ದುಬೈ: ಬಿ.ಆರ್. ಶೆಟ್ಟಿ ಆಸ್ತಿ ಸ್ತಂಭನ, ಬ್ರಿಟನ್ ಕೋರ್ಟ್ ಆದೇಶ

Source: VB News | By JD Bhatkali | Published on 16th February 2021, 11:16 AM | Gulf News | Don't Miss |

ದುಬೈ: ಅಬುಧಾಬಿ ಕಮರ್ಷಿ ಯಲ್ ಬ್ಯಾಂಕ್ (ಎಡಿಸಿಬಿ)ನ ಕೋರಿಕೆಯ ಮೇರೆಗೆ ಬ್ರಿಟನ್‌ನ ನ್ಯಾಯಾಲಯವೊಂದು ಕನ್ನಡಿಗ ಸ್ಥಾಪಕ ಬಿ.ಆರ್.ಶೆಟ್ಟಿ, ಮಾಜಿ ಸಿಇಒ ಪ್ರಶಾಂತ ಮಂಗತ್ ಮತ್ತು ಇತರ ಇಬ್ಬರು ಮಾಜಿ ಹಿರಿಯ ಅಧಿಕಾರಿಗಳು ವಿಶ್ವಾದ್ಯಂತ ಹೊಂದಿರುವ ಆಸ್ತಿಗಳನ್ನು ಸ್ತಂಭನಗೊಳಿಸಲು ಆದೇಶಿಸಿದೆ.

ಅಬುಧಾಬಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಎನ್ ಎಂಸಿಯಲ್ಲಿನ ಅಕ್ರಮ ಹಣಕಾಸು ಅವ್ಯವಹಾರಗಳು ಕಳೆದ ವರ್ಷ ಬೆಳಕಿಗೆ ಬಂದ ನಂತರ ಕಂಪೆನಿಯು ಪತನಗೊಂಡಿತ್ತು ಮತ್ತು ನ್ಯಾಯಾಲಯದ ಆದೇಶದಂತೆ ಪರ್ಯಾಯ ವ್ಯವಸ್ಥೆಯು ಅದರ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಎನ್‌ಎಂಸಿಗೆ ಒಂದು ಶತಕೋಟಿ ಡಾಲರ್‌ಗೂ ಹೆಚ್ಚು ಸಾಲವನ್ನು ನೀಡಿದ್ದ ಎಡಿಸಿಬಿ ಮಾತುಕತೆಗಳ ಮತ್ತು ಕಂಪೆನಿಯ ಹಿಂದಿನ ಆಡಳಿತದ ವಿರುದ್ಧ ಕಾನೂನು ಪ್ರಕರಣಗಳ ನೇತೃತ್ವವನ್ನು ವಹಿಸಿದೆ. ಇತರ ಹಲವಾರು ಸ್ಥಳೀಯ ಮತ್ತು ವಿದೇಶಿ ಬ್ಯಾಂಕುಗಳಿಂದಲೂ ಸಾಲಗಳನ್ನು ಪಡೆದಿದ್ದ ಎನ್‌ಎಂಸಿ 400 ಕೋ.ಡಾ. ಸಾಲಗಳನ್ನು ಪಾವತಿಸದೆ ಬಾಕಿಯುಳಿಸಿಕೊಂಡಿದೆ ಎನ್ನಲಾಗಿದೆ. ಎಡಿಸಿಬಿಯ ಕೋರಿಕೆಯ ಮೇರೆಗೆ ಎನ್‌ಎಂಸಿಯ ಮಾಜಿ ಹಿರಿಯ ಅಧಿಕಾರಿಗಳ ಆಸ್ತಿಗಳು ಪರಭಾರೆಯಾಗುವ ಅಪಾಯವನ್ನು ತಡೆಯಲು ಉಚ್ಚ ನ್ಯಾಯಾಲಯವೊಂದು ಅವುಗಳ ಸ್ತಂಭನಕ್ಕೆ ಆದೇಶಿಸಿದೆ ಎಂದು ಲಂಡನ್‌ನ ಮಾಧ್ಯಮಗಳು ವರದಿ ಮಾಡಿವೆ. ಮಾಜಿ ಆಡಳಿತಾಧಿಕಾರಿಗಳು ವಂಚನೆಯನ್ನು ಎಸಗಿದ್ದಾರೆ ಎಂದು ಏನ್ ಎಂ ಸಿಯ ಹಾಲಿ ಸಿಇಓ ಮೈಕಲ್ ಡೇವಿಸ್ ಅವರುನೀಡಿರುವ ಲಿಖಿತ ಹೇಳಿಕೆಯನ್ನು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Read These Next

ಪಾರ್ಶ್ವವಾಯು ಪೀಡಿತರಾಗಿದ್ದ ರಿಯಾದ್ ಉದ್ಯೋಗಿ ವಿಮಾನದ ಮೂಲಕ ತಾಯ್ನಾಡಿಗೆ. ಮಾನವೀಯತೆ ಮೆರೆದ ವೈದ್ಯರ ಮತ್ತು ಸಮಾಜಸೇವಕ ಬಳಗ.

ಮಂಗಳೂರು : ಕಳೆದ ಮೂರುವರೆ ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರನ್ನ ...

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಶೀಘ್ರವೇ ಪರಿಹಾರ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

ಮಂಡ್ಯ : ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ ಬಂದಾಗ ಅವರ ಸಮಸ್ಯೆಗಳಿಗೆ ...