ಮುರ್ಡೇಶ್ವರ ಪಾಲಿಟೆಕ್ನಿಕ್ ಕ್ಯಾಂಪಸ್ ಸಂದರ್ಶನ; ೬೭ ವಿದ್ಯಾರ್ಥಿಗಳು ಆಯ್ಕೆ

Source: S O News service | By Staff Correspondent | Published on 10th February 2017, 6:05 PM | Coastal News | Technology | Don't Miss |

ಭಟ್ಕಳ: ಬೆಂಗಳೂರು ಟಯಟೊ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿ ಇತ್ತಿಚೆಗೆ  ಮುರ್ಡೇಶ್ವರ ಆರ್. ಎನ್. ಎಸ್ ಪಾಲಿಟೆಕ್ನಿಕ್ ನಲ್ಲಿ  ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಜಿಲ್ಲೆಯ ೬೭ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಪ್ಲೇಸ್ಮೆಂಟ್ ಅಧಿಕಾರಿ ಕೆ.ಮರಿಸ್ವಾಮಿ ತಿಳಿಸಿದ್ದಾರೆ. 

ಮುರ್ಡೇಶ್ವರ ಆರ್.ಎನ್.ಎಸ್ ಪಾಲಿಟೆಕ್ನಿಕ್‌ನ ೧೯ ವಿದ್ಯಾರ್ಥಿಗಳು, ಎಸ್.ವಿ. ಪಾಲಿಟೆಕ್ನಿಕ್ ಕುಮಟಾದ ೩೧ ವಿದ್ಯಾರ್ಥಿಗಳು, ಸಿದ್ದಾಪುರದ ಸರ್ಕಾರಿ ಪಾಲಿಟೆಕ್ನಿಕ್‌ನ ೬ ವಿದ್ಯಾರ್ಥಿಗಳು, ಕಾರವಾರ ಸರಕಾರಿ ಪಾಲಿಟೆಕ್ನಿಕ್‌ನ  ೭ ವಿದ್ಯಾರ್ಥಿಗಳು ಮತ್ತು ಮುಂಡಗೋಡ ಸರಕಾರಿ ಪಾಲಿಟೆಕ್ನಿಕ್‌ನ ೪ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ 

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆರ್.ಎನ್,.ಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎಂ.ವಿ.ಹೆಗಡೆ ಹಾಗೂ ಪ್ರಾಚಾರ್ಯರಾದ ಸಂತೋಷ ಆರ್.ಎ ರವರು ಅಭಿನಂದಿಸಿದ್ದಾರೆ. 

ಈ ಸಂದರ್ಭದಲ್ಲಿ ಕಂಪನಿಯ ಎಚ್.ಆರ್. ಮ್ಯಾನೇಜರ್‌ಗಳಾದ ಪ್ರವೀಣ ಕುಮಾರ ಶೆಟ್ಟಿ ಮತ್ತು  ನಂದೀಶ್  ಉಪಸ್ಥಿತರಿದ್ದರು. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...

ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ...