ಸೋಡಿಗದ್ದೆ ಮಹಾಸತಿ ದೇವಿ ಜಾತ್ರೆಯಲ್ಲಿ ಭಕ್ತರಿಂದ ಕೆಂಡ ಸೇವೆ

Source: sonews | By Staff Correspondent | Published on 24th January 2019, 10:43 PM | Coastal News | Don't Miss |

ಭಟ್ಕಳ: ಶ್ರೀ ಸೋಡಿಗದ್ದೆ ಮಹಾಸತಿ ದೇವಿ ಜಾತ್ರೆಯ ಎರಡನೆಯ ದಿನದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ನೂರಾರು ಭಕ್ತರು ಕೆಂಡ ಸೇವೆ ಸಲ್ಲಿಸಿದರು. 
 
ಜನರು ಸಾಗರದಂತೆ ದೇವಸ್ಥಾನದತ್ತ ಹರಿದು ಬಂದು ಸರತಿ ಸಾಲಿನಲ್ಲಿ ನಿಂತು ಮಹಾಸತಿಗೆ ಪೂಜೆ ಸಲ್ಲಿಸಿದರು. ಸೇವಂತಿ ಹೂವಿನ ಮಾಲೆಯಲ್ಲಿ ಮಹಾಸತಿ ಮಿಂದೆದ್ದಳು. ಸಿಂಗಾರಗೊಂಡ ಎತ್ತಿನ ಗಾಡಿಯ ಮೂಲಕ ವಾದ್ಯಘೋಷಗಳಿಂದ ದೇವಸ್ಥಾನಕ್ಕೆ ಆಗಮಿಸಿ ಹೊರೆಕಾಣಿಕೆಯನ್ನು ಸಲ್ಲಿಸಲಾಯಿತು. ವಿವಿಧ ಬಣ್ಣಗಳಿಂದ ಸಿಂಗಾರಗೊಂಡ ಗೊಂಬೆಗಳು ದೇವಿಗೆ ಹರಕೆಗಳಾದವು. ಜನಜಂಗುಳಿ ಹಾಗೂ ಬಿಸಿಲಿನ ಕಾರಣ ಅಲ್ಲಲ್ಲಿ ಕುಡಿಯುವ ನೀರು, ತಂಪು ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಗಮಿಸಿದ ಭಕ್ತಾದಿಗಳಿಗಾಗಿ ಮಹಾ ಅನ್ನಸಂತರ್ಪಣಾ ಕಾರ್ಯ ನೆರವೇರಿತು. ಜಾತ್ರೆಯ ಅಂಗವಾಗಿ ನಡೆದ ಮನರಂಜನಾ ಕಾರ್ಯಕ್ರಮಗಳು ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾದವು. ಪುಟ್ಟ ಮಕ್ಕಳಿಗೆ ಆಟಿಕೆ ಸಾಮುನುಗಳ ತರೇವಾರಿ ಅಂಗಡಿಗಳು ಮುದ ನೀಡಿದರೆ, ಮಹಿಳೆಯರು, ಯುವತಿಯರು ಅಲಂಕಾರಿಕಾ ಸಾಮಾನುಗಳತ್ತ ಮುಗಿ ಬಿದ್ದರು. ದೇವಸ್ಥಾನದ ಸುತ್ತ ಡಿವಾಯ್‍ಎಸ್ಪಿ ವೆಲೆಂಟೈನ್ ಡಿಸೋಜಾ, ಸಿಪಿಐ ಗಣೇಶ ನೇತೃತ್ವದಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. 

Read These Next

ಎಸ್.ಎಸ್.ಎಲ್.ಸಿ ಪುನರ್ಬಲನ ತರಗತಿ; ಶಿಕ್ಷಕರ ಹಿತ ಕಾಪಾಡುವಂತೆ ಐಟಾ (AIITA) ದಿಂದ ಸರ್ಕಾರಕ್ಕೆ ಮನವಿ

ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಯವರಿಗೆ ಸಮಗ್ರ ಮನವಿಯನ್ನು ಸಲ್ಲಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ...

ರಾಷ್ಟಿಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಯೋಜನೆಯಂತೆ ಪೂರ್ಣಗೊಳಿಸಿ - ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ಚತುಷ್ಪತ ರಾಷ್ಟಿಯ ಹೆದ್ದಾರಿಯ ಕಾಮಗಾರಿಯಲ್ಲಿ , ಉದ್ದೇಶಿತ ಯೋಜನೆಯಲ್ಲಿ ತಿಳಿಸಿರುವ ಎಲ್ಲಾ ...