ಭಟ್ಕಳ ಸಾರಾಯಿ, ಮಟಕಾ ದಂಧೆಗೆ ಎಎಸ್ಪಿ ಕಡಿವಾಣ

Source: S O News Service | By V. D. Bhatkal | Published on 2nd October 2019, 12:50 PM | Coastal News |

ಭಟ್ಕಳ: ತಾಲೂಕಿನಾದ್ಯಂತ ಜಾಲದಂತೆ ಹಬ್ಬಿಕೊಂಡಿದ್ದ ಅಕ್ರಮ ಸಾರಾಯಿ ಮಾರಾಟ ಹಾಗೂ ಮಟಕಾ ದಂಧೆಯ ವಿರುದ್ಧ ಸಮರ ಸಾರಿರುವ ಎಎಸ್‍ಪಿ ನಿಖಿಲ್, ಇಲ್ಲಿನ ಪಟ್ಟಭದ್ರ ಹಿತಾಸಕ್ತಿಗಳ ಕೆಂಗಣ್ಣಿಗೆ ಗುರಿಯಾಗಿರುವ ಮಾಹಿತಿ ಹೊರ ಬಿದ್ದಿದೆ.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟದ ಜಾಲವನ್ನು ಒಂದೊಂದಾಗಿ ಕೆದಕಿ ಸಾಗುತ್ತಿರುವ ಅವರು, ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೆ ಆಯಾ ಭಾಗದ ರಕ್ಷಣಾ ಹೊಣೆ ಹೊತ್ತಿರುವ, ಎಸ್‍ಐ, ಪೊಲೀಸ್ ಸಿಬ್ಬಂದಿಗಳನ್ನೇ ಹೊಣೆಗಾರರನ್ನಾಗಿ

ಸಾರಾಯಿ, ಮಟಕಾ ದಂಧೆಯ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತಿದೆ. ವರ್ಗಾವಣೆ ವಿಷಯವನ್ನು ಸಾರ್ವಜನಿಕರಿಂದಲೇ ತಿಳಿದು ಕೊಳ್ಳುತ್ತಿದ್ದೇನೆ. ನಾವು ಸರಕಾರಿ ಅಧಿಕಾರಿಗಳು, ಸರಕಾರ ಎಲ್ಲಿ ಹೇಳುತ್ತದೆಯೋ ಅಲ್ಲಿ ಹೋಗಿ ಕೆಲಸ ಮಾಡಲು ಸಿದ್ಧನಿದ್ದೇನೆ.
                                 - ಎಸ್ಪಿ ನಿಖಿಲ್

ಮಾಡಬೇಕಾಗುತ್ತದೆ ಎಂದು ಸಭೆ ಕರೆದು ಎಚ್ಚರಿಸಿರುವ ಮಾಹಿತಿ ಲಭಿಸಿದೆ. ಮಟಕಾದ ವಿರುದ್ಧವೂ ಮುಗಿ ಬಿದ್ದಿರುವ ಅವರು, ಮಟಕಾ ಕುಳಗಳಿಗೂ ಬೆವರು ಇಳಿಸಿದ್ದಾರೆ. ಈ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಕೆಲವು ಮುಖಂಡರು, ದಂಧೆಕೋರರು ಎಎಸ್ಪಿಯವರನ್ನು ಪುಸಲಾಯಿಸುವ ಪ್ರಯತ್ನ ನಡೆಸಿದರಾದರೂ ಪ್ರಯತ್ನ ಸಫಲವಾಗಿಲ್ಲ. ಕೆಲವು ಧುರಿಣರುಗಳಿಗೆ ತಮ್ಮ ಕೆಲಸಕ್ಕೆ ಅಡ್ಡ ಬರದಂತೆಯೂ ತಾಕೀತು ಮಾಡಿರುವ ಮಾಹಿತಿಯೂ ಹರಿದಾಡುತ್ತಿದೆ. ಎಎಸ್ಪಿಯವರ ಈ ಕಟ್ಟುನಿಟ್ಟಿನ ನಡೆ ಸಾರಾಯಿ, ಮಟಕಾ ಕುಳಗಳಲ್ಲದೇ ಕೆಲ ಪೊಲೀಸ್ ಅಧಿಕಾರಿಗಳಿಗೂ ತಲೆ ನೋವನ್ನು ತಂದಿದೆ. ಮೂಲಗಳ ಪ್ರಕಾರ ಭಟ್ಕಳಕ್ಕೆ ಬಂದ 15 ದಿನಗಳಲ್ಲಿಯೇ ಎಎಸ್ಪಿಯವರನ್ನು ಭಟ್ಕಳದಿಂದ ವರ್ಗಾವಣೆ ಮಾಡಿಸುವ ಪ್ರಯತ್ನವೂ ನಡೆದಿದ್ದು, ಇದಕ್ಕೆ ಎಎಸ್ಪಿ ಡೋಂಟ್ ಕೇರ್ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಎಸ್‍ಪಿ ನಿಖಿಲ್, ನಾನೂ ಇದನ್ನು ಸಾರ್ವಜನಿಕರಿಂದ ತಿಳಿದುಕೊಂಡಿದ್ದೇನೆ. ನಾವು ಸರಕಾರಿ ಅಧಿಕಾರಿಗಳು, ಸರಕಾರ ಎಲ್ಲಿ ಹೇಳುತ್ತದೆಯೋ ಅಲ್ಲಿ ಹೋಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. 

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...