ಭಟ್ಕಳ ವಿಧಾನಸಭಾ ಕ್ಷೇತ್ರ; ಜಾತಿ, ಪಕ್ಷಸಿದ್ಧಾಂತ ಬದಿಗಿಟ್ಟು “ಅಭ್ಯರ್ಥಿ” ಗಳ ಬಗ್ಗೆ ಆಸಕ್ತಿ ತೋರುತ್ತಿರುವ ಮತದಾರ

Source: ಎಂ.ಆರ್.ಮಾನ್ವಿ | Published on 6th May 2023, 5:33 PM | Coastal News | Special Report | Don't Miss |

ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ೨೦೧೮ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆ ವಿಭಿನ್ನವಾಗಿ ಗೋಚರಿಸುತ್ತಿದೆ. ಇಲ್ಲಿನ ಮತದಾರ ಈ ಬಾರಿ ಪ್ರಜ್ಞಾವಂತನಾಗಿದ್ದಾನೆ. ಜಾತಿ, ಪಕ್ಷ ಸಿದ್ಧಾಂತ ಗೊಡವೆಗೆ ಹೋಗದೆ ಭಟ್ಕಳವನ್ನು ಯಾರು ಅಭಿವೃದ್ಧಿಪಡಿಸುತ್ತಾರೆ ಎಂಬುದನ್ನು ಅವಲೋಕಿಸುತ್ತಿದ್ದು ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಅವರ ಕಣ್ಣೀರು ಒರೆಸುವ ಅಭ್ಯರ್ಥಿಯ ಕಡೆಗೆ ವಾಲುತ್ತಿರುವುದು ಕಂಡು ಬರುತ್ತಿದೆ.

ಜನಮನದಾಳವನ್ನು ಅರಿಯಲು ಪ್ರಯತಸಿದ ಮಾಧ್ಯಮ ಪ್ರತಿನಿಧಿಗಳಿಗೆ ಇಲ್ಲಿನ ಮತದಾರರು ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿದ್ದು ಈ ಬಾರಿ ನಾವು ಯಾವುದೇ ಜಾತಿ, ಪಕ್ಷ, ಸಿದ್ದಾಂತವನ್ನು ನೋಡದೆ ಭಟ್ಕಳದಲ್ಲಿ ಶಾಂತಿ,

ಕ್ಷೇತ್ರದ ವಿವರ:

ಒಟ್ಟು ಮತದಾರರು: ೨೨೨೭೦೮

ಪುರುಷ ಮತದಾರರು: ೧,೧೨೯೮೮

ಮಹಿಳಾ ಮತದಾರರು: ೧,೦೯,೭೨೦

೨೦೧೮ರ ಚುನಾವಣಾ ಫಲಿತಾಂಶ:

ಸುನಿಲ್ ನಾಯ್ಕ (ಬಜೆಪಿ) ೮೩,೧೭೨ ಗೆಲುವು

ಮಾಂಕಾಳ್ ಎಸ್.ವೈದ್ಯ (ಕಾಂಗ್ರೇಸ್)  ೬೯,೦೩೬ ಸೋಲು

ಸೌಹಾರ್ದತೆಯನ್ನುಂಟು ಮಾಡುವಲ್ಲಿ ಶ್ರಮಿಸುವ, ಕೋಮುವೈಷಮ್ಯಕ್ಕೆ ಎಡೆಮಾಡಿಕೊಡದ, ಎಲ್ಲರ ಅಭಿವೃದ್ಧಿ ಬಯಸುವ ವ್ಯಕ್ತಿಗೆ ಮತ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ.

ಇಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್ ಎರಡು ಪಕ್ಷಗಳಿಗೆ ನೇರಾ ಹಣಾಹಣಿ ಇದ್ದರೂ ಕೂಡ ಕೊನೆ ಘಳಿಗೆಯಲ್ಲಿ ಜೆ.ಡಿ.ಎಸ್ ನಿಂದ ಸ್ಪರ್ಧಿಸಿರುವ ನಾಗೇಂದ್ರ ನಾಯ್ಕರು ಈ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪೈಪೋಟಿಯನ್ನು ನೀಡುತ್ತಿದ್ದಾರೆ. ಕಾಂಗ್ರೇಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಜೆ.ಡಿ.ಎಸ್ ಬಹಳ ಮಹತ್ವದ ಪಾತ್ರ ವಹಿಸಲಿದೆ.

ಜೆ.ಡಿ.ಎಸ್. ಅಭ್ಯರ್ಥಿ ನಾಗೇಂದ್ರ ನಾಯ್ಕ ಬಿಜೆಪಿಯ ಮತಗಳನ್ನು ಕಸಿದುಕೊಂಡಿದ್ದೇ ಆದಲ್ಲಿ ಕಾಂಗ್ರೇಸ್ ಗೆ ಪ್ಲಸ್ ಆಗಲಿದ್ದು ಒಂದು ವೇಳೆ ಇವರು ಕಾಂಗ್ರೇಸ್ ಪಕ್ಷದ ಸಾಂಪ್ರಾದಾಯಿಕ ಮತಗಳಿಗೆ ಕೈಹಾಕಿದ್ದಲ್ಲಿ ಬಿಜೆಪಿಗೆ ಪ್ಲಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇದಾವುದನ್ನೂ ತಲೆಕೆಡಿಸಿಕೊಳ್ಳದ ಮತದಾರ ಮಾತ್ರ ಈ ಬಾರಿ ಕಾಂಗ್ರೇಸ್, ಜೆ.ಡಿ.ಎಸ್, ಬಿಜೆಪಿಯನ್ನು ಆಯಾ ಪಕ್ಷಗಳ ಸಿದ್ಧಾಂತಗಳನ್ನು ಬದಿಗಿಟ್ಟು ಭಟ್ಕಳದ ಭವಿಷ್ಯ ರೂಪಿಸುವ ವ್ಯಕ್ತಿಗೆ ಮಾತ್ರ ಮತ ಹಾಕುವುದಾಗಿ ಪಣತೊಟ್ಟಿದ್ದಾನೆ.

ಮತಬೇಟೆಯಲ್ಲಿ ಕಾಂಗ್ರೇಸ್ ಬಿಜೆಪಿ ಎರಡೂ ಸಮಬಲವನ್ನು ಕಾಯ್ದುಕೊಂಡಿವೆ. ಇಲ್ಲಿ ಎರಡೂ ಪಕ್ಷಕ್ಕೆ ತನ್ನದೇ ಸಾಂಪ್ರಾದಾಯಿಕ ಮತಗಳಿವೆ. ಅಲ್ಲದೆ ಅಭ್ಯರ್ಥಿಗಳ ವ್ಯಕ್ತಿತ್ವ ಅವರು ಮಾಡಿದ ಅಭಿವೃದ್ಧಿ ಕಾರ್ಯ, ಜನರೊಂದಿಗೆ ಹೊಂದಿರುವ ಬಾಂಧವ್ಯ ಇವೆಲ್ಲವೂ ಕೂಡ ಇಲ್ಲಿನ ಗಣಿತವನ್ನು ಬದಲಿಸಬಲ್ಲವು ಎಂದು ಹೇಳಲಾಗುತ್ತಿದೆ.

ಸುನಿಲ್ ನಾಯ್ಕ : ಪ್ಲಸ್ ಪಾಯಿಂಟ್

೧. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ

೨. ದೇವಸ್ಥಾನ, ಮಹಾದ್ವಾರಗಳ ನಿರ್ಮಾಣಕ್ಕೆ ಹಣ ಸಹಾಯ

೩. ತನ್ನ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ

ಮೈನಸ್ ಪಾಯಿಂಟ್

೧. ಸ್ವ-ಜಾತಿ ಹಾಗೂ ಹಿಂದುತ್ವವಾದಿ ಸಂಘಟಗಳ ಕಡೆಗಣನೆ

೨. ಮೂಲ ಬಿಜೆಪಿಗ ಆಗದೆ ಇರುವುದು

೪. ಹಿಂದುತ್ವ ಸಂಘಟನೆಗಳ ಪ್ರತಿರೋಧ

೫. ಅನಂತ್ ಕುಮಾರ್ ಹೆಗಡೆ ಪ್ರಚಾರದಿಂದ ದೂರ ಉಳಿದಿದ್ದು

೬. ಸರ್ಕಾರದ ಒಂದು ಕೋಟಿ ಹಣವನ್ನು ತನ್ನ ಮನೆಯ ಖಾಸಗಿ ರಸ್ತೆಗೆ ಬಳಸಿಕೊಂಡಿದ್ದು.

೭. ಸ್ವ-ಜಾತಿಯ ಮಹಿಳೆಯರ ಮೇಲೆ ದೌರ್ಜನ್ಯ, ಸಾಮಾಜಿಕ ಜಾಲಾ ತಾಣಗಳಲ್ಲಿ ಅಪಮಾನ ಮಾಡಿದರೆ ಕ್ರಮಕ್ಕೆ ಶಿಫಾರಸ್ಸು ಮಾಡದೆ ಇರುವುದು.

೮. ಆಡಳಿತ ವಿರೋಧಿ ಅಲೆ. ೪೦% ಕಮಿಷನ್ ಸರ್ಕಾರ ಎಂಬ ಆರೋಪ

೨೦೧೩ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಮಾಂಕಾಳ್ ವೈದ್ಯ ಸಾಕಾಷ್ಟು ಜನಾಭಿವೃದ್ಧಿ ಕೆಲಸಕಾರ್ಯಗಳನ್ನು ಮಾಡಿದ್ದಾರೆ. ಅಧಿಕಾರ ಕಳೆದುಕೊಂಡರೂ ಕೂಡ ಅವರು ಜನರಿಂದ ದೂರವಾಗದೆ ಸದಾ ಜನರ ಪ್ರೀತಿಯನ್ನು ಗಳಿಸಿಕೊಂಡಿರುವ ವ್ಯಕ್ತಿ. ಅಧಿಕಾರ ಇದ್ದಾಗಲೂ ಇಲ್ಲದಾಗಲೂ ಪ್ರತಿದಿನ ಅವರ ಮನೆಯ ಎದುರು ಸೇರುವ ಜನರನ್ನು ಕಂಡರೆ ಮಾಂಕಾಳ್ ರವರು ಯಾವ ಮಟ್ಟದಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸಿದ್ದರು ಎನ್ನುವುದು ತಿಳಿದುಬರುತ್ತದೆ. ಮತ್ತೊಂದೆಡೆ ಬೆಂಗಳೂರು ಮತ್ತಿತರ ಕಡೆಗಳಲ್ಲಿ ವಾಸಿಸುತ್ತಿರುವ ಕ್ಷೇತ್ರದ ಯುವಕ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕ್ಷೇತ್ರಕ್ಕೆ ಮಾಂಕಾಳ್ ವೈದ್ಯರೇ ಗೆಲ್ಲಬೇಕು ಅವರಿಂದಲೇ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಹಾಗಾಗಿ ಅವರಿಗೆ ಮತ ನೀಡಿ ಎಂದು ಮನವಿ ಮಾಡುತ್ತ ವಿಡಿಯೋ ಸಂದೇಶ ಕಳುಹಿಸುತ್ತಿದ್ದಾರೆ.

೨೦೧೮ರ ಚುನಾವಣೆಯ ವೇಳೆ ಹೊನ್ನಾವರದ ಪರೇಶ್ ಮೇಸ್ತಾನ ಅಸಹಜ ಸಾವನ್ನು ಕೊಲೆ ಎಂದು ಬಿಂಬಿಸಿ ಅಧಿಕಾರ ಪಡೆದ ಸುನಿಲ್ ನಾಯ್ಕ ಈ ಬಾರಿ ಸ್ವ-ಪಕ್ಷದವರಿಂದಲೇ ಭಾರಿ ಪ್ರತಿರೋಧವನ್ನು ಎದುರಿಸುತ್ತಿದ್ದಾರೆ. ಹೊನ್ನಾವರ ಭಾಗದಲ್ಲಂತೋ ಸಾಮಾನ್ಯ ಜನರು ಸುನಿಲ್ ನಾಯ್ಕ ಹೆಸರು ಕೇಳಿದರೆ ಕೆಂಡವಾಗುತ್ತಾರೆ. ಕೇವಲ ಒಂದು ಜಾತಿಯವರಿಗೆ ಸೀಮಿತವಾಗಿದ್ದುಕೊಂಡು ಯಾವುದೇ ಅಭಿವೃದ್ಧಿ ಮಾಡದೆ, ಕೇವಲ ಒಂದೆರಡು ದೇವಸ್ಥಾನಗಳಿಗೆ ಹಣಕೊಟ್ಟು ಒಂದೆರಡು ದ್ವಾರಗಳನ್ನು ನಿರ್ಮಿಸಿಕೊಟ್ಟಿದ್ದನ್ನೆ ದೊಡ್ಡ ಸಾಧನೆ ಎಂದು ಬಿಂಬಿಸುತ್ತ ಮತ ಕೇಳುತ್ತಿದ್ದಾರೆ ಎಂಬ ಆರೋಪವನ್ನು ಮತದಾರರು ಮಾಡುತ್ತಿದ್ದಾರೆ. ಅಲ್ಲದೆ ಹಿಂದೂತ್ವ ಸಂಘಟನೆಗಳು ಸುನಿಲ್ ನಾಯ್ಕ ಮೂಲ ಬಿಜೆಪಿಗನಲ್ಲ ಎಂಬ ಕಾರಣ ನೀಡಿ ಅವರನ್ನು ವಿರೋಧಿಸುತ್ತಿದ್ದು ಇದು ಸುನಿಲ್ ನಾಯ್ಕರಿಗೆ ಮೈನಸ್ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಮಾಂಕಾಳ್ ಎಸ್. ವೈದ್ಯ:

ಪ್ಲಸ್ ಪಾಯಿಂಟ್:

೧. ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯ

೨. ಜನರೊಂದಿಗೆ ಸುಲಭವಾಗಿ ಬೆರೆಯುವ ಸಮಸ್ಯೆಗಳನ್ನು ಆಲಿಸುವುದು.

೩. ಕಷ್ಟದಲ್ಲಿದ್ದರಿಗೆ ಜಾತಿ, ಬಾಷೆಯನ್ನು ಲೆಕ್ಕಿಸದೆ ಕೈಲಾದಷ್ಟು ಸಹಾಯ ಮಾಡುವುದು.

೪. ಕೋರೊನಾ ಕಾಲದಲ್ಲಿ ಸ್ವಂತ ಖರ್ಚಿನಿಂದ ಚಿಕಿತ್ಸೆ ನೀಡಿದ್ದು.

೫. ಬಿಜೆಪಿಯ ಆಡಳಿತ ವಿರೋಧಿ ಅಲೆ

೬.  ಹಿಂದೂ ಮುಸ್ಲಿರೊಂದಿಗೆ ಸೌಹಾರ್ದತೆಯಿಂದ ಇರುವುದು.

ಮೈನಸ್ ಪಾಯಿಂಟ್

೧. ಮೋದಿ ಪರ ಜನರ ಸಹಾನುಭೂತಿ

೨. ಕಾಂಗ್ರೇಸ್ ಮುಖಂಡರಲ್ಲಿನ ಭಿನ್ನಾಭಿಪ್ರಾಯ

೩. ಪಕ್ಷ ಅಧಿಕಾರದಲ್ಲಿ ಇಲ್ಲದಿರುವುದು.

ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ನಾಮಧಾರಿ ಸಮುದಾಯದ ಅರ್ದದಷ್ಟು ಮತದಾರರು ಈ ಬಾರಿ ಕಾಂಗ್ರೇಸ್ ಪಕ್ಷದ ಬೆಂಬಲಕ್ಕೆ ನಿಂತುಕೊಂಡಿದ್ದಾರೆ. ಅಲ್ಲದೆ ಸಣ್ಣಪುಟ್ಟ ಹಿಂದುಳಿದ ಸಮುದಾಯಗಳು ಕೂಡ ಮಾಂಕಾಳರನ್ನು ಬೆಂಬಲಿಸುತ್ತಿವೆ. ಆದರೆ  ಹೆಚ್ಚಿನ ಮತದಾರರನ್ನು ಹೊಂದಿರುವ ಕಾಂಗ್ರೇಸ್ ಪಕ್ಷದ ಸಾಂಪ್ರಾದಾಯಿಕ ಮತದಾರರೆಂದು ಲೆಕ್ಕಿಸಲ್ಪಡುವ ಅಲ್ಪಸಂಖ್ಯಾತರು ಮಾತ್ರ ಈ ಬಾರಿ ತಮ್ಮ ಗುಟ್ಟನ್ನು ಬಿಟ್ಟುಕೊಡದೆ ಮೂರು ಪಕ್ಷದವರಲ್ಲಿ ನಡುಕವನ್ನುಂಟು ಮಾಡಿದ್ದಾರೆ. ತಂಝೀಮ್ ಸಂಸ್ಥೆ ಈ ಬಗ್ಗೆ ಯಾವುದೇ ನಿರ್ಣಯನ್ನು ಇದುವರೆಗೂ ಪ್ರಕಟಿಸದೆ ಇರುವುದರಿಂದಾಗಿ ಅಭ್ಯರ್ಥಿಗಳು ಸಹಜವಾಗಿ ಗೊಂದಲದಲ್ಲಿದ್ದಾರೆ.

ನಾಂಗೇಂದ್ರ ನಾಯ್ಕ: ಜೆ.ಡಿ.ಎಸ್

ಪ್ಲಸ್ ಪಾಯಿಂಟ್

೧. ವಿದ್ಯಾವಂತರಾಗಿದ್ದು ಹೈಕೋರ್ಟಿನ ನ್ಯಾಯಾವಾದಿಯಾಗಿರುವುದು.

೨. ಯುವಕರಿಗೆ ಉದ್ಯೋಗ ಸೃಷ್ಟಿಯ ಭರವಸೆ ನೀಡಿರುವುದು.

೩. ಜನಪರ ಕಾಳಜಿ, ಉತ್ತಮ ಯೋಜನೆ, ಕೃಷಿ ನೀರಾವರಿಗೆ ಆಧ್ಯತೆ ನೀಡಿದ್ದು

ಮೈನಸ್ ಪಾಯಿಂಟ್

೧.ಜೆ.ಡಿ.ಎಸ್ ನಲ್ಲಿ ಪಕ್ಷ ಸಂಘಟನೆಯ ಕೊರತೆ

೨. ಕ್ಷೇತ್ರದ ಜನರಿಗೆ ಪರಿಚಯದ ಕೊರತೆ

೩. ಕಾಂಗ್ರೇಸ್ ಬಿಜೆಪಿಯಲ್ಲಿ ಪ್ರಭಲ ಅಭ್ಯರ್ಥಿಗಳ ಕಣಕ್ಕಿಳಿದಿರುವುದು.

ಮೋದಿ ಪರ ಅಲೆ, ಹಿಂದುತ್ವ ಹಾಗೂ ಅಭಿವೃದ್ಧಿ ಕಾರ್ಯಗಳು ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು ಹೀಗಾಗಿ ಜನರು ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ -ಸುನಿಲ್ ನಾಯ್ಕ.

ಬಿಜೆಪಿಗರ ಸುಳ್ಳು ಹಿಂದುತ್ವ, ಅವರ ಭ್ರಷ್ಟಚಾರ ಹಾಗೂ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ನನಗೆ ಶ್ರೀರಕ್ಷೆಯಾಗಲಿದ್ದು, ಈ ಬಾರಿ ಕ್ಷೇತ್ರದ ಜನತೆ ನನಗೆ ಮತ್ತೊಂದು ಅವಕಾಶ ಖಂಡಿತವಾಗಿ ಕೊಡುತ್ತಾರೆ ಎಂಬ ಬಲವಾದ ನಂಬಿಕೆ ನನಗಿದೆ - ಮಾಂಕಾಳ್ ಎಸ್.ವೈದ್ಯ

ಜನರು ಪ್ರತಿಸಲವೂ ಹೊಸ ಮುಖವನ್ನು ಬಯಸುತ್ತಾರೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ನೀಡಿರುವ ಯೋಜನೆ, ಯುವಕರಿಗೆ ಉದ್ಯೋಗ ಸೃಷ್ಟಿಸುವ ಭರವಸೆ, ಹಾಗೂ ಜೆ.ಡಿ.ಎಸ್ ಪಕ್ಷದ ಜಾತ್ಯಾತೀತ ನಿಲುವು ನನ್ನ ಗೆಲುವಿಗೆ ನೆರವಾಗಲಿದೆ - ನಾಗೇಂದ್ರ ನಾಯ್ಕ ಜೆ.ಡಿ.ಎಸ್ ಅಭ್ಯರ್ಥಿ

Read These Next

ಅಕ್ರಮ ಗಣಿಗಾರಿಕೆ; ಬಂಧಿತ ರೌಡಿಶೀಟ‌ರ್ ಬಿಡುಗಡೆ ಮಾಡಲು ಪೊಲೀಸರಿಗೆ ಬೆದರಿಕೆ; ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

ಅಕ್ರಮ ಕಲ್ಲಿನಕೋರೆ ಪ್ರಕರಣದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ ವೇಳೆ ಠಾಣೆಗೆ ಬಂದು ಪೊಲೀಸರಿಗೆ ಬೆದರಿಕೆ ಹಾಕಿ ...

ಕುಂದಾಪುರ: ತಾಯಿಯ ಕೊಳೆತ ಮೃತದೇಹದೊಂದಿಗೆ 3 ದಿನ ಕಳೆದ ವಿಕಲಚೇತನ ಮಗಳು – ಆಸ್ಪತ್ರೆಯಲ್ಲಿ ನಿಧನ

ಮನೆಯಲ್ಲೇ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹದ ಜೊತೆ ಅನ್ನಾಹಾರ ಇಲ್ಲದೇ ಮೂರು ನಾಲ್ಕು ದಿನ ಕಳೆದ 32ರ ಹರೆಯದ ...

ರಸ್ತೆಯಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು

ಸ್ಥಳೀಯ ಜನರ ಸಹಕಾರದಿಂದ ಹನೀಫಾಬಾದ್ ರಸ್ತೆಯಲ್ಲಿ ಮೂರು, ಜಾಮಿಯಾಬಾದ್ ರಸ್ತೆಯಲ್ಲಿ ಮೂರು, ಮಿನಾ ರಸ್ತೆಯಲ್ಲಿ ಒಂದು ಕ್ಯಾಮೆರಾ ...

ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಭಟ್ಕಳ ತಾಲೂಕು

ನೀರಿನ ಸಮಸ್ಯೆಯಿಂದಾಗಿ ಭಟ್ಕಳದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿಗಾಗಿ ಸರತಿ ...

ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ

“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಹಜ್ ಯಾತ್ರಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ. ಎಲ್ಲಾ ಧರ್ಮದವರೂ ಒಂದು ತಾಯಿಯ ಮಕ್ಕಳಂತೆ ಇರಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಎಲ್ಲಾ ಧರ್ಮದವರೂ ಒಂದು ತಾಯಿಯ ಮಕ್ಕಳಂತೆ ಇರಲು ಎಲ್ಲ ಧರ್ಮದವರಲ್ಲೂ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ತುಂಬಬೇಕು ಎಂದು ...