ಬಾಗಲಕೋಟೆ ಮೂಲದ ಇಬ್ಬರು ಮುರುಡೇಶ್ವರ ಸಮುದ್ರದಲೆಗೆ ಬಲಿ

Source: SO News | By MV Bhatkal | Published on 23rd October 2023, 11:56 PM | Coastal News | Don't Miss |

ಭಟ್ಕಳ:ಮುರುಡೇಶ್ವರಕ್ಕೆ ಆಗಮಿಸಿದ್ದ ಎರಡು ವಿಭಿನ್ನ ಗುಂಪಿಗೆ ಸೇರಿದ ಇಬ್ಬರು ಯುವಕರು ಒಂದೇ ದಿನ ಸಮುದ್ರ ಪಾಲಾಗಿರುವ ಘಟನೆ ಮುರುಡೇಶ್ವ ಸಮುದ್ರ ತೀರದಲ್ಲಿ ನಡೆದಿದೆ. 

ಇಬ್ಬರು ಕೂಡ ಬಾಗಲಕೋಟೆ ಜಿಲ್ಲೆಯವರೆಂದು ತಿಳಿದು ಬಂದಿದೆ.ಅವರಲ್ಲಿ ಓರ್ವ ಮಂಜುನಾಥ ರಮೇಶ ಹಡಪದ(25) ಬಾಗಲಕೋಟೆ ಜಿಲ್ಲೆಯ ನೀರ ಬೂದಿಹಾಳನವನಾಗಿದ್ದು .ಹಾಲಿ ನವನಗರದಲ್ಲಿ ವಾಸವಾಗಿದ್ದನು. ಈತ ತನ್ನ ಕುಟುಂಬದವರೊಂದಿಗೆ ಮುರುಡೇಶ್ವ ಪ್ರವಾಸಕ್ಕೆ ಬಂದ ವೇಳೆ ಕುಟುಂಬ ಸದಸ್ಯರೊಂದಿಗೆ ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ 

ಇನ್ನೋರ್ವ ಕ್ರಷ್ಣಪ್ಪ ಕರಿಯಪ್ಪ ಹರಕಂಗಿ (18)ಬಾಗಲಕೋಟೆ ಜಿಲ್ಲೆಯ ಲೋಕಾಪುರ ನಿವಾಸಿಯಾಗಿದ್ದನು. ಈತ ತನ್ನ  ಧಾರವಾಡ ಮೂಲದ ನಾಲ್ಕು ಜನ  ಸ್ನೇಹಿತರೊಂದಿಗೆ ಮುರುಡೇಶ್ವ ಪ್ರವಾಸಕ್ಕೆ ಬಂದಿದ್ದು. ಮೊದಲು ದೇವಸ್ಥಾನದ ಎಡ ಬದಿಯ ಸಮುದ್ರದಲ್ಲಿ ಆಟವಾಡುತ್ತಿದ್ದವರು ನಂತರ ದೇವಸ್ಥಾನದ ಎಡ ಬದಿಯ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ. 
ಸಾಲು ಸಾಲು ರಜೆದ ಹಿನ್ನೆಲೆಯಲ್ಲಿ ಮುಡೇಶ್ವರದಲ್ಲಿ ಪ್ರವಾಸಿಗರು ಹೆಚ್ಚಿದ್ದು ಸಮುದ್ರ ಇಳಿಯದಂತೆ 
ಲೈಫ್ ಗಾರ್ಡ್ ಎಷ್ಟೇ ಬಾರಿ ಸೂಚಿಸಿದರು ಇದನ್ನು ಧಿಕ್ಕರಿಸಿ ಸಮುದ್ರ ಇಳಿದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ಕುರಿತು ಮುರುಡೇಶ್ವ ಪೊಲೀಸ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...