ಮುರ್ಡೇಶ್ವರ ಕಡಲತೀರದಲ್ಲಿ ತಿಮಿಂಗಲ ವಾಂತಿ ಪತ್ತೆ

Source: Prajavani | By S O News | Published on 25th April 2021, 3:36 PM | Coastal News |

ಭಟ್ಕಳ:  ಅತ್ಯಂತ ವಿರಳವಾಗಿ ಸಿಗುವ 'ತಿಮಿಂಗಿಲದ ವಾಂತಿಯ (ಅಂಬೆರ್ಗ್ರಿಸ್) ಸುಮಾರು ಒಂದು ಕೆ.ಜಿ ತೂಕದ ತುಣುಕು ಭಟ್ಕಳ ತಾಲ್ಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ಪತ್ತೆಯಾಗಿದೆ. ಅದನ್ನು ಮೀನುಗಾರರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಪುನುಗು ಬೆಕ್ಕಿನ ಮಲದ ರೀತಿಯಲ್ಲೇ ತಿಮಿಂಗಿಲದ ವಾಂತಿಯೂ ಸುಗಂಧ ಬೀರುತ್ತದೆ. ಇದಕ್ಕೆ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ತಿಮಿಂಗಿಲಗಳನ್ನು ಅರಣ್ಯ ಕಾಯ್ದೆಯಡಿ ಸಂರಕ್ಷಿಸಲಾಗು ತಿದೆ. ಅವುಗಳ ಯಾವುದೇ ಉತ್ಪನ್ನ ಗಳು, ಭಾಗಗಳ ಬಳಕೆ ನಿಷೇಧಿಸಲಾಗಿದೆ. ಅಂಬೆರ್ಗ್ರಿಸ್ ಮಾರಾಟ, ಬಳಕೆ ಶಿಕ್ಷಾರ್ಹ ಅಪರಾಧವಾಗಿದೆ.

ಉತ್ಪತ್ತಿ ಹೇಗೆ?: ತಿಮಿಂಗಿಲಗಳ ಜೀರ್ಣಾಂಗದಲ್ಲಿ ಈ ಉತ್ಪನ್ನ ರಚನೆಯಾಗುವ ಬಗ್ಗೆ

“ಬಳಕೆ ನಿಷೇಧಿಸಲಾಗಿದೆ"

'ಅಂಬೆರ್ಗ್ರಿಸ್ ಹಗುರವಾಗಿರುವ ಕಾರಣ ಸಮುದ್ರದಲ್ಲಿ ತೇಲುತ್ತಿರುತ್ತದೆ. ಕಾನೂನಿನ ಪ್ರಕಾರ ಅದನ್ನು ಮಾರಾಟ, ಸಾಗಣೆ ಅಥವಾ ಬಳಕೆ ಮಾಡುವಂತಿಲ್ಲ. ಸಂಶೋಧನೆ ಸಲುವಾಗಿ ಮಾತ್ರ ಉಪಯೋಗಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ನಿರ್ಧರಿಸಲಾಗುವುದು' ಎಂದು ಮುರ್ಡೇಶ್ವರದ ವಲಯ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.

ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

“ಸ್ಪರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳಿಂದ ಮಾತ್ರ ಅಂಬೆರ್ಗ್ರಿಸ್ ಹೊರ ಬರುತ್ತದೆ.

ಅವು ಮಣಕಿ (ಸ್ಕ್ವಿಡ್ ), ಕಪ್ಪೆ ಬೊಂಡಾಸ್ (ಕಟಲ್ ಫಿಶ್) ಮೀನುಗಳನ್ನು ಭೇಟೆಯಾಡಿ ತಿನ್ನುತ್ತವೆ. ಕೆಲವೊಮ್ಮೆಈ ಮೀನುಗಳ ಗಟ್ಟಿಯಾದ ಎಲುಬು ತಿಮಿಂಗಿಲದಲ್ಲಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣಾಂಗದಲ್ಲೇ ತಿಂಗಳು, ವರ್ಷಗಟ್ಟಲೆ ಉಳಿಯುತ್ತದೆ. ಇದರಿಂದ ತಿಮಿಂಗಿಲ ಕಿರಿಕಿರಿ ಅನುಭವಿಸುತ್ತದೆ. ಕೊನೆಗೆ ವಾಂತಿ ಮಾಡಿ ಹೊರಹಾಕುತ್ತದೆ. ಕೆಲವೊಮ್ಮೆ ಮಲದಲ್ಲೂ ಸೇರಿರುತ್ತದೆ' ಎಂದು ವಿವರಿಸಿದರು.

ತಿಮಿ೦ಗಿಲದ ಹೊಟ್ಟೆಯಲ್ಲಿ ತಿಂಗಳುಗಟ್ಟಲೆ ಸಂಗ್ರಹವಾಗಿದ್ದಾಗ ಹಲವು
ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಅದು ಮೇಣದಂಥ ರಚನೆಯಾಗಿ ಪರಿವ ರ್ತನೆಯಾಗುತ್ತದೆ. ಈ ಹಂತದಲ್ಲಿ ಆ ವಸ್ತು ಸುಗಂಧ ಪಡೆದುಕೊಂಡಿರು ತ್ತದೆ. ಪ್ರಖರ ಬಿಸಿಲಿಗೆ ಹಿಡಿದರೂ ಅದು ಕರಗುವ ಸಾಧ್ಯತೆಯಿರುತ್ತದೆ' ಎಂದು ತಿಳಿಸಿದರು.

News source: Prajavani

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...