ಸೀಲ್ಡೌನ್ ಸಮಸ್ಯೆಗೆ ಶೀಘ್ರವೇ ಸ್ಪಂಧನೆ; ಜಿಲ್ಲಾ ಎಸ್.ಪಿ ದೇವರಾಜ ಭರವಸೆ

Source: sonews | By Staff Correspondent | Published on 11th May 2020, 6:39 PM | Coastal News | Don't Miss |

ಭಟ್ಕಳ: ಭಟ್ಕಳದಲ್ಲಿ ಸೀಲ್ಡೌನ್ ಆದ ನಂತರ ಜನರು ಔಷಧ ಸೇರಿದಂತೆ ಅತಿ ಅವಶ್ಯಕ ವಸ್ತುಗಳಿಗಾಗಿ ತೊಂದರೆ ಪಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಆದುದರಿಂದ ಒಂದೆರಡು ದಿನಗಳಲ್ಲಿ ಅವಶ್ಯಕ ವಸ್ತುಗಳನ್ನು ಜನರಿಗೆ ತಲುಪಿಸುವ ಹೊಸ ವ್ಯವಸ್ಥೆಯೊಂದನ್ನು ಜಾರಿ ಮಾಡಲಾಗುವುದು ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ್ ದೇವರಾಜ್ ತಿಳಿಸಿದರು. 

ಅವರು ಸೋಮವಾರ ಸಂಜೆ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. 

ಸಿಲ್ಡೌನ್ ಸಮಯದಲ್ಲಿ ಎಲ್ಲ ರೀತಿಯಿಂದಲೂ ಪ್ರತಿಯೊಂದು ರಸ್ತೆಗಳನ್ನು ಬಂದ್ ಮಾಡಿದ್ದು ಮತ್ತು ಯಾರಿಗೂ ಕೂಡ ತಿರುಗಾಡಲು ಅನುಮತಿ ಇರದ ಕಾರಣ ಹಳೆಯ ಪಾಸ್ ವ್ಯವಸ್ಥೆ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಇಂದಿನಿಂದ ಕೇವಲ ಎರಡು ದಿನಗಳಿಗಾಗಿ ಮಾತ್ರ ಅವಶ್ಯಕ ವಸ್ತುಗಳಾದ ತರಕಾರಿ, ಹಾಲು ದಿನಸಿ ವಿತರಣೆ, ಪೆಟ್ರೋಲ್, ವೈದ್ಯಕೀಯ(ಔಷಧ) ಕ್ಕಾಗಿ ಹಳೆಯ ಪಾಸ್ ಗಳನ್ನು ಮಾನ್ಯಮಾಡಲಾಗಿದ್ದು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ನಂತರ ಬುಧವಾರದಿಂದ ಹೊಸ ವೆವಸ್ಥೆಯನ್ನು ಜಾರಿಗೊಳಲಾಗುವುದು. ಇದರೊಂದಿಗೆ ಹೊಂದಿಕೊಳ್ಳಲು ಕೆಲ ಸಮಯ ಹಿಡಿಯುತ್ತದೆ ಎಂದ ಅವರು ನಾವು ಸಾರ್ವಜನಿಕರಿಗೆ ಯಾವುದೇ ತೊಂದರೆಯನ್ನು ಕೊಡಲು ಬಯಸುವುದಿಲ್ಲ. ನೀವು ನಮ್ಮ ಮೇಲೆ ನಂಬಿಕೆ ಇಟ್ಟು ಒಂದಿಷ್ಟು ದಿನ ಸುಮ್ಮನಿರಿ ಆಗ ನಾವು ನಿಮಗಾಗಿ ಏನು ಮಾಡುತ್ತೇವೆ ಎಂಬುದನ್ನು ನಾವು ತೋರಿಸುತ್ತೇವೆ ಎಂದ ಅವರು ಸಹಾಯಕ ಆಯುಕ್ತರು, ಡಿ.ವೈ.ಎಸ್.ಪಿ ಜಿಲ್ಲಾಧಿಕಾರಿಗಳು ಹೀಗೆ ಎಲ್ಲ ಹಂತದ ಅಧಿಕಾರಿಗಳು ಜನರಿಗಾಗಿ ತಮ್ಮ ಕಷ್ಟಗಳನ್ನೂ ಮರೆಯುತ್ತಿದ್ದಾರೆ ಎಂದರು. 

ಸುಳ್ಳು ಸುದ್ದಿ ಹರಡುವವರ ಮೇಲೆ ನಿಗಾ: ಸಮಾಜಿಕ ಜಾಲಾ ತಾಣಗಳಲ್ಲಿ ಕೆಲವು ಪೊಲೀಸ್ ಇಲಾಖೆ ಮತ್ತು ಕೊರೋನಾ ಕುರಿತಂತೆ ಸುಳ್ಳು ವದಂತಿಗಳನ್ನು ಹರಿಯಬಿಡುತ್ತಿದ್ದು ನಾವು ಅದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಸಹನೆಯಿಂದಿದ್ದೇವೆ. ನಮ್ಮ ಸಹನೆಯನ್ನು ಪರೀಕ್ಷೆಗೊಳಪಡಿಸಬೇಡಿ. ಒಂದು ವೇಳೆ ನಾವು ಸಹನೆ ಮೀರಿದರೆ ಯಾರ್ಯಾರು ಏನು ಬರೆಯುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಜರಗಿಸುವೇವು ಎಂದ ಅವರು ಈಗಾಗಲೆ ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಮಾಹಿತಿ ನೀಡಿದ ಘಟನೆಗೆ ಸಂಬಂಧಿಸಿದಂತೆ 4 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು. 

ಮಾಧ್ಯಮಗಳು ತಮ್ಮ ಸ್ವಾತಂತ್ರ್ಯವನ್ನು ಬಳಸಿಕೊಂಡು ಪತ್ರಿಕೆಗಳಲ್ಲಿ ಏನು ಬೇಕಾದರೂ ಬರೆಯಬಹುದು. ಆದರೆ ಸಮಾಜಕ್ಕೆ ಹಾನಿಯುಂಟಾಗುವ ಯಾವುದನ್ನು ಬರೆಯಲು ಹೋಗಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿಕೊಂಡರು. 

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಭರತ್ ಎಸ್.,  ಡಿವೈಎಸ್ಪಿ ಗೌತಮ್, ತಹಸಿಲ್ದಾರ್ ರವಿಚಂದ್ರ, ಮತ್ತಿತರರು ಉಪಸ್ಥಿತರಿದ್ದರು. 
 

Read These Next

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...