ಭಟ್ಕಳದ ಸಿದ್ಧಾರ್ಥ ಕಾಲೇಜಿನಲ್ಲಿ ವಾರ್ಷಿಕೋತ್ಸವ, ವೃತ್ತಿ ಮಾರ್ಗದರ್ಶನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

Source: S O News | By I.G. Bhatkali | Published on 25th December 2023, 2:05 AM | Coastal News |

ಭಟ್ಕಳ: ಸಿದ್ಧಾರ್ಥ ಪದವಿ ಪೂರ್ವ ಕಾಲೇಜು ಭಟ್ಕಳ ಮತ್ತು ಸಿದ್ಧಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜು ಶಿರಾಲಿ ಇದರ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ವೃತ್ತಿಮಾರ್ಗದರ್ಶನ ಕಾರ್ಯಕ್ರಮವನ್ನು ದಿನಾಂಕ 23-12-2023ರಂದು ಮದ್ಯಾಹ್ನ ಹಮ್ಮಿಕೊಳ್ಳಲಾಯಿತು. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಾರವಾರದ ಉಪನಿರ್ದೇಶಕ ಸತೀಶ ಬಿ. ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು.

ಸಣ್ಣ ಕುಗ್ರಾಮವಾದ ಅತ್ತಿಬಾರ್‌ನಲ್ಲಿ ನೆಲೆಸಿರುವ  ದುರ್ಗಯ್ಯ ಗೊಂಡ ಇವರ ಇಬ್ಬರು ಹೆಣ್ಣು ಮಕ್ಕಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಪ್ರಯುಕ್ತ ಅವರನ್ನು ಸನ್ಮಾನಿಸಲಾಯಿತು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ ಐ.ಐ.ಎಸ್.ಟಿ. ತಿರುವನಂತಪುರ (ಒಂದು ವಿದ್ಯಾರ್ಥಿ) (ಜೆ.ಇ.ಇ ಅಡ್ವಾನ್ಸ್), ಎಮ್.ಬಿ.ಬಿ.ಎಸ್. (4 ವಿದ್ಯಾರ್ಥಿಗಳು), ಬಿ.ಎ.ಎಮ್.ಎಸ್. (3 ವಿದ್ಯಾರ್ಥಿಗಳು), ಕೃಷಿ ವಿಜ್ಞಾನ (2 ವಿದ್ಯಾರ್ಥಿಗಳು), ಪ್ರತಿಷ್ಠಿತ ಇಂಜಿನೀಯರಿAಗ್ ಕಾಲೇಜುಗಳಲ್ಲಿ ಬಿ.ಇ. ಮತ್ತು ದ್ವಿತೀಯ ಪಿ.ಯು.ಸಿ. 2023ರಲ್ಲಿ 90% ಕಿಂತ ಅಧಿಕ ಅಂಕಗಳನ್ನು ಪಡೆದ 85 ವಿದ್ಯಾರ್ಥಿಗಳಿಗೆ ಅವರ ಪಾಲಕರ ಸಹಿತ ಸನ್ಮಾನಿಸಿ ಗೌರವಿಸಲಾಯಿತು. ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ 250ಕ್ಕೂ ಅಧಿಕ ವಿದ್ಯಾರ್ಥಿಗಳ ಪಾಲಕರು ಹಾಜರಿದ್ದು ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿದರು.

ಎನ್.ಐ.ಟಿ.ಕೆ ಸುರತ್ಕಲ್‌ನಲ್ಲಿ ಅಸೋಸಿಯೇಟ್ ಪ್ರೊಪೆಸರ್ ಡಾ| ಜೋರಾ ಗೊಂಡ ಪಾಲಕರನ್ನು ಉದ್ದೇಶಿಸಿ ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲಿ ಸಂಸ್ಕಾರವನ್ನು ಹೇಗೆ ನೀಡಬೇಕು ಎನ್ನುವ ಮಾಹಿತಿ ನೀಡಿದರು.
ಭಟ್ಕಳದ ಸಿವಿಲ್ ಆಸ್ಪತ್ರೆಯಲ್ಲಿ ಅತ್ಯಂತ ಹೆಸರುವಾಸಿಯಾದ ಜನರಲ್ ಸರ್ಜನ್ ಡಾ|| ಅರುಣ ಕುಮಾರ ಮಾತನಾಡಿ ದೇಶದ ಬಗ್ಗೆ ಸ್ವಾಭಿಮಾನ ಮತ್ತು ದೇಶಪ್ರೇಮ ಬೆಳೆಸಿಕೊಂಡು ಪ್ರತಿಭಾವಂತರು ಭಾರತದಲ್ಲಿಯೇ ನೆಲೆಸಿ ನಿಮ್ಮ ಕೊಡುಗೆಯನ್ನು ಸಮಾಜಕ್ಕೆ ನೀಡಿ ಎನ್ನುವ ಸಂದೇಶ ನೀಡಿದರು.

ವಿಜಯ ಬ್ಯಾಂಕಿನ ನಿವೃತ್ತ ರೀಜನಲ್ ಮ್ಯಾನೇಜರ್  ಎಂ.ಆರ್. ನಾಯ್ಕ ಎಜ್ಯುಕೇಶನ್ ಲೋನ್ ಪಡೆಯುವ ವಿಧಾನದ ಬಗ್ಗೆ ವಿದ್ಯಾರ್ಥಿಗಳ ಪಾಲಕರಿಗೆ ಮಾಹಿತಿ ನೀಡಿದರು.

ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ  ಅಶೋಕ ಕುಮಾರ ಶೆಟ್ಟಿ, ರಸಾಯನಶಾಸ್ತçದ ಹಿರಿಯ ಉಪನ್ಯಾಸಕರಾದ ಎಂ.ಕೆ. ನಾಯ್ಕ, ಟ್ರಸ್ಟೀ ಸುಜ್ಞಾನ ಬೈಂದೂರು ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅರ್ಚನಾ ಯು. ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಸ್ತುತ ಸಾಲಿನಲ್ಲಿ ನಡೆದ ವಿವಿಧ ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಿದರು.

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...