ಭಟ್ಕಳ:ಹಾಡುವಳ್ಳಿ ಗ್ರಾಮ ಪಂಚಾಯತ ಕ್ಕೆ ಗಾಂಧಿ ಗ್ರಾಮ ಪುರಸ್ಕಾರ

Source: SO News | By MV Bhatkal | Published on 2nd October 2023, 12:37 AM | Coastal News | Don't Miss |

ಭಟ್ಕಳ: ಸುತ್ತಮುತ್ತ ಕಾಡುಮೇಡು, ಜೈನ ಸಂಸ್ಕೃತಿಯ ಕುರುಹುಗಳನ್ನು ಈಗಲೂ ತಲೆಯ ಮೇಲೆ ಹೊತ್ತುಕೊಂಡು ಮೆರೆಯುತ್ತಿರುವ, ಇಂದ್ರಗಿರಿ, ಚಂದ್ರಗಿರಿ ಬೆಟ್ಟದ ತಪ್ಪಲಿನಲ್ಲಿ ಇರುವ ತಾಲೂಕಿನ ಹಾಡುವಳ್ಳಿ ಗ್ರಾಮ ಪಂಚಾಯತ 2022-2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಈ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 2011ನೇ ಜನಗಣತಿಯ ಪ್ರಕಾರ 3982 ಜನಸಂಖ್ಯೆ ಇದ್ದು, 910 ಮನೆಗಳು ಇವೆ. ಅತಿ ಹಿಂದುಳಿದ ಕುಮಿ ಮರಾಠಿಗಳು, ಗೊಂಡ ಸಮುದಾದವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಒಂದು ಕಾಲದಲ್ಲಿ ಹಳ್ಳ, ಹೊಳೆಯನ್ನು ದಾಟಲಾಗದೇ ಕಂಬಳಿಯಲ್ಲಿ ಗರ್ಭಿಣಿ, ಬಾಣಂತಿಯರನ್ನು ತೂಗು ಸೇತುವೆಯ ಮೇಲೆ ಸಾಗಿಸುತ್ತಿದ್ದ ಪರಿಸ್ಥಿತಿ ಈಗ ಇಲ್ಲ. ಹಳ್ಳಿ ಹಳ್ಳಿಗೂ ರಸ್ತೆ ನಿರ್ಮಾಣವಾಗಿದೆ. ಕಳೆದ ಒಂದೆರಡು ದಶಕಗಳ ಅವಧಿಯಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರು ಪೂರೈಕೆಯಂತಹ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತ ಬರಲಾಗಿದೆ. 2016-17ರಲ್ಲಿ ಮೊದಲ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದ್ದ ಹಾಡುವಳ್ಳಿ ಗ್ರಾ. ಪಂ ಪ್ರಸಕ್ತವಾಗಿ (2022-2023) ಇಲ್ಲಿನ ಜನರ ಜೀವನ ಮಟ್ಟ, ಪಂಚಾಯತ ಆನ್‌ಲೈನ್‌ ಸೇವೆ, ಅಭಿವೃದ್ಧಿ ಚಟುವಟಿಕೆಗಳು, ಅನುದಾನ ಬಳಕೆ, ಉತ್ತಮ ಆಡಳಿತದ ಮೂಲಕ 2ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರವನ್ನು ತನ್ನದಾಗಿಸಿಕೊಳ್ಳುತ್ತಿದೆ. ಶ್ರೀಧರ ಶೆಟ್ಟಿ 2ನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ಹಿಡಿದಿದ್ದರೆ, ಯಾದವ ನಾಯ್ಕ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...