೆ ಆಶ್ಚರ್ಯ ಎಂಬಂತೆ ಬಿ.ಕೆ.ಹರಿಪ್ರಸಾದ್ ರಿಗೆ ಯಾವುದೇ ಸಚಿವ ಸ್ಥಾನ ನೀಡದೆ ಅವರನ್ನು ನಿರಾಶೆಗೊಳಿಸಿತು. ಅಷ್ಟೆ ಅಲ್ಲ ಅವರೊಬ್ಬ ಬದಿಗೆ ತಳ್ಳಲ್ಪಟ್ಟ ನಾಯಕ ಎಂಬ ಪಟ್ಟ ಕಟ್ಟಿಕೊಳ್ಳಬೇಕಾಯಿತು.

ಬಿ.ಕೆ. ಹರಿಪ್ರಸಾದ್ ಭಾರತೀಯ ರಾಜಕಾರಣಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷದ ಸದಸ್ಯ. ಅವರು ವಿವಿಧ ರಾಜಕೀಯ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಹಲವಾರು ದಶಕಗಳಿಂದ ಭಾರತೀಯ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹರಿಪ್ರಸಾದ್ ಅವರು ಐಎನ್‌ಸಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನ ಸೇರಿದಂತೆ ಹಲವಾರು ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಹರಿಪ್ರಸಾದ್ ಅವರು ಪಕ್ಷಕ್ಕೆ ನೀಡಿದ ಕೊಡುಗೆ ಮತ್ತು ಪಕ್ಷದ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರು ರೈತರ ಹಕ್ಕುಗಳ ಪರವಾಗಿ ಧ್ವನಿ ಎತ್ತಿದ್ದಾರೆ ಮತ್ತು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವರು ತಮ್ಮ ಕ್ಷೇತ್ರ ಮತ್ತು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಕ್ರಿಯರಾಗಿದ್ದಾರೆ.

ಇಂತಹ ಅದ್ಭುತ ಪ್ರತಿಭಾವಂತ ರಾಜಕಾರಣಿಗೆ ಸಿದ್ಧರಾಮ್ಯನವರ ಸರ್ಕರದಲ್ಲಿ ಯಾವುದೇ ಸ್ಥಾನಮಾನ ನೀಡದಕ್ಕೆ ಅವರ ಅಭಿಮಾನಿಗಳು ಮತ್ತು ಬಿಲ್ಲವ ಸಮುದಾಯ ತುಂಬಾ ನಿರಾಸೆಗೊಂಡಿದೆ. ಅವರ ರಾಜಕೀಯ ಭವಿಷ್ಯದ ಬಗ್ಗೆಯೆ ಜನರಲ್ಲಿ ಅನುಮಾನ ಮೂಡತೊಡಗಿದೆ. ಸಚಿವ ಸಂಪುಟ ರಚನೆಯಾದಂದಿನಿಂದ ಇಂದಿನ ವರೆಗೆ ಅವರ ಯಾವುದೇ ಹೇಳಿಕೆಗಳಾಗಲಿ ರಾಜಕೀಯ ಚಟುವಟಿಕೆಗಳಾಗಲಿ ನಡೆದಿದ್ದು ವರದಿಯಾಗಿಲ್ಲ. ಇತ್ತಿಚೆಗೆ ಕಾಂಗ್ರೇಸ್ ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಉದ್ಘಾಟನೆಗೊಂಡಿತು. ಆ ಕಾರ್ಯಕ್ರಮದಲ್ಲಿ ಬಿ.ಕೆ. ಎಲ್ಲೋ ಮೂಲೆಯೊಂದರಲ್ಲಿ ಕಾಣಿಸಿಕೊಂಡರು. ಅವರು ಸಿದ್ದರಾಮಯ್ಯನವರ ನಡಾವಳಿಕೆಯಿಂದ ಬೇಸತ್ತಿದ್ದಾರೆ ಎಂಬುದೇ ಇದಕ್ಕೆ ಕಾರಣ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ.

ಬಿ.ಕೆ. ಹರಿಪ್ರಸಾದ್ ರಿಗೆ ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಸ್ಥಾನಮಾನ ದೊರೆಯಬಹುದು ಎಂಬ ನಂಬಿಕೆ ಇದೆ. ಆದರೆ ಅವರು ರಾಜ್ಯ ರಾಜಕೀಯಕ್ಕೆ ಬರುತ್ತಾರೋ ಅಥವಾ ಲೋಕಸಭೆ ಚುನವಣೆ ಎದುರಿಸಿ ಕೇಂದ್ರ ಸೇರಿಕೊಳ್ಳುತ್ತಾರೋ ಎಂಬುದು ಕಾಲವೇ ಹೇಳಲಿದೆ. ಅಂದ ಹಾಗೆ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಲೋಕಾಸಭಾ ಕ್ಷೇತ್ರದಿಂದ ಬಿ.ಕೆ. ಹರಿಪ್ರಾಸ್ ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.  

ಅನುಭವಿ ರಾಜಕಾರಣಿಯಾಗಿ ಬಿ.ಕೆ. ಹರಿಪ್ರಸಾದ್ ಅವರು INC ಯ ಸಿದ್ಧಾಂತ ಮತ್ತು ಕಾರ್ಯಸೂಚಿಯನ್ನು ಉತ್ತೇಜಿಸಲು ರಾಜಕೀಯ ಚರ್ಚೆಗಳು, ಚರ್ಚೆಗಳು ಮತ್ತು ಪ್ರಚಾರಗಳಲ್ಲಿ ಭಾಗವಹಿಸಿದ್ದಾರೆ. ಅವರು ಪಕ್ಷದೊಳಗೆ ಪ್ರಭಾವಿ ವ್ಯಕ್ತಿಯಾಗಿದ್ದಾರೆ ಮತ್ತು ಅದರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...