ಅದ್ಧೂರಿಯಾಗಿ ಆರಂಭಗೊಂಡ ಅಂತರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ

Source: S.O. News Service | By MV Bhatkal | Published on 25th December 2022, 6:55 PM | Coastal News |


ಭಟ್ಕಳ:ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಭಟ್ಕಳ ಆಯೋಜಿಸಿರುವ ದಿವಂಗತ ಕಬಡ್ಡಿ ಆಟಗಾರ ಮನೋಜ ನಾಯ್ಕ ಸ್ಮರಣಾರ್ಥ ಅಂತರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮನೋಜ್ ನಾಯ್ಕ ಒಬ್ಬ ಉತ್ತಮ ಆಟಗಾರ ಅಂತರರಾಷ್ಟ್ರ ಮಟ್ಟದ ಕಬಡ್ಡಿ ಆಟವನ್ನು ಆಡಿ ಭಟ್ಕಳದ  ಬಿರುದು ತಂದುಕೊಟ್ಟಿದವರು ಮೊನೋಜ್ ನಾಯ್ಕ,ಇವರ ಹೆಸರಿನಲ್ಲಿ ಬಹಳ ವರ್ಷ ಹಿಂದೆ ಆಟ ನಡೆಯ ಬೇಕಾಗಿತ್ತು ಆದರೆ ಅನಿವಾರ್ಯ ಕಾರಣದಿಂದ ನಡೆಯಲಿಲ್ಲಿ ಮನೋಜ್ ಒಬ್ಬ ಅಂತರಾಷ್ಟ್ರೀಯ ಮಟ್ಟದ ಆಟಗಾರ ಇವತ್ತು ಪರಶುರಾಮ ಸ್ಪೋರ್ಟ್ಸ್ ಕ್ಲಬ್ ರಾಜ್ಯಮಟ್ಟದಲ್ಲಿ ಹೆಸರು ಇದೆ ಎಂದರೆ ಅದು ಮನೋಜ್ ಯಿಂದ ಮಾತ್ರ ಸಾಧ್ಯವಾಗಿದೆ.ಇವರ ಹೆಸರಿನಲ್ಲಿ ನಡೆಸುವ ಟ್ರೋಫಿ  ಕೇವಲ ವರ್ಷಕ್ಕೆ ಸೀಮಿತವಾಗಿದೆ  ಪ್ರತಿವರ್ಷ ಇವರ ನಡೆಸುವ ಅಂತಹ ಆಗಬೇಕು ಎಂದು ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಇವರಿಗೆ ವಿನಂತಿಯನ್ನು ಮಾಡಿದರೂ ಕ್ರೀಡಾಪಟುಗಳು ಕೇವಲ ತಾಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಸೀಮಿತವಾಗದ್ದೆ ರಾಜ್ಯ ರಾಷ್ಟ್ರಮಟ್ಟಕ್ಕೆ  ಗುರುತಿಸಲ್ಪಡುವ ಕ್ರೀಡಾಪಟುಗಳು ಆಗಬೇಕು,ಒಂದು ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಆಟವಾಡಿ ಇವತ್ತು ಒಬ್ಬ ಶಾಸಕ ಆಗಿದ್ದೇನೆ  ಎಂದರೆ ಹೆಮ್ಮೆಯ ವಿಷಯವಾಗಿದೆ.ಕ್ರೀಡೆಗಳಿಗೆ ಯಾವುದೇ ಜಾತಿ ಧರ್ಮವನ್ನು ನೋಡದೇ  ಸಹಾಯ ಮಾಡಿದ್ದಿನೆ, ರಾಷ್ಟ್ರ ರಾಜ್ಯ ಮಟ್ಟಕ್ಕೆ  ಯಾವುದೇ ಕ್ರೀಡಾಪಟುಗಳು ಹೋದಲ್ಲಿ ಅವರಿಗೆ ಸಂಪೂರ್ಣ ವೆಚ್ಚವನ್ನು ಒಬ್ಬ ಶಾಸಕನಾಗಿ ಮಾಡಿದೆ ಒಬ್ಬ ಕ್ರೀಡಾಪಟುಗಳಾಗಿ ಮಾಡುತ್ತೇನೆ ಎಂದರು.
ನಂತರ  ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ,ಅಧ್ಯಕ್ಷರು ಗೋವಿಂದ ನಾಯ್ಕ ಕ್ರೀಡಾಂಗಣ ಉದ್ಘಾಟನೆಯನ್ನು ನೆರವೇರಿಸಿದರು.
ಮಾತನಾಡಿದ ಅವರು ಯಾವುದೇ ಜಾತಿ ಧರ್ಮ ನೋಡದೆ‌ ಈ ತಂಡವನ್ನು ಕಟ್ಟಿ ಬೆಳೆದಿದ್ದು,ವಿವಿಧತೆಯಲ್ಲಿ ಏಕತೆ ಕಂಡಂತೆ ಮಣ್ಣಿನ ಲಕ್ಷಣ ಈ ದೇಶದ ಗುಣ ಹಾಗಿದೆ,ಹಾಗಾಗಿ ಭಾರತೀಯರು ನಾವೆಲ್ಲ ಒಂದು ಇಷ್ಟು ವರ್ಷ ತನಕ ಈ ಭಾರತಿಯ ಗ್ರಾಮೀಣ ಕ್ರೀಡೆ ಯನ್ನು ನಡೆಸಿಕೊಂಡು  ಬಂದಂತ ಪರಶುರಾಮ್ ಸ್ಪೋರ್ಟ್ ಕ್ಲಬ್ ಅವರು ಮುಂದೆ ಸುವರ್ಣಮೋತ್ಸವ  ಆಚರಿಸುವುದಕ್ಕೆ ನಮ್ಮೆಲ್ಲ ಸಹಕಾರ ಬೆಂಬಲ ಇದೇ ಎಂದರು.
ಮಾಜಿ ಶಾಸಕ ಜೆ.ಡಿ ನಾಯ್ಕ ಮಾತನಾಡಿ ಪ್ರೀತಿ ವಿಶ್ವಾಸಕ್ಕೆ ಎಂದರೆ ಅದೇ ಕ್ರೀಡೆ ಎಂದು ಹೇಳುವುದು,ಇವತ್ತು ಈ ಕ್ಲಬ್ ಬೆಳೆಯ ಬೇಕೆಂದರೆ ಸಾರ್ವಜನಿಕರ ಸಹಕಾರ,ದಾನಿಗಳ ಸಹಕಾರ,ಕ್ರೀಡಾಪಟುಗಳು ಸಹಕಾರ ಅತಿ ಮುಖ್ಯವಾಗಿದೆ ಈ ಕ್ಲಬ್  ೪೪ ವರ್ಷ ಕ್ಕೆ ಸೀಮಿತ ವಾಗದೆ ಇದು ೧೦೦ ವರ್ಷ ಬೆಳಿವಂತಾಗಬೇಕು,ಮೊನೋಜ್ ಅವರ ಸ್ಮರಣಾರ್ಥ ಆಯೋಜಿಸಿದ್ದ ಈ ಕಬಡ್ಡಿ  ಪರಶುರಾಮ್ ಸ್ಪೋರ್ಟ್ ಕ್ಲಬ್ ಗೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪೂರ್ವದಲ್ಲಿ ದಿವಂಗತ ಮೊನೋಜ್ ನಾಯ್ಕ ಅವರಿಗೆ ಮೌನಾಚರಣೆ ಮಾಡಿದರು.
ನಂತರ ಮೂಡಭಟ್ಕಳ ಶಾಲೆಯ ಶಿಕ್ಷಕಿಯಾದ ಗೀತ ಶಿರುರೂ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಕ್ರೀಡಾಂಗಣದಲ್ಲಿ ಶಾಸಕ ಸುನಿಲ್ ನಾಯ್ಕ ಹಾಗೂ ಗೋವಿಂದ ನಾಯ್ಕ ಕಬಡ್ಡಿ ಆಟವನ್ನು ಆಡಿ ಕ್ರೀಡಾಭಿಮಾನವನ್ನು ಮೆರೆದರು. 
ಶಿವಮೊಗ್ಗ,ಆಳ್ವಾಸ್,ಮಂಗಳೂರು,ಎಸ್ ಎಂ,ಎನ್ನಪ್ಪೊಯ ಯುನಿವರ್ಸಿಟಿ,ಹಾವೇರಿ,
ಮುಂಡಗೋಡ್,ಬೈಂದೂರ್, ಹಾಗೂ ಭಟ್ಕಳ ತಂಡ ಸೇರಿದಂತೆ ಒಟ್ಟು ೨೪ ತಂಡ 
ಆಗಮಿಸಿದೆ.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೇವಿದಾಸ ಮೊಗೇರ,ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು,ಮುಖ್ಯ ಅತಿಥಿಗಳಾದ ಮುಟ್ಟಳ್ಳಿ ಗ್ರಾಂ.ಪಂ.ಅಧ್ಯಕ್ಷ ಶೇಷಗಿರಿ  ನಾಯ್ಕ,ಡಾ ನಾಸಿಮ್ ಖಾನ,ಬಿ.ಎಚ್ ಹನುಮಂತಪ್ಪ ದೈಹಿಕ ಶಿಕ್ಷಕರು ದಾವಣಗೆರೆ,ಮುಟ್ಟಳ್ಳಿ ಗ್ರಾಂ.ಪಂ.ಅಧ್ಯಕ್ಷ ಸದಸ್ಯೆ ಲಕ್ಷ್ಮಿ ನಾಯ್ಕ,ಪರುಶುರಾಮ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಗಣೇಶ ಎಸ್.ನಾಯ್ಕ,ನಂಜಿರ್ ಖಾಸೀಮ್ ಜಿ, ನಾರಾಯಣ ನಾಯ್ಕ,ಮಾಸ್ತಪ್ಪ ಎಲ್ ನಾಯ್ಕ,ಕೃಷ್ಣ ಗೋವಿಂದ ನಾಯ್ಕ,ಉಪಸ್ಥಿತರಿದ್ದರು.
ಎಂ.ಬಿ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮ ನಿರೂಪಣೆ ಮಂಜುನಾಥ ನಾಯ್ಕ ಮುಂಡಳ್ಳಿ ನಿರೂಪಿಸಿದರು,

 

Read These Next

ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರಾಸಾಯನಿಕ ಬಳಕೆ ಕುರಿತು ವ್ಯಾಪಕವಾಗಿ ಪರಿಶೀಲಿಸಿ : ಜಿಲ್ಲಾಧಿಕಾರಿ

ಕಾರವಾರ :ಜಿಲ್ಲೆಯಲ್ಲಿನ ಆಹಾರ ತಯಾರಿಕಾ ಘಟಕಗಳು, ಬೀದಿ ಬದಿ ವ್ಯಾಪಾರಿಗಳು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಸಾರ್ವಜನಿಕರ ಆರೋಗ್ಯದ ...