73 ವರ್ಷಗಳಲ್ಲಿ ವಿಶ್ವವೇ ನಮ್ಮನ್ನು ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ-ಸಾಜಿದ್ ಮುಲ್ಲಾ

Source: sonews | By Staff Correspondent | Published on 15th August 2019, 11:19 PM | Coastal News |

ಭಟ್ಕಳ: ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮ ಚಳವಳಿಯಲ್ಲಿ ಎಲ್ಲಾ, ಜಾತಿ, ಜನಾಂಗ, ಪಂಥದ ಜನರು ಒಂದೇ ಎನ್ನುವಂತೆ ಅಹಿಂಸಾತ್ಮಕ ಹೋರಾಟ ನಡೆಸಿದ್ದರಲ್ಲದೇ ಎಷ್ಟೋ ಜನರು ತಮ್ಮ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮುಡುಪಾಗಿಟ್ಟಿದ್ದರು ಅಂತಹ ಮಹನೀಯರನ್ನು ನಾವು ಇಂದು ಸ್ಮರಿಸಬೇಕಾಗಿದೆ ಎಂದು ಉಪ ವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಅವರು ಹೇಳಿದರು. 

ಅವರು ಇಲ್ಲಿನ ನವಾಯತ್ ಕಾಲೋನಿಯ ವೈಎಎಸ್‌ಎ ತಾಲೂಕಾ ಕ್ರೀಡಾಂಗಣದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಸ್ವಾತಂತ್ರ್ಯಾ ನಂತರದ 73 ವರ್ಷಗಳಲ್ಲಿ ನಮ್ಮ ದೇಶವನ್ನು ಇಡೀ ವಿಶ್ವವೇ ನೋಡುವಂತೆ ಮಾಡುವಲ್ಲಿ ನಾವು ಯಶಸ್ವೀಯಾಗಿದ್ದೇವೆ. ಅಭಿವೃದ್ಧಿಯಲ್ಲಿ,  ಬಡತನವನ್ನು ನಿರ್ಮೂಲನೆ ಮಾಡುವಲ್ಲಿ, ಗ್ರಾಮಗಳಿಗೆ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಸೌಲಭ್ಯಗಳನ್ನು ನೀಡುವಲ್ಲಿ ನಾವು ಮುಂಚೂಣಿಯಲ್ಲಿದ್ದು ಅಂತರಿಕ್ಷದಲ್ಲಿಯೂ ನಾವು ಅತ್ಯಂತ ಉನ್ನತ ಪ್ರಗತಿಯನ್ನು ಸಾಧಿಸಿದ್ದೇವೆ. ನಾವೆಲ್ಲರೂ ದೇಶ ಕಟ್ಟುವ, ದೇಶವನ್ನು ಸಮೃದ್ಧಗೊಳಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದೂ ಅವರು ಹೇಳಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಸುನಿಲ್ ನಾಯ್ಕ ಮಾತನಾಡಿ ಸ್ವಾತಂತ್ರ್ಯೋತ್ಸವಕ್ಕೂ ಪೂರ್ವ ಒಂದೆಡೆ ಬರಗಾಲವನ್ನು ಎದುರಿಸಿದ್ದರೆ, ಇನ್ನೊಂದೆಡೆ ಅತಿವೃಷ್ಟಿಯನ್ನು ಎದುರಿಸಿದೆವು.  ಆದರೆ ನಮ್ಮ ಜಿಲ್ಲಾಡಳಿತ, ತಾಲೂಕಾ ಆಡಳಿತ ಮತ್ತು ಜನರು, ಸಂಘ ಸಂಸ್ಥೆಗಳ ಸಹಕಾರದಿಂದ ಎಲ್ಲವನ್ನು ಎದುರಿಸಲು ನಾವು ಶಕ್ತರಾಗಿದ್ದೇವೆ ಎಂದರು. 
ಕಾರ್ಯಕ್ರಮದಲ್ಲಿ ಶಿಕ್ಷಕ ಶ್ರೀಧರ ಶೇಟ್ ಸ್ವಾಗತಿಸಿ, ಶಿಕ್ಷಕ ಶ್ರೀಧರ ಶೇಟ್ ನಿರ್ವಹಿಸಿದರು.  

ತಹಸೀಲ್ದಾರ್ ವಿ.ಪಿ. ಕೊಟ್ರಳ್ಳಿ, ಡಿ.ವೈ.ಎಸ್.ಪಿ., ವೆಲೆಂಟೈನ್ ಡಿಸೋಜ, ಸಿ.ಪಿ.ಐ. ಕೆ.ಎಲ್.ಗಣೇಶ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣ ಸ್ವಾಮಿ, ಜಾಲಿ ಪ.ಪಂ. ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ, ಪುರಸಭಾ ಮುಖ್ಯಾಧಿಕಾರಿ ದೇವರಾಜ, ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅದಂ ಶೇಖ್ ಮುಂತಾದವರು ಉಪಸ್ಥಿತರಿದ್ದರು.   

ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮದಲ್ಲಿ ಸರಕಾರಿ ಪ್ರೌಢ ಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆದ ಎನ್.ಜೆ.ದರ್ಶನ್, ಲೋಹಿತ್‍ಕುಮಾರ್ ಎನ್. ನಾಯ್ಕ, ಶ್ವೇತಾ ವೈದ್ಯ ಇವರಿಗೆ ಸರಕಾರದ ವತಿಯಿಂದ ಲ್ಯಾಪ್ ಟಾಪ್ ನೀಡಿ ಗೌರವಿಸಲಾಯಿತು. ಅದೇ ರೀತಿಯಾಗಿ ಉರ್ದು ಮಾಧ್ಯಮದಲ್ಲಿ ತಾಲೂಕಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸಿಬಗತ್ತುಲ್ಲಾ, ಜುಲ್ಫಾ, ನಫಿಯಾಬಾನು, ಆಂಗ್ಲ ಮಾಧ್ಯಮದಲ್ಲಿ ತಾಲೂಕಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಚೈತಾಲಿ ಮೊಗೇರ, ಅಂಕಿತ್ ಗಣಪತಿ ಭಟ್ಟ, ಶೃದ್ಧಾ ವಿನೋದ ಪ್ರಭು, ಉಷಾ ನಾಯ್ಕ ಇವರುಗಳನ್ನು ಗೌರವಿಸಲಾಯಿತು. 
ಗ್ರಾಮೀಣ ಠಾಣೆಯ ಸಬ್ ಇನ್ಸಪೆಕ್ಟರ್ ರವಿ. ಜಿ. ಅವರು ಪರೇಡ್ ವಂದನೆ ನಡೆಸಿಕೊಟ್ಟರು. ನ್ಯೂ ಇಂಗ್ಲೀಷ್ ಶಾಲೆಯ ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಹಾಗೂ ರೈತಗೀತೆಯನ್ನು ಹಾಡಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...