ಸರ್ಪನಕಟ್ಟೆ ಹಾಗೂ ಸೋಡಿಗದ್ದೆ ಕ್ರಾಸ್ ನಲ್ಲಿ ವಿದ್ಯಾರ್ಥಿಗಳಿಗೆ ಬಸ್ಸು ನಿಲ್ಲಿಸಬೇಕು ; ಎಬಿವಿಪಿ ಭಟ್ಕಳ ಆಗ್ರಹ...

Source: S.O. News Service | By I.G. Bhatkali | Published on 11th October 2017, 12:31 AM | Coastal News | Don't Miss |

ಭಟ್ಕಳ:  ಭಟ್ಕಳ ತಾಲ್ಲೂಕಿನ ಸರ್ಪನಕಟ್ಟೆ,ಸೋಡಿಗದ್ದೆ ಮುಂತಾದ ಪ್ರದೇಶದಿಂದ ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ಭಟ್ಕಳ ಹಾಗೂ ಬೈಂದೂರು ಕಾಲೇಜಿಗೆ ಶಿಕ್ಷಣ ಪಡೆಯಲು ಹೋಗುತ್ತಿದ್ದಾರೆ. ಆದರೆ ಭಟ್ಕಳ-ಕುಂದಾಪುರ ಬಸ್ಸಿನಲ್ಲಿ ಸರ್ಪನಕಟ್ಟೆ,ಸೋಡಿಗದ್ದೆ ಕ್ರಾಸ್ ನಲ್ಲಿ ನಿಂತಿರುವ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯಲು ನಿರಾಕರಿಸುತ್ತಾರೆ.

ವಿದ್ಯಾರ್ಥಿಗಳು ಬಸ್ ಪಾಸ್ ಹೊಂದಿದ್ದು, ಭಟ್ಕಳ-ಕುಂದಾಪುರ ಬಸ್ಸಿನವರು ವಿದ್ಯಾರ್ಥಿಗಳನ್ನು ಕರೆದೊಯ್ಯಲು ನಿರಾಕರಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಬಸ್ಸಿನವರು ವಿದ್ಯಾರ್ಥಿಗಳನ್ನು ಬಿಟ್ಟು ಹೋಗುವುದರಿಂದ ಬೇರೆ ಬಸ್ಸು ಹಾಗೂ ಟೆಂಪೋಗೆ ಕಾಯುವಂತಾಗಿ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಬರಲು ಆಗುತ್ತಿಲ್ಲ. ಈ ಮಾರ್ಗದಲ್ಲಿ ಭಟ್ಕಳದಿಂದ ಕುಂದಾಪುರ ಹಾಗೂ ಕುಂದಾಪುರದಿಂದ ಭಟ್ಕಳಕ್ಕೆ ಸಾರಿಗೆ ಸಂಸ್ಥೆಯ ಸಾಕಷ್ಟು ಬಸ್ಸುಗಳು ಸಂಚರಿಸುವುದರಿಂದ ವಿದ್ಯಾರ್ಥಿಗಳನ್ನು ಈ ಬಸ್ಸಿನಲ್ಲಿ ಕರೆದೊಯ್ಯಲು ತಾವು ಅನುವು ಮಾಡಿಕೊಡಬೇಕು, ಎಂದು ಎಬಿವಿಪಿ ಭಟ್ಕಳ ವತಿಯಿಂದ ಬಸ್ ಡಿಪೋ ಮ್ಯಾನೇಜರ್ Y.K.ಬನಾವಳಿಕರ್ ರವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ, ಮಾತನಾಡಿದ ಅವರು ಆದಷ್ಟು ಬೇಗನೆ ಈ ಕುರಿತಾಗಿ ಅಗತ್ಯ ಕ್ರಮ ಕೈಗೊಂಡು,ಸಮಸ್ಯೆ ಬಗೆಹರಿಸುವುದಾಗಿ ಭರವಸೆಯನಿತ್ತರು.

ಈ ಸಂದರ್ಭದಲ್ಲಿ ಎಬಿವಿಪಿ ಪ್ರಮುಖರಾದ ಲೋಕೇಶ್ ದೇವಾಡಿಗ, ದಿವಾಕರ ನಾಯ್ಕ,ಮಹೇಶ್ ಸರ್ಪನಕಟ್ಟೆ, ಸದಾನಂದ ಬೆಳಕೆ,ನಿತೇಶ್ ಶಿರಾಲಿ ಹಾಗೂ ಲೋಕೇಶ್ ಮಂಕಿ ಉಪಸ್ಥಿತರಿದ್ದರು.

Read These Next

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...