ಜೀವ ಬೆದರಿಕೆ:ಗುತ್ತಿಗೆದಾರನ ಬಂಧನ

Source: S O News | By MV Bhatkal | Published on 25th April 2017, 8:16 PM | Coastal News | Don't Miss |

ಭಟ್ಕಳ: ಅನಗತ್ಯವಾಗಿ ಬಿದಿಬದಿಯ ವ್ಯಾಪಾರಿಗಳಿಂದ 2ರಷ್ಟು ಸುಂಕ ವಸೂಲಿ ಮಾಡುತ್ತಿದ್ದ ಪುರಸಭೆಯ ನೆಲಬಾಡಿಗೆ ವಸೂಲಿ ಮಾಡುವ ಗುತ್ತಿಗೆದಾರನೊರ್ವನನ್ನು ನಗರಠಾಣಾ ಪೊಲೀಸರು ಸೋಮವಾರ ಸಂಜೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
 ಹೆಚ್ಚುವರಿ ಸುಂಕ ನೀಡುವಂತೆ ಒತ್ತಾಯಿಸುತ್ತಿದ್ದಾನೆ ಎಂದು ತರಕಾರಿ ಮಾರಾಟ ಮಾಡುವ ವೃದ್ದೆ ರಘುನಾಥ ರಸ್ತೆಯ ನಿವಾಸಿ ಲಕ್ಷ್ಮೀ ಕೃಷ್ಣಪ್ಪ ನಾಯ್ಕ (65), ಭಟ್ಕಳ ಪಟ್ಟಣದ ಫಾರುಖಿ ಸ್ಟ್ರೀಟ್‍ನ ಕೆ.ಎಂ ಶಾಜೀರ್ ಈತನ ಕುರಿತು ದೂರು ನೀಡಿದ್ದರು. ಅರ್ಬನ್ ಬ್ಯಾಂಕ್ ಸಮೀಪ ತರಕಾರಿ ಬುಟ್ಟಿ ಹೊತ್ತುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿಯು ತನ್ನನ್ನು ಅಡ್ಡಗಟ್ಟಿ,ಹೆಚ್ಚುವರಿ ಸುಂಕ ಕೊಡಬೇಕೆಂದು ಒತ್ತಾಯಿಸಿ, ಕೂದಲು ಹಿಡಿದು ಎಳೆದು ಅವಮಾನಿಸಿ,ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ನಗರಠಾಣೆಗೆ ದೂರು ಭಾನುವಾರ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ನಗರಠಾಣೆ ಪೊಲೀಸರು ಸಿಪಿಐ ಸುರೇಶ ನಾಂiÀiಕ ಮಾರ್ಗದರ್ಶನದಲ್ಲಿ ಪಿಎಸ್‍ಐ ಅಣ್ಣಪ್ಪ ಮೊಗೇರ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...