ಭಟ್ಕಳ; ‘ಆಧಾರ’ ಸಮಸ್ಯೆಗೆ ಆಲಿಸುವವರೇ ಇಲ್ಲ

Source: sonews | By Staff Correspondent | Published on 29th July 2019, 7:39 PM | Coastal News | Don't Miss |

•    ಬೆಳಗಿನ ಜಾವದಿಂದಲೇ ಜನಶ್ರೀ ಕೇಂದ್ರದಲ್ಲಿ ಸರತಿ ಸಾಲು

ಭಟ್ಕಳ: ದಿನಕಳೆದಂತೆ ಆಧಾರ ಬೇಡಿಕೆ ಹೆಚ್ಚಾಗುವುದರೊಂದಿಗೆ ಅದನ್ನು ಪಡೆದುಕೊಳ್ಳುವ ಬಿಕ್ಕಟ್ಟು ವಿಪರೀತವಾಗುತ್ತಿದೆ. ಎಲ್ಲೆಲ್ಲೂ ಆಧಾರ ಕಾರ್ಡ್ ನ ಕೂಗೆ ಕೇಳಿಸುತ್ತಿದ್ದು, ಆದರೆ ಅದೇ ಪ್ರಗತಿಯಲ್ಲಿ ಆಧಾರ ನೋಂದಣಿ ತಿದ್ದುಪಡಿ ಆಗುತ್ತಿಲ್ಲ. ಇದರಿಂದ ಅಂಚೆಕಛೇರಿ, ಅಟಲ್‍ಜೀ ಜನಶ್ರೀ ಕೇಂದ್ರ ಎದುರು ಎರಡು ಮೂರು ದಿನ ಹಸಿವು ಬಾಯರಿಕೆಯಿಂದ ಸರತಿಯಲ್ಲಿ ನಿಂತುಕೊಂಡು ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಸೋಮವಾರ ಇಲ್ಲಿನ ಜನಶ್ರೀ ಕೇಂದ್ರದ ಎದುರು ಬೆಳಗಿನ ಜಾವ ಸಾರ್ವಜನಿಕರು ಸರತಿಯಲ್ಲಿ ನಿಂತಿರುವದು ಕಂಡು ಬಂತು. 

ಈ ಹಿಂದೆ ಗ್ರಾಮ ಪಂಚಾಯಿತಿ, ಜನಶ್ರೀ ಕಛೇರಿ, ನಾಡ ಕಛೇರಿ ಸೇರಿದಂತೆ ವಿವಿಧ ವ್ಯಾಪ್ತಿಯಲ್ಲಿ ಹೊಸ ಆಧಾರ ಕಾರ್ಡ, ಆಧಾರ ಹೆಸರು, ಮೊಬೈಲ್ ನಂಬರ್, 15 ವರ್ಷ ಮೇಲ್ಪಟ್ಟ ಮಕ್ಕಳ ಹೊಸ ಆಧಾರ ಕಾರ್ಡ ಮಾಡಿಸಿಕೊಡುವಂತೆ ಆದೇಶ ಹೊರಡಿಸಿತ್ತು. ಆದರೆ ನಂತರ ಸರ್ಕಾರ ಈ ಆದೇಶವನ್ನು ಹಿಂಪಡೆದಿದ್ದು ಆಧಾರ ನೋಂದಣಿ ಮಾಡುವವರಿಗೆ ತೊಂದರೆ ಎದುರಾಗಿದೆ.

ಪ್ರಸ್ತುತ ತಾಲೂಕಿನ ಅಂಚೆ ಕಛೇರಿ ಹಾಗೂ ಜನಶ್ರೀ ಕೇಂದ್ರ ಬಿಟ್ಟರೆ ಬೇರೆಲ್ಲಿಯೂ ಆಧಾರ ಕಾರ್ಡ ಮಾಡುತ್ತಿಲ್ಲವಾಗಿದ್ದು, ತಾಲೂಕಿನ ದೂರು ಹಳ್ಳಿಗಳಿಂದ ಜನರು ತಮ್ಮೆಲ್ಲ ಕೆಲಸ ಬಿಟ್ಟು ಆಧಾರ ಸರಿಪಡಿಸುವಿಕೆ, ಬದಲಾವಣೆ ಮಾಡಿಸಿಕೊಳ್ಳಲು ಬರಲಿದ್ದು, ಆದರೆ ದಿನಕ್ಕೆ ಕೇವಲ 40 ಮಂದಿಯ ಕಾರ್ಡ ಮಾಡಿಸುವ ಅಥವಾ ತಿದ್ದುಪಡಿ ಮಾಡುವ ಕೆಲಸ ಮಾಡುತ್ತಿರುವ ಅಂಚೆ ಕಛೇರಿಯಲ್ಲಿ ಆಧಾರ ಕಾರ್ಡ ಮಾಡಿಸಿಕೊಳ್ಳುವ ಜನರು ಬೆಳಿಗ್ಗೆ 4 ಗಂಟೆಗೆ ಕೂಪನಗಾಗಿ ಕುಳಿತರೆ ತಮ್ಮ ಊಟ ತಿಂಡಿ ಬಿಟ್ಟು ಆಧಾರ ಮಾಡಿಸಿಕೊಳ್ಳುವವರೆಗೂ ಹಾಗೇ ಇರಬೇಕಾಗಿದೆ. 

ಇನ್ನು ಚಿಕ್ಕಮಕ್ಕಳ ಆಧಾರ ಕಾರ್ಡ ಮಾಡಿಸುವುದಿದ್ದರೆ ಅವರ ಪಾಲಕರ ಜೊತೆಗೆ ಮಕ್ಕಳು ಸಹ ರಾತ್ರಿಯೆಲ್ಲ ಕುಳಿತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ನೆಮ್ಮದಿ ಕೇಂದ್ರಕ್ಕೆ ತೆರಳಿದರೆ ಪೋಸ್ಟ ಆಫೀಸಗೆ ಹೋಗುವಂತೆ ಸೂಚಿಸಲಾಗುತ್ತಿದೆ. ಆಧಾರ ಕಾರ್ಡ ಕೂಪನ್ ಪಡೆಯಲು ಇಲ್ಲಿನ ಜನಶ್ರೀ ಕೇಂದ್ರದ ಬಳಿ ಸೋಮವಾರ ಬೆಳಿಗ್ಗೆಯೇ ನೂರಾರು ಸಂಖ್ಯೆಯಲ್ಲಿ ಜನರು ನಿಂತಿದ್ದು ಸರದಿಯ ಸಾಲು ಹಳೆ ಬಸ್ ನಿಲ್ದಾಣ ತಲುಪಿತ್ತು. ಅಧಿಕಾರ ವರ್ಗಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದು ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ. 

ಈ ಕುರಿತು ಭಟ್ಕಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳ ಬಳಿ ದೂರು ನೀಡಿದ ಸಾವಜನಿಕರು ಸಮಸ್ಯೆಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಆಧಾರ ಕಾರ್ಡ ಸಮಸ್ಯೆ ಇಡೀ ರಾಜ್ಯದಲ್ಲಿ ಇದ್ದು ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಧಾರ ನೋಂದಣಿ ಪ್ರಾರಂಭಿಸಲು ಪ್ರಯತ್ನಿಸುವದಾಗಿ ಜಿಲ್ಲಾಧಿಕಾರಿ ಹರೀಶ ಕುಮಾರ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

‘ಹಗಲು ರಾತ್ರಿಯೆನ್ನದೇ ಆಧಾರ ಕಾರ್ಡಗಾಗಿ ಬಂದು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ನಾನು ಬೆಳಿಗ್ಗೆ 5 ಗಂಟೆಗೆ ಬಂದು ಕಾಯುತ್ತಿದ್ದೇನೆ. ಆದರೆ ಕೆಲವರು 3 ಗಂಟೆಗೆ ಬಂದರೆ ಇನ್ನು ಕೆಲವರು ನಿನ್ನೆ ರಾತ್ರಿಯೇ ಬಂದು ಟೋಕನ್ ಪಡೆಯಲು ಕಾಯುತ್ತಿದ್ದಾರೆ. ಎಲ್ಲದಕ್ಕೂ ಆಧಾರ್ ಕಡ್ಡಾಯ ತಿದ್ದುಪಡಿಗಾಗಿ ಬಂದಿದ್ದೇನೆ. ಒಂದೇ ಕಡೆ ವ್ಯವಸ್ಥೆ ಮಾಡಿರುದರಿಂದ ಸಮಸ್ಯೆ ಆಗುತ್ತಿದೆ. ಸ್ಥಳೀಯ ಶಾಸಕರು ಈ ಕುರಿತು ಗಮನ ಹರಿಸಬೇಕು. ತಾಲೂಕಾಡಳಿತ ಈ ಕುರಿತು ಗಮನ ಹರಿಸಬೇಕಿದೆ. -ನಾಗೇಂದ್ರ ನಾಯ್ಕ ಹೇರೂರು 
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...