ಭಟ್ಕಳ ನೂತನ ಡಿವೈಎಸ್ಪಿಯಾಗಿ ಗೌತಮ್ ಕೆ.ಸಿ. ನೇಮಕ'

Source: so news | Published on 11th February 2020, 12:44 AM | Coastal News | Don't Miss |


ಭಟ್ಕಳ: ಭಟ್ಕಳ ಉಪವಿಭಾಗ ಉಪ ಪೋಲಿಸ್ ಅಧೀಕ್ಷಕರ ಸ್ಥಾನಕ್ಕೆ ಭಾನುವಾರದಂದು ನೂತನ ಡಿವೈಎಸ್ಪಿ ಆಗಿ ತುಮಕೂರು ಮೂಲದ ಚಿಕ್ಕಬಳ್ಲಾಪುರದ ಪ್ರೋಬೆಶನರಿ ಡಿವೈಎಸ್ಪಿ ಗೌತಮ್ ಕೆ.ಸಿ. ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಈ ಹಿಂದಿನ ಉಪವಿಭಾಗದ ಎಎಸ್ಪಿ ನಿಖಿಲ್ ಬಿ. ಅವರು ನಾಲ್ಕು ತಿಂಗಳ ತರಬೇತಿಯಲ್ಲಿದ್ದು, ಅವರ ಸ್ಥಾನಕ್ಕೆ ಪ್ರಭಾರಿಯಾಗಿ ಡಿವೈಎಸ್ಪಿ ಅರವಿಂದ ಕಲ್ಗುಜ್ಜಿ ಅವರು ನೇಮಕಗೊಂಡಿದ್ದರು. ಈಗ ಇವರ ಹುದ್ದೆಗೆ ಭಾನುವಾರದಂದು ಚಿಕ್ಕಬಳ್ಳಾಪುರದಲ್ಲಿ ಪ್ರೋಬೆಶನರಿ ಡಿವೈಎಸ್ಪಿಯಾಗಿದ್ದ ಗೌತಮ್ ಕೆ.ಸಿ.ಅವರು ನೇಮಕಗೊಂಡಿದ್ದಾರೆ.

ಪ್ರಭಾರಿ ಡಿವೈಎಸ್ಪಿ ಅರವಿಂದ ಕಲ್ಗುಜ್ಜಿ ಅವರು ನೂತನ ಪ್ರೋಬೆಶನರಿ ಡಿವೈಎಸ್ಪಿ ಗೌತಮ್ ಕೆ.ಸಿ. ಅವರಿಗೆ ಅಧಿಕಾರ ಹಸ್ತಾಂತರಿಸಿದರು.

2017 ರಲ್ಲಿ ಮೈಸೂರನಲ್ಲಿ ತರಬೇತಿ ಮುಗಿಸಿ 2019ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಪ್ರೋಬೆಶನರಿ ಎಎಸ್ಪಿ ಆಗಿ ನೇಮಕಗೊಂಡಿದ್ದರು. ಚಿಂತಾಮಣಿ ಗ್ರಾಮಾಂತರ ವೃತ್ತದ ಪ್ರಬಾರ ಪ್ರೋಬೆಷನರಿ ಡಿವೈಎಸ್ಪಿ ಗೌತಮ್ ಕೆ.ಸಿ ಕಾರ್ಯನಿರ್ವಹಿಸಿದ್ದಾರೆ.
ಸದ್ಯ ಪ್ರೋಬೆಶನರಿ ಅವಧಿಯಲ್ಲಿಯೇ ಭಟ್ಕಳ ಉಪವಿಭಾಗದ ಡಿವೈಎಸ್ಪಿಯಾಗಿ ನೇಮಕಗೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಧವರ ಪ್ರಶ್ನೆಗೆ ಉತ್ತರಿಸಿದ ನೂತನ ಎಎಸ್ಪಿ ಗೌತಮ್ ಕೆ.ಸಿ. 'ಇಂದೇ ಭಟ್ಕಳಕ್ಕೆ ನೇಮಕಗೊಂಡಿದ್ದು, ಮುಂದಿನ ದಿನದಲ್ಲಿ ಪ್ರತಿ ಠಾಣೆಗೂ ಭೇಟಿ ನೀಡಲಿದ್ದೇನೆ. ಭಟ್ಕಳ ಪಟ್ಟಣದ ಬಗೆಗಿನ ಮಾಹಿತಿ ತಿಳಿದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದೇನೆ. ಪಟ್ಟಣದ ಎಲ್ಲಾ ಸಾರ್ವಜನಿಕರ ಸಹಕಾರ, ಮಾಧ್ಯಮದವರ ಸಹಕಾರ ಪೊಲೀಸ್ ಇಲಾಖೆಯೊಂದಿಗೆ ಇರಬೇಕು ಎಂದು ಹೇಳಿದರು.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...