ಮೃತ ರಾಮಚಂದ್ರನಾಯ್ಕ ಕುಟುಂಬಕ್ಕೆ ಬಿಜೆಪಿಯಿಂದ 1ಲಕ್ಷ ರೂ ಚೆಕ್ ದೇಣಿಗೆ ನೀಡಿದ ಸಚಿವ ಅನಂತ್

Source: sonews | By Staff Correspondent | Published on 3rd February 2018, 10:04 PM | Coastal News | Don't Miss |

ಭಟ್ಕಳ:ಪುರಸಭೆ ಅಂಗಡಿ ಮಳಿಗೆ ವಿವಾದದಲ್ಲಿ ತನ್ನ ಮೇಲೆ ಸೀಮೆ ಎಣ್ಣೆಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದ ಆಸರಕೇರಿಯಲ್ಲಿನ ರಾಮಚಂದ್ರ ನಾಯ್ಕ ಮನೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಪಕ್ಷದ ವತಿಯಿಂದ ಸಂಗ್ರಹಿಸಿದ 1ಲಕ್ಷ ರೂಪಾಯಿ ಮೊತ್ತದ ಚೆಕ್‍ನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಚಂದ್ರ ನಾಯ್ಕ ಸಹೋದರ ಮಂಜುನಾಥ ನಾಯ್ಕ ಸಚಿವರಿಗೆ ಮನವಿಯೊಂದನ್ನು ಸಲ್ಲಿಸಿ,ನಮ್ಮ ಕುಟುಂಬದ ಸದಸ್ಯರ ಮೇಲೆ ಮೇಲಿಂದ ಮೇಲೆ ದಾಳಿ ನಡೆಸಲಾಗುತ್ತಿದೆ.ಈ ಬಗ್ಗೆ ಪೊಲೀಸ್ ದೂರನ್ನೂ ಸಹ ನೀಡಲಾಗಿದೆ.ಆದರೆ ಈವರೆಗೆ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು,ಇದು ನನ್ನ ಗಮನಕ್ಕೆ ಬಂದಿಲ್ಲ,ಈ ಕುರಿತು ಪರಿಶೀಲಿಸಿ ಕ್ರಮಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು ಎಂದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ ನಾಯ್ಕ,ಮಾಜಿ ಶಾಸಕ ಜೆ.ಡಿ ನಾಯ್ಕ,ಮುಖಂಡರಾದ ಕೃಷ್ಣನಾಯ್ಕ ಆಸರಕೇರಿ,ಸುನೀಲ್ ನಾಯ್ಕ,

ಪರಮೇಶ್ವರ ದೇವಾಡಿಗ,ಪ್ರಮೋದ ಜೋಷಿ,ನಾಮಧಾರಿ ಸಮಾಜದ ಅಧ್ಯಕ್ಷ ಎಂ.ಆರ್ ನಾಯ್ಕ,ರಾಮಚಂದ್ರ ನಾಯ್ಕ ಸಹೋದರರಾದ ವೆಂಕಟೇಶ ನಾಯ್ಕ,ಈಶ್ವರ ನಾಯ್ಕ,ತಾಯಿ ಮಾದೇವಿ ಇನ್ನಿತರರು ಉಪಸ್ಥಿತರಿದ್ದರು.

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...