ಈದ್ ಮಿಲಾದುನ್ನಬಿ ಶಾಂತಿ ಸಭೆಯಲ್ಲಿ ವಾಗ್ವಾದ; ಪೊಲೀಸರ ಮಧ್ಯಸ್ಥಿಕೆಯಿಂದ ಶಮನ

Source: sonews | By Staff Correspondent | Published on 29th November 2017, 4:11 PM | Coastal News | Don't Miss |

ಭಟ್ಕಳ: ಈದ್ ಮಿಲಾದುನ್ನಬಿ ಪ್ರಯುಕ್ತ ತಾಲೂಕಾಡಳಿತ ಕರೆದ ಶಾಂತಿ ಸಭೆಯಲ್ಲಿ ಸುನ್ನಿ ಪಂಗಡದ ಎರಡು ಗುಂಪುಗಳಲ್ಲಿ ವಾಗ್ವಾದ ನಡೆದು ಪೊಲೀಸರ ಮಧ್ಯಸ್ಥಿಕೆಯಿಂದಾಗಿ ವಾಗ್ವಾದ ತಣ್ಣಗಾಗಿದ್ದು ಎರಡು ಸಂಘಟನೆಗಳು ಪರಪಸ್ಪರ ಹೊಂದಾಣಿಕೆಯಿಂದ ಮಿಲಾದುನ್ನಬಿ ಕಾರ್ಯಕ್ರಮ ನಡೆಸುವಂತೆ ಸೂಚಿಸಿದ ಘಟನೆ ತಹಸಿಲ್ದಾರ್ ಕಚೀರಿಯಲ್ಲಿ ಜರಗಿದೆ.  
ಶಾಂತಿಯುತವಾಗಿ  ಈದ್ ಮಿಲಾದ ಆಚರಿಸುವ ಉದ್ದೇಶದಿಂದ ಐಎಎಸ್ ಪ್ರೋಬೆಷನರಿ  ಅಧಿಕಾರಿ ಆನಂದ, ತಹಶೀಲ್ದಾರ್ ವಿ.ಎನ್ ಬಾಡಕರ್ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿಯಲ್ಲಿ ಸಭೆ ನಡೆಯಿತು. ಇದಾರೆ ಫೈಝುರ್ರಸೂಲ್ ಮತ್ತು ಬಜ್ಮೆ ಫೈಝುರ್ರಸೂಲ್ ಎಂಬ ಎರಡು ಸುನ್ನಿ ಪಂಗಡದ ಸಂಘಟನೆ ಸದಸ್ಯರನ್ನು ಸಭೆಗೆ ಆಹ್ವಾನಿಸಿದ್ದರು. ತಮ್ಮ ಸಂಘದ ಬ್ಯಾನರ್ ಅಡಿಯಲ್ಲೇ ಈದ್ ಮಿಲಾದ ನಡೆಯಬೇಕು ಎಂದು ಎರಡೂ ಸಂಘಟನೆಗಳ ಸದಸ್ಯರು ಬೇಡಿಕೆ ಇಟ್ಟರು.ಅಲ್ಲದೇ ಬ್ಯಾನರ ಹಾಕುವ ವಿಚಾರ, ಡಿ.ಜೆ ವಿಷಯದಲ್ಲೂ ಒಮ್ಮತ ಮೂಡದೆ ಸಭೆ ಗೊಂದಲದ ಗೂಡಾಗಿ ಮಾರ್ಪಟಿತ್ತು. 
    
ಈ ಸಂದರ್ಭದಲ್ಲಿ ಸಿಪಿಐ ಕುಮಾರಸ್ವಾಮಿ ಮಾತನಾಡಿ 2 ಸಂಘಟನೆಗಳು ಬೇರೆ ಬೇರೆಯಾಗಿ ಕಾರ್ಯಕ್ರಮ ನಡೆಸಲು ಆಡಳಿತ ಒಪ್ಪಿಗೆ ನೀಡುವದಿಲ್ಲ. 2 ಸಂಘಟನೆಯ  ತಲಾ 4 ಸದಸ್ಯರು, ಒರ್ವ  ಮೌಲಾನರನ್ನು ಸೇರಿಸಿ ಈದ್ ಮಿಲಾದಗಾಗಿ ಸರ್ವ ಧರ್ಮ ಒಕ್ಕೂಟವನ್ನು ನಿರ್ಮಿಸಿ, ಇದರ ಅಡಿಯಲ್ಲೆ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಇಬ್ಬರಿಗೂ ಪರವಾನಿಗೆ ನೀಡುವದಿಲ್ಲ. ಡಿ.ಜೆ ನಡೆಸಲು ಅವಕಾಶವಿಲ್ಲ. ಆದರೆ ಮೈಕ್ ಪರವಾನಿಗೆ ನೀಡುತ್ತೇವೆ. ಸಾರ್ವಜನಿಕರ ತೊಂದರೆಯಾಗದಂತೆ ಶಾಂತ ರೀತಿಯಿಂದ ಹಬ್ಬವನ್ನು ಆಚರಿಸಿ ಎಂದು ಸೂಚಿಸಿದರು. ಉಭಯ ತಂಡದವರು ಇದಕ್ಕೆ ಸಹಮತ ವ್ಯಕ್ತಪಡಿಸಿ ತಾಲ್ಲೂಕಾಡಳಿತದ ನಿರ್ದೇಶನದಂತೆ ಆಚರಣೆ ಮಾಡುತ್ತೆವೆ ಎಂದು ಭರವಸೆ ನೀಡಿದರು.

ಸಂಘಟನೆಗಳ ಪ್ರಮುಖರಾದ ಕೆ.ಎಂ ಶರೀಪ್, ಮುನೀರ್, ಖಾಜಾ ಮೈನುದ್ದೀನ್, ಸಿಪಿಐ ಪಿಎಸ್‍ಐ ಕುಡಗಂಟಿ, ಪರಮೇಶ್ವರ ಸೇರಿದಂತೆ ಇತರರು ಇದ್ದರು.
 

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...