ಬಹರೇನ್: "ದ್ವೇಶ ರಾಜಕೀಯ ನಿಲ್ಲಿಸಿ" ಇಂಡಿಯನ್ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕದಿಂದ ಅಭಿಯಾನ

Source: nazeer bahrain | By Arshad Koppa | Published on 13th September 2016, 9:01 AM | Gulf News |

ಬಹರೇನ್, ಸೆ ೧೨: ಬಹ್ರೈನ್ ಇಂಡಿಯನ್ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕ ಹಮ್ಮಿಕೊಂಡಿದ್ದ "ದ್ವೇಶ ರಾಜಕೀಯ ನಿಲ್ಲಿಸಿ" ಅಭಿಯಾನದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಹಮದ್ ಟೌನ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯನ್ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕಾಧ್ಯಕ್ಷ ಮುಹಮ್ಮೆದ್ ಇರ್ಶಾದ್ ತುಂಬೆ ಮಾತನಾಡಿ ಭಾರತದ ಪ್ರಸಕ್ತ ಸನ್ನಿವೇಶದ ವಿಷಯವನ್ನು ಸವಿಸ್ತಾರವಾಗಿ ವಿವರಿಸುತ್ತಾ ಭಾರತದಲ್ಲಿ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ಜನರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಆಡಳಿತರೂಢ ಪಕ್ಷಗಳು ಮಾತ್ರ ತಲೆಕೆಡಿಸಿಕೊಳ್ಳದೆ ದ್ವೇಷಪೂರಿತ ಹೇಳಿಕೆಯನ್ನು ಮುಂದುವರೆಸುತ್ತಾ ಜನರ ಮಧ್ಯೆ ದ್ವೇಷವನ್ನು ಹರಡಿಸುತ್ತಿದೆ. ಸಮಾಜಘಾತುಕ ಶಕ್ತಿಗಳ ವಿರುದ್ದ ಯಾವುದೇ ಕಠಿಣ ಕ್ರಮಕೈಗೊಳ್ಳದೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂದು ವಿವರಿಸುತ್ತಾ ಜನರಲ್ಲಿ ಜಾಗ್ರತಿ ಮೂಡಿಸುವ ಕೆಲಸವನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಮಾಡಬೇಕಾಗಿದೆ. ಸಮಸ್ಯೆಗಳ ವಿರುದ್ದ ಕಾನೂನಿನಡಿಯಲ್ಲಿ ಹೋರಾಟವನ್ನು ಮಾಡಬೇಕಾಗಿರುವ ಅನಿವಾರ್ಯವಿದೆ ಎಂದು ಕರೆಕೊಟ್ಟರು.

ನಂತರ ಭಾರತದ ಪ್ರಸಕ್ತ ಸನ್ನಿವೇಶದ ಕುರಿತು ಸಭಿಕರ ನಡುವೆ ಚರ್ಚೆ ನಡೆಸಲಾಯಿತು. ಇಂಡಿಯನ್ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮುಹಮ್ಮೆದ್ ಅತಾವುಲ್ಲಾಹ್ ಸುಳ್ಯ ಇವರು ಚರ್ಚೆಯ ವಿಷಯವನ್ನು ಪ್ರಸ್ತಾಪಿಸಿ ಸಭಿಕರ ಪ್ರಶ್ನೆಗೆ ಉತ್ತರಿಸಿ ವಿವರಿಸಿಕೊಟ್ಟರು.

ಕಾರ್ಯಕ್ರಮವನ್ನು ಆಸಿಫ್ ಬಿ. ಸಿ. ರೋಡ್ ಸ್ವಾಗತಿಸಿ, ನಿಝಾಮ್ ನಿಜ್ಜು ಮಂಗಳೂರ್ ವಂದಿಸಿದರು.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.