ಅರಣ್ಯಾಧಿಕಾರಿಗಳ ವಿರುದ್ಧ ಮತ್ತೆ ತಿರುಗಿ ಬಿದ್ದ ಅತಿಕ್ರಮಣದಾರರು, ಭಟ್ಕಳ ಅರಣ್ಯ ಕಚೇರಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಆಗ್ರಹ

Source: S O News service | By V. D. Bhatkal | Published on 2nd October 2019, 12:46 PM | Coastal News |

ಭಟ್ಕಳ: ತಾಲೂಕಿನಾದ್ಯಂತ ಅರಣ್ಯ ಅತಿಕ್ರಮಣದಾರರ ಸಂಕಷ್ಟ ಮುಂದುವರೆದಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಅರಣ್ಯ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ನೇತೃತ್ವದಲ್ಲಿ ಅರಣ್ಯ ಕಚೇರಿಗೆ ಆಗಮಿಸಿದ ನೂರಾರು ಅತಿಕ್ರಮಣದಾರರು ಅರಣ್ಯಾಧಿಕಾರಿಗಳ ಮುಂದೆ ಆಕ್ರೋಶ ಹೊರ ಹಾಕಿದ ಘಟನೆ ಮಂಗಳವಾರ ನಡೆದಿದೆ

  ಈ ಸಂದರ್ಭದಲ್ಲಿ ಮಾತನಾಡಿದ ಎ.ರವೀಂದ್ರ ನಾಯ್ಕ, ಅತಿಕ್ರಮಣದಾರರು ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೂ ಅವರನ್ನು ಒಕ್ಕಲೆಬ್ಬಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೈಕೋರ್ಟ ತನ್ನ ಮಧ್ಯಂತರ ಆದೇಶದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದೆ. ಕೇಂದ್ರ ಅರಣ್ಯ ಮತ್ತು ಬುಡಕಟ್ಟು ಮಂತ್ರಾಲಯ ಹಾಗೂ ರಾಜ್ಯ ಸರಕಾರಗಳೂ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಆದರೆ ಸ್ಥಳೀಯ ಅಧಿಕಾರಿಗಳು ಈ ಆದೇಶಗಳಿಗೆ ಬೆಲೆ ನೀಡುತ್ತಿಲ್ಲ. 30-40 ವರ್ಷಗಳಿಂದ ಪಂಚಾಯತ ಪರವಾನಿಗೆ ಪಡೆದುಕೊಂಡು ಮನೆ ಕಟ್ಟಿಕೊಂಡು ವಾಸಿಸಿದವರು ಈಗ ಹೋಗುವುದಾದರೂ ಎಲ್ಲಿಗೆ, ಯಾವುದೇ ಅಧಿಕಾರಿ ಸ್ಥಳ ಪರಿಶೀಲನೆ ಮಾಡಿದರೂ ಇದು ಅರಿವಿಗೆ ಬರುತ್ತದೆ.

ಅತಿಕ್ರಮಣದಾರರು ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೂ ಅವರನ್ನು ಒಕ್ಕಲೆಬ್ಬಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೈಕೋರ್ಟ ತನ್ನ ಮಧ್ಯಂತರ ಆದೇಶದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದೆ. ಕೇಂದ್ರ ಅರಣ್ಯ ಮತ್ತು ಬುಡಕಟ್ಟು ಮಂತ್ರಾಲಯ ಹಾಗೂ ರಾಜ್ಯ ಸರಕಾರಗಳೂ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಆದರೆ ಸ್ಥಳೀಯ ಅಧಿಕಾರಿಗಳು ಈ ಆದೇಶಗಳಿಗೆ ಬೆಲೆ ನೀಡುತ್ತಿಲ್ಲ.
       - ಎ.ರವೀಂದ್ರ ನಾಯ್ಕ,
ಜಿಲ್ಲಾ ಅರಣ್ಯ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷರು

ಅತಿಕ್ರಮಿತ ಭೂಮಿಯಲ್ಲಿ ಹಲವಾರು ವರ್ಷಗಳಿಂದ ಅತಿಕ್ರಮಣದಾರರು ಬೆವರು ಸುರಿಸಿ ಬೆಳೆದ ತೆಂಗು, ಅಡಿಕೆ ಮರಗಳೆಲ್ಲ ಅಲಲಿಯೇ ಇವೆ. ಸದರಿ ಅತಿಕ್ರಮಿತ ಭೂಮಿಯ ಜಿಪಿಎಸ್ ಕಾರ್ಯವೂ ನಡೆದಿದೆ. ನಿವೇಶನ ಇನ್ನೂ ಮಂಜೂರಿಯಾಗಿಲ್ಲ ಎನ್ನುವುದನ್ನೇ ಮುಂದಿಟ್ಟು ಮಳೆಯಿಂದ ಗೋಡೆ ಬಿದ್ದರೆ ದುರಸ್ತಿ ಮಾಡಿಕೊಳ್ಳಲೂ ಅವಕಾಶ ನೀಡುವುದಿಲ್ಲ ಎಂದರೆ ಹೇಗೆ, ಇದು ನ್ಯಾಯಾಂಗ ನಿಂದನೆಯ ಕ್ರಮವಾಗುತ್ತದೆ ಎನ್ನುವುದನ್ನು ಅಧಿಕಾರಿಗಳು ಲಕ್ಷ್ಯದಲ್ಲಿರಿಸಿಕೊಳ್ಳಬೇಕು, ನಾವು ಯಾವುದೇ ಹೊಸ ಅತಿಕ್ರಮಣಕ್ಕೆ ಪ್ರೋತ್ಸಾಹ ನೀಡುತ್ತಿಲ್ಲ. ಆದರೆ ಇದ್ದವರನ್ನು ತೆರವುಗೊಳಿಸುವ ಕಾರ್ಯ ನಿಲ್ಲಬೇಕು, ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಅತಿಕ್ರಮಣದಾರರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹೊತ್ತಲ್ಲದ ಹೊತ್ತಿನಲ್ಲಿ ಮನೆಯೊಳಗೆ ಬಂದು ಬೆದರಿಕೆ ಹಾಕುತ್ತಿದ್ದಾರೆ. ಅವರಿಗೆ ಈ ಅಧಿಕಾರ ಕೊಟ್ಟವರು ಯಾರು, ಈ ಬಗ್ಗೆ ಅಧಿಕಾರಿಗಳು ಅತಿಕ್ರಮಣದಾರರಿಗೆ ಸ್ಪಷ್ಟ ಭರವಸೆ ನೀಡದೇ ಹೋದರೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಈ ನಡುವೆ ಮಾತನಾಡಲು ನಿಂತ ಕೆಲವು ಅತಿಕ್ರಮಣದಾರ ಮಹಿಳೆಯರು, ಇಲ್ಲಿ ಉಳ್ಳವರಿಗೊಂದು ನ್ಯಾಯ, ಬಡವರಿಗೆ ಒಂದು ನ್ಯಾಯ ಎನ್ನುವಂತಾಗಿದೆ. ನಮ್ಮ ಕಣ್ಣೆದುರಿನಲ್ಲಿಯೇ ಅರಣ್ಯ ಭೂಮಿಯಲ್ಲಿ ದೊಡ್ಡ ದೊಡ್ಡ ಮನೆ, ಬಂಗಲೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಕಳೆದ 30-40 ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ನೆಲೆ ಕಂಡುಕೊಂಡ ನಮಗೆ ಒಂದು ಪುಟ್ಟ ಕೋಣೆ, ಶೌಚಾಲಯ ಕಟ್ಟಿಸಿಕೊಳ್ಳಲೂ ಅವಕಾಶ ನೀಡುತ್ತಿಲ್ಲ. ನಮಗೂ ಪುಟ್ಟ ಮಕ್ಕಳಿದ್ದಾರೆ ಎಂದು ಅಳಲು ತೋಡಿಕೊಂಡರು. ನಂತರ ಮಾತನಾಡಿದ ಎಸಿಎಫ್ ಸುದರ್ಶನ, ನಾವೂ ಮಾನವೀಯ ನೆಲೆಯಲ್ಲಿಯೇ ಅತಿಕ್ರಮಣದಾರರಿಗೆ ನೆರವು ನೀಡಲು ಅವಕಾಶಗಳನ್ನು ಹುಡುಕುತ್ತಿದ್ದೇವೆ. ಕಾನೂನಿನ ವ್ಯಾಪ್ತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಲಾಗುವುದು ಎಂದು ತಿಳಿಸಿದರು. ಆರ್‍ಎಫ್‍ಓ ಸವಿತಾ ದೇವಾಡಿಗ ಉಪಸ್ಥಿತರಿದ್ದರು. ಭಟ್ಕಳ ಅತಿಕ್ರಮಣ ಹಕ್ಕು ಹೋರಾಟ ಸಮಿತಿಯ ಪ್ರಮುಖರಾದ ದೇವರಾಜ, ರಿಜ್ವಾನ್ ಮೊದಲಾದವರು ಹಾಜರಿದ್ದರು. ಎಸೈ ಹನುಮಂತ ಕುಡಗುಂಟಿ ನೇತೃತ್ವದಲ್ಲಿ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿತ್ತು.

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...