ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು. ಸಂಬಂಧಿಕರ ಪ್ರತಿಭಟನೆ

Source: SO News | By Laxmi Tanaya | Published on 3rd September 2020, 7:07 PM | Coastal News | Don't Miss |

ಕಾರವಾರ : ಸಹಜ ಹೆರಿಗೆಯಾಗಿದ್ದ ಮಹಿಳೆಯೋರ್ವಳು ಗುರುವಾರ ಟ್ಯುಬೊಕ್ಟಮಿ ಚಿಕಿತ್ಸೆ ನೀಡುವಾಗ ಸಾವನ್ನಪ್ಪಿದ ಘಟನೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. 

ಗೀತಾ ಶಿವನಾಥ ಬಾನಾವಳಿಕರ (೨೮) ಎಂಬಾಕೆ ಸೋಮವಾರ ದಿನ ಸಹಜ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಎರಡು ಮಕ್ಕಳಾದ ಮೇಲೆ ವೈದ್ಯರ ಸಲಹೆಯಂತೆ ಟ್ಯಬೊಕ್ಟಮಿ ಚಿಕಿತ್ಸೆಗೆ ಮುಂದಾಗಿದ್ದಳು. ಇಂದು ಚಿಕಿತ್ಸೆ ಸಂದರ್ಭದಲ್ಲಿ ಸಾವನ್ನಪ್ಪಿದ್ದಾಳೆ. ವೈದ್ಯರ ನಿರ್ಲಕ್ಷದಿಂದಾಗಿ ಆಕೆ ಸಾವ್ವಪ್ಪಿದ್ದಾಳೆಂದು ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಜಿಲ್ಲಾಸ್ಪತ್ರೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಚಿಕಿತ್ಸೆ ಪೂರ್ವದಲ್ಲಿ ಬೇಕಾಗುವ ದಾಖಲೆಗಳಿಗೆ ಸಿಗ್ನೆಚರನ್ನ ಹಾಕಿದ್ದಾಳೆ. ಆದ್ರೆ ಚಿಕಿತ್ಸೆ ಸಂದರ್ಭದಲ್ಲಿ ಗೀತಾ ಸಾವನ್ನಪ್ಪಿದ್ದಾಳೆ. ಮಗು ಜನಿಸಿ ನಾಲ್ಕು ದಿನವೂ ಕಳೆದಿಲ್ಲ. ಲವಲವಿಕೆಯಿಂದ ಬಾಣಂತಿ ಸಾವನ್ನಪ್ಪಿರುವ ವಿಷಯ ತಿಳಿದ ಸಂಬಂಧಿಕರು ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಬಾಣಂತಿ ಸಾವಿನಿಂದಾಗಿ ನೂರಾರು ಸಂಖ್ಯೆಯ ಅವರ ಸಂಬಂಧಿಕರು ಆಸ್ಪತ್ರೆ ಎದುರು ಆಕ್ರಂದನ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ವೈದ್ಯರ ವಿರುದ್ದ ಸೇರಿದ ನಾಗರಿಕರು ಘೋಷಣೆ ಕೂಗಿದರು. ವೈದ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ರು. ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿದ್ದಾಳೆಂದು ಆರೋಪಿಸಿದ್ದಾರೆ.


ಸಾಮಾನ್ಯವಾಗಿ ಚಿಕಿತ್ಸೆ ಮಾಡುವ ಮೊದಲು ರೋಗಿಯ ಬಿಪಿ , ಇಸಿಜಿ ಎಲ್ಲವುಗಳನ್ನ ವೈದ್ಯರು ಮಾಡ್ತಾರೆ. ಎಲ್ಲಾ ನಾರ್ಮಲ್ ಇದ್ರೆ ಮಾತ್ರ ಚಿಕಿತ್ಸೆಗೆ ಮುಂದಾಗ್ತಾರೆ. . ಆದರೆ ಅನೆಸ್ತೇಸಿಯಾ ಹೆಚ್ಚು ಕಡಿಮೆಯಿಂದಾಗಿ ಗೀತಾ ಸಾವನ್ನಪ್ಪಿದ್ದಾಳೆಂದು ಸಂಬಂಧಿಕರು ಆರೋಪಿಸಿದ್ದಾರೆ. 

ಆದ್ರೆ ಚಿಕಿತ್ಸೆ ಸಂದರ್ಭದಲ್ಲಿಯೇ ಮಹಿಳೆಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾಳೆಂದು ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ ಹೇಳಿದ್ದಾರೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...