ಕೇಂದ್ರದ ಮಾರ್ಗಸೂಚಿಯನ್ನು ಜಾರಿಗೆ ತರುವಂತೆ ಜೆ.ಡಿಎಸ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಆಗ್ರಹ

Source: sonews | By Staff Correspondent | Published on 21st July 2020, 4:56 PM | Coastal News | Don't Miss |

ಭಟ್ಕಳ: ಕರೋನಾ ಪಾಸಿಟಿವ್ ರೋಗಿಗಳಿಗೆ ಮನೆ ಕ್ಯಾರೆಂಟೈನ್ ಮಾಡಲು ಅವಕಾಶ ನೀಡಬೇಕು ಮತ್ತು ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಭಟ್ಕಳದಲ್ಲಿಯೂ ಜಾರಿಯಾಗಬೇಕೆಂದು ಜೆಡಿಎಸ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಒತ್ತಾಯಿಸಿದ್ದಾರೆ. 

ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ಆರೋಗ್ಯ ಇಲಾಖೆ ಇಲ್ಲಿನ ಜನರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂಧಿಸುತ್ತಿಲ್ಲ ಎಂದು ಆರೋಪಿಸಿದ್ದು ಭಟ್ಕಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಸಾವಿನಿಂದಾಗಿ ಜನರ ಭಯಬೀತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಕೇಂದ್ರದ ಮಾರ್ಗಾಸೂಚಿಗಳನ್ನು ಭಟ್ಕಳದಲ್ಲಿ ಜಾರಿಮಾಡುತ್ತಿಲ್ಲ, ಇದಿರಂದಾಗಿ ಜನರಲ್ಲಿ ಮತ್ತಷ್ಟು ಭಯ ಹೆಚ್ಚಾಗಲು ಕಾರಣವಾಗಿದೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಜನರು ಭಯವಿಲ್ಲದೆ ಮುಂದೆ ಬರಲು ಮತ್ತು ಅವರ ಕರೋನವನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಇಂದು ಜನರು ಕೆಮ್ಮು, ಶೀತ ಮತ್ತು ಜ್ವರದಿಂದ ಬಳಲುತ್ತಿರುವಾಗ ಒಂದು ರೀತಿಯ ಭಯ ಮತ್ತು ಭೀತಿಯನ್ನು ಅನುಭವಿಸುತ್ತಿದ್ದಾರೆ ಮತ್ತು ಅವರು ತಮ್ಮ ರೋಗಗಳನ್ನು ಮರೆಮಾಡುತ್ತಿದ್ದಾರೆ, ಅವರು ವೈದ್ಯರ ಬಳಿಗೆ ಹೋಗುತ್ತಿಲ್ಲ, ಜನರು ಕೊರೋನಾಗೆ ಹೆದರುವುದಿಲ್ಲ, ಆದರೆ ಅವರನ್ನು ಕ್ಯಾರೆಂಟೈನ್‍ಗೆ ಒಳಪಡುವುದಕ್ಕಾಗಿ ಹೆದರುತ್ತಿದ್ದಾರೆ.  ಈ ಮೊದಲು, ವರದಿಯು ಸಕಾರಾತ್ಮಕವಾಗಿ ಬಂದ ಕೂಡಲೇ ಕಾರವಾರ ಕ್ರೀಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು, ಈಗ ಇಲ್ಲಿನ ವುಮನ್ಸ್ ಸೆಂಟರ್ ಕೋವಿಡ್ ಕೇರ್ ಕೇಂದ್ರದಲ್ಲಿ ಕ್ಯಾರೆಂಟೈನ್ ಮಾಡಲಾಗುತ್ತಿದೆ, ಯಾರಲ್ಲಿ ಕೊರೊನಾ ಲಕ್ಷಣಗಳು ಕಂಡು ಬರುವುದಿಲ್ಲವೂ ಅವರನ್ನು ಅವರದ್ದೇ ಮನೆಯಲ್ಲಿ ಕ್ವಾರೆಂಟೈನ್ ಮಾಡಿದರೆ ಕನಿಷ್ಠಪಕ್ಷ ಅವರಲ್ಲಿರುವ ಭಯವಾದರೂ ಹೊರಟು ಹೋಗುತ್ತದೆ. ಜನರ ಹೃದಯಗಳಲ್ಲಿ ಮನೆಮಾಡಿಕೊಂಡಿರುವ ಭಯವನ್ನು ಹೋಗಲಾಡಿಡುವ ಕಾರ್ಯ ಜಿಲ್ಲಾಡಳಿತ ಮಾಡಬೇಕು ಎಂದು ಅವರು ಆಗ್ರಹಿಸಿದರು. 

ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರತಿಗಳನ್ನು ಪತ್ರಕರ್ತರಿಗೆ ವಿತರಿಸಿದ ಅವರು, ಸರ್ಕಾರದ ಸೂಚನೆಗಳನ್ನು ಪಾಲಿಸಿದರೆ ಸಾಕು, ಅದು ಜನರ ಹೃದಯದಲ್ಲಿ ಭಯ ಮತ್ತು ಭೀತಿಯನ್ನು ಹೋಗಲಾಡಿಸುತ್ತದೆ. ಕೇಂದ್ರ ಸರ್ಕಾರ ಹೊರಡಿಸಿರುವ ಈ ಸ್ಪಷ್ಟ ಸೂಚನೆಗಳನ್ನು ನಮ್ಮ ಜಿಲ್ಲೆಯಲ್ಲಿ ಏಕೆ ಜಾರಿಗೆ ತರುತ್ತಿಲ್ಲ ಎಂದು ಪ್ರಶ್ನಿಸಿದರು.

ನೆಗೆಟಿವ್ ವರದಿಯ ಮಾಹಿತಿಯನ್ನು ಕೂಡಲೇ ತಿಳಿಸಿ: ಗಂಟಲು ದ್ರವ ಮಾದರಿ ತೆಗೆದುಕೊಂಡ ವ್ಯಕ್ತಿಯ ವರದಿ ಪಾಸಿಟಿವ್ ಬಂದರೆ ಅವರನ್ನು ಕರೆ ಮಾಡಿ  ತಿಳಿಸಲಾಗುತ್ತದೆ. ಆದರೆ ನೆಗೆಟಿವ್ ಬಂದಾಗ ಮಾತ್ರ ಹತ್ತು ದಿನಗಳಾದರೂ ಯಾವುದೇ ಮಾಹಿತ ನೀಡುವುದಿಲ್ಲ. ಇದರಿಂದಾಗಿ ಗಂಟಲು ದ್ರವ ನೀಡಿದ ವ್ಯಕ್ತಿ ಭಯ ಮತ್ತು ಆತಂಕದಲ್ಲಿಯೆ ದಿನಕಳೆಯುತ್ತಾನೆ.  ಸಹಾಯಕ ಆಯುಕ್ತರು ಈ ಕುರಿತು ಗಮನ ಹರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮವಹಿಸಬೇಕೆಂದೂ ಅವರು ಆಗ್ರಹಿಸಿದರು. 
 

ಬೇರೆ ಜಿಲ್ಲೆಗಳಲ್ಲಿ ಕೋವಿಡ್ ನಿಂದ ಮೃತಪಟ್ಟವರನ್ನು ಭಟ್ಕಳಕ್ಕೆ ತರಲು ಅವಕಾಶ ನೀಡಿ: ಇಲ್ಲಿನ ಅನೇಕಾರು ರೋಗಿಗಳು ಮಂಗಳೂರು ಉಡುಪಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಸಂದರ್ಭದಲ್ಲಿ ವ್ಯಕ್ತ ಮೃತಪಟ್ಟಿದ್ದಲ್ಲಿ ಕೋವಿಡ್ ಸಾವು ಸಂಭವಿಸಿದರೆ, ಮೃತದೇಹವನ್ನು ಭಟ್ಕಳಕ್ಕೆ ತರಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿರುವ ಶಾಬಂದ್ರಿ,  ಕಾರವಾರದಲ್ಲಿಂದು ಮೃತಪಟ್ಟಿರುವ ಕೋವಿಡ ಮೃತದೇಹವನ್ನು ಭಟ್ಕಳಕ್ಕೆ ತರಲು ಇಲ್ಲಿನ ಜಿಲ್ಲಾಧಿಕಾರಿಗಳು ಅವಕಾಶ ನೀಡಿದಂತೆ ಮಂಗಳೂರು ಮತ್ತಿತರ ಜಿಲ್ಲೆಗಳಲ್ಲಿ ಸಾವನ್ನಪ್ಪಿದ್ದವರನ್ನು ಭಟ್ಕಳಕ್ಕೆ ತಂದು ಧಾರ್ಮಿಕ ವಿಧಿವಿಧಾನಗಳ ಮೂಲಕ ‘ದಫನ’ ಕಾರ್ಯ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿರುವ ಅವರು ಜನರು ರೋಗದಿಂದ ನರಳುತ್ತಿದ್ದರೂ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸುತ್ತಿದ್ದಾರೆ. ಏಕೆಂದರೆ ಅಲ್ಲಿ ಅನಾಹುತವೇನಾದರೂ ಸಂಭವಿಸಿದ್ದಲ್ಲಿ ಮೃತದೇಹವೂ ಕೂಡ ಭಟ್ಕಳಕ್ಕ ಮರಳಿ ಬಾರದು ಎಂಬ ಭಯ ಜನರಲ್ಲಿ ಕಾಡುತ್ತಿದ್ದು ಈ ಕಾರಣಕ್ಕೆ ಸರ್ಕಾರ ಕೋವಿಡ್ ಮೃತನ ಅಂತ್ಯ ಸಂಸ್ಕಾರವನ್ನು ಆಯಾ ಧರ್ಮದ ವಿಧಿವಿಧಾನಗಳ ಮೂಲಕ ಮಾಡಲು ಕುಟುಂಬಗಳಿಗೆ ಅವಕಾಶ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.  

ಮಧ್ಯಾಹ್ನದ ಲಾಕ್ಡೌನ್ ನಿಂದ ಯಾವುದೇ ಪ್ರಯೋಜವಿಲ್ಲ: ಮಧ್ಯಾಹ್ನ 2 ರ ನಂತರ ನಗರದಲ್ಲಿ ಲಾಕ್‍ಡೌನ್ ಲಾಕ್ಡೌನ್ ಮಾಡುವುದರಿಂದ ಯಾವುದೇ ಪ್ರಯೋಜವಿಲ್ಲ. ಇದರಿಂದ ತೊಂದರೆಗಳೇ ಹೆಚ್ಚು ಎಂದು ಜೆಡಿಎಸ್ ಯುತ್ ಅಧ್ಯಕ್ಷ ಪಾಂಡುರಂಗ ನಾಯ್ಕ ಹೇಳಿದರು. 

ಇದರಿಂದಾಗಿ ಕೊರೋನಾ ನಿಯಂತ್ರಣಕ್ಕೆ ಬರುವುದಿಲ್ಲ. ಜನರು ಹೆಚ್ಚು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಳ್ಳಿಗಳಿಂದ ಜನರು ಪಟ್ಟಣ ಸೇರುವಾಗಲೇ 11ಗಂಟೆಯಾಗಿರುತ್ತದೆ. ಗಡಿಬಿಡಿಯಲ್ಲಿ ಅವರು ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೆ 2ಗಂಟೆ ಒಳಗೆ ಮತ್ತೆ ಹಳ್ಳಿ ಸೇರುತ್ತಾರೆ. ವ್ಯಾಪರಸ್ಥರಿಗೂ ತೊಂದರೆಯಾಗುತ್ತದೆ ಎಂದ ಅವರು ಇದಕ್ಕಾಗಿ ಜನಜಾಗೃತಿಯೊಂದೆ ಸೂಕ್ತ ಪರಿಹಾರವಾಗಿದ್ದು ಹೆಚ್ಚು ಜಾಗೃತಿ ಮೂಡಿಸಲು ಇಲಾಖೆಗಳು ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದರು.  

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜೈನುಲ್ ಅಬಿದೀನ್, ಕೃಷ್ಣಾನಂದ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
 

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...