ಪ್ರತಿಭಟನೆಗಳು, ವಿಫಲ ಮಾತುಕತೆಗಳು, ಹಿಂಸಾಚಾರ, ಸಾವುಗಳ ನಡುವೆ ಕೃಷಿ ಕಾಯ್ದೆಗಳು ಮತ್ತು ರೈತರ ಆಂದೋಲನ ಸಾಗಿ ಬಂದ ದಾರಿ.....

Source: VB News | By I.G. Bhatkali | Published on 20th November 2021, 6:57 PM | National News | Special Report |

2020, ಜೂ.5: ಮೋದಿ ಸರಕಾರದಿಂದ ಬೆಲೆ ಭರವಸೆ ಕುರಿತು ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ;ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ 2020 ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ, 2020 ಹೀಗೆ ಮೂರು ನೂತನ ಕೃಷಿ ಮಸೂದೆಗಳ ಪ್ರಕಟನೆ

14 ಜೂನ್ ನಂತರ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬಿನ ವಿವಿಧ ಭಾಗಗಳಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು

ಸೆ.14: ಸಂಸತ್ತಿನಲ್ಲಿ ಸುಗ್ರೀವಾಜ್ಞೆಯನ್ನು ತರಲಾಯಿತು

ಸೆ.17: ಮಸೂದೆಗಳಿಗೆ ಲೋಕಸಭೆಯ ಅಂಗೀಕಾರ, ಅಕಾಲಿ ದಳದ ಹರಸಿಮತ್ ಕೌರ್ ಆಮರಿಂದ ಮೋದಿ ಸಂಪುಟಕ್ಕೆ ರಾಜೀನಾಮೆ

ಸೆ.20: ರಾಜ್ಯಸಭೆಯಲ್ಲಿ ಬೃಹತ್ ಕೋಲಾಹಲದ ನಡುವೆಯೇ ಮಸೂದೆಗಳಿಗೆ ಧ್ವನಿಮತದಿಂದ ಅಂಗೀಕಾರ

ಸೆ.24: ಪಂಜಾಬ್ ರೈತರಿಂದ ಮೂರು ದಿನಗಳ 'ರೈಲು ತಡೆ ಪ್ರತಿಭಟನೆ ಆರಂಭ

ಸೆ.25: ಮೂರು ಪ್ರಸಾವಿತ ಕಾನೂನುಗಳ ವಿರುದ ದೇಶಾದ್ಯಂತ ಬೀದಿ ಪ್ರತಿಭಟನೆಗಳಿಗೆ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಕರೆ

ಸೆ.26: ಶಿರೋಮಣಿ ಅಕಾಲಿ ದಳದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಬೆಂಬಲ ವಾಪಸ್ 

ಸೆ.27: ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರ ಅಂಕಿತ 

ನ.3:ಪಂಚಾಬ್ ಮತ್ತು ಹರ್ಯಾಣಗಳಲ್ಲಿಯ ರೈತ ಒಕ್ಕೂಟಗಳಿಂದ ದೇಶಾದ್ಯಂತ ರಸ್ತೆ ತಡೆಗೆ ಕರೆ 

ನ.25:'ದಿಲ್ಲಿಚಲೋ' ಆಂದೋಲನಕ್ಕೆ ಪಂಜಾಬ್ ಮತ್ತು ಹರ್ಯಾಣಗಳಲ್ಲಿಯ ರೈತ ಒಕ್ಕೂಟಗಳಿಂದ ಕರೆ, ಮುಂದಿಟ್ಟು ನಗರ ಪ್ರವೇಶಕ್ಕೆ ಕೋವಿಡ್ ಕಾರಣವನ್ನು ದಿಲ್ಲಿ ಪೊಲೀಸರಿಂದ ಅನುಮತಿ ನಿರಾಕರಣೆ

ನ.26: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗಾಗಿ ಪಂಚಾಬ್ ಮತ್ತು ಹರ್ಯಾಣ ರೈತರ ಬೃಹತ್ ಗುಂಪುಗಳಿಂದ ದಿಲ್ಲಿಯತ್ತ ಜಾಥಾ. ಅವರನ್ನು ತಡೆಯಲು ವಿವಿಧೆಡೆಗಳಲ್ಲಿ ಪೊಲೀಸರಿಂದ ಜಲಫಿರಂಗಿ ಪ್ರಯೋಗ, ಬಳಿಕ ಉತ್ತರ ದಿಲ್ಲಿಯ ನಿರಂಕಾರಿ ಮೈದಾನವನ್ನು ಪ್ರವೇಶಿಸಲು ಅವಕಾಶ ನೀಡಿದ ಪೊಲೀಸರು

ನ.27: ದಿಲ್ಲಿಯ ವಿವಿಧ ಗಡಿಗಳನ್ನು ತಲುಪಿದ ರೈತರಿಂದ ನಗರಕ್ಕೆ ಮುತ್ತಿಗೆ, ವಸತಿ ಶಿಬಿರಗಳ ಸ್ಥಾಪನೆ

ನ.28: ಗೃಹಸಚಿವ ಅಮಿತ್ ಶಾ ಅವರಿಂದ ದಿಲ್ಲಿಯ ಗಡಿಗಳನ್ನು ತೆರವುಗೊಳಿಸಬೇಕು ಮತ್ತು ಬುರಾರಿಯಲ್ಲಿನ ನಿಗದಿತ ಪ್ರತಿಭಟನಾ ಸ್ಥಳಕ್ಕೆ ತೆರಳಬೇಕು ಎಂಬ ಷರತ್ತಿನೊಂದಿಗೆ ಮಾತುಕತೆಗಳ ಕೊಡುಗೆ ತಿರಸ್ಕರಿಸಿದ ರೈತರಿಂದ ತಮಗೆ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ನೀಡುವಂತೆ ಆಗ್ರಹ

ನ.29: ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಭರವಸೆಗಳನ್ನು ನೀಡುತ್ತಿದ್ದು, ಆದರೆ ಭರವಸೆಗಳನ್ನು ಈಡೇರಿಸಿದ್ದು ತನ್ನ ಸರಕಾರ ಎಂದು ಮನ್ ಕಿ ಬಾತ್ ಭಾಷಣದಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ

ಡಿ.3-8: ಸರಕಾರ ಮತ್ತು ರೈತರ ನಡುವೆ ಹಲವಾರು ಸುತ್ತುಗಳ ವಿಫಲ ಮಾತುಕತೆ, ರೈತರಿಂದ ಭಾರತ ಬಂದ್‌ಗೆ ಕರೆ

ಡಿ9: ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಗೆ ತಿದ್ದುಪಡಿ ತರುವ ಮೋದಿ ಸರಕಾರದ ಪ್ರಸ್ತಾವಕ್ಕೆ ರೈತ ನಾಯಕರ ತಿರಸ್ಕಾರ ಪ್ರತಿಭಟನೆಯನ್ನು ಇನ್ನಷ್ಟು ನೂತನ ತೀವ್ರಗೊಳಿಸುವುದಾಗಿ ಘೋಷಣೆ. ಕೃಷಿಕಾಯ್ದೆಗಳು ಬೃಹತ್ ಕಾರ್ಪೊರೇಟ್ ಪರ ಎಂದು ಆಪಾದಿಸಿ ರೈತ ಒಕ್ಕೂಟಗಳಿಂದ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು 
ಮುಕೇಶ ಅಂಬಾನಿ ಸೇವೆಗಳಿಗೆ ಬಹಿಷ್ಕಾರ

ಡಿ.11: ಕೃಷಿ ಕಾಯ್ದೆಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಭಾರತೀಯ ಕಿಸಾನ್ ಯೂನಿಯನ್

ಡಿ.13: ರೈತರ ಪ್ರತಿಭಟನೆಗಳ ಹಿಂದೆ ತುಣ್ಣೆ ತುಣ್ಣೆ ಗ್ಯಾಂಗ್ ಇದೆ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಆರೋಪ. ಸರಕಾರವು ಮಾತುಕತೆಗಳಿಗೆ ಮುಕ್ತವಾಗಿದೆ ಎಂದು ಹೇಳಿಕೆ

ಡಿ.16: ಬಿಕ್ಕಟ್ಟನ್ನು ಬಗೆಹರಿಸಲು ಸರಕಾರ ಮತ್ತು ರೈತ ಒಕ್ಕೂಟಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ತಾನು ರಚಿಸಬಹುದು ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯದಿಂದ ನೂತನ ಕಾಯೆಗಳನ್ನು ತಡೆಹಿಡಿಯುವಂತೆ ಕೇಂದ್ರಕ್ಕೆ ಸಲಹೆ

ಡಿ.30-ಜ.4,2021: ರೈತರು ಮತ್ತು ಸರಕಾರದ ನಡುವೆ ಹಲವಾರು ಸುತ್ತುಗಳ ಅಪೂರ್ಣ ಮಾತುಕತೆ

ಜ.2: ಗಣತಂತ್ರ ದಿನದಂದು ದಿಲ್ಲಿಯ ವರ್ತುಲ ರಸ್ತೆಯಲ್ಲಿ ಟ್ರ್ಯಾಕ್ಟರ್‌ ರಾಲಿ ನಡೆಸುವುದಾಗಿ ರೈತರ ಪ್ರಕಟನೆ

ಜ.4: ತಾನೆಂದೂ ಗುತ್ತಿಗೆ ಕೃಷಿಗೆ ಕೈಹಾಕುವುದಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿಕೆ

ಜ.11: ರೈತರ ಪ್ರತಿಭಟನೆಯನ್ನು ನಿರ್ವಹಿಸಿದ ರೀತಿಗಾಗಿ ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ತರಾಟೆ

ಜ.12: ಮೂರು ಕೃಷಿ ಕಾನೂನಗಳ ಅನುಷ್ಠಾನಕ್ಕೆ ಸರ್ವೋಚ್ಚ ನ್ಯಾಯಾಲಯದ ತಡೆ,ಎರಡು ತಿಂಗಳುಗಳ ಗಡುವಿನೊಳಗೆ ಕಾಯ್ದೆಗಳಲ್ಲಿ ಯಾವುದೇ ಬದಲಾವಣೆಗಳ ಮೌಲ್ಯಮಾಪನಕ್ಕೆ ನಾಲ್ವರು ಸದಸ್ಯರ ಸಮಿತಿ ರಚನೆ

ಜ.20: ಹೊಸ ಮಾತುಕತೆ ಸುತ್ತಿನಲ್ಲಿ ಸರಕಾರದಿಂದ ಒಂದೂವರೆ ವರ್ಷ ಕೃಷಿಕಾಯ್ದೆಗಳನ್ನು ಅಮಾನತುಗೊಳಿಸುವ ಮತ್ತು ಅವುಗಳ ಬಗ್ಗೆ ಚರ್ಚೆಗೆ ಜಂಟಿ ಸಮಿತಿಯ ರಚನೆಯ ಪ್ರಸ್ತಾವ. ಇದನ್ನು ತಿರಸ್ಕರಿಸಿದ ರೈತರಿಂದ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಬೇಕು ಎಂಬ ಬೇಡಿಕೆ ಮುಂದುವರಿಕೆ

ಜ.24: ತಮ್ಮ ಪ್ರತಿಭಟನೆಗೆ ಎರಡು ತಿಂಗಳು ತುಂಬಿದ ಸಂದರ್ಭದಲ್ಲಿ ದಿಲ್ಲಿಯಲ್ಲಿ ನಿಗದಿತ ಮಾರ್ಗಕ್ಕೆ ಸೀಮಿತವಾಗಿ ಟ್ರ್ಯಾಕ್ಟರ್ ಡ್ಯಾಲಿ ನಡೆಸಲು ರೈತರಿಗೆ ದಿಲ್ಲಿ ಪೊಲೀಸರ ಅನುಮತಿ

ಜ.26: ಹಲವಾರು ಪ್ರತಿಭಟನಾಕಾರರು ನಿಗದಿತವಲ್ಲದ ಮಾರ್ಗದಲ್ಲಿ ಸಾಗಿದಾಗ ಟ್ರ್ಯಾಕ್ಟರ್ ಕ್ಯಾಲಿಯಲ್ಲಿ ಕೋಲಾಹಲ, ಹಿಂಸಾಚಾರ, ಪೊಲೀಸರಿಂದ ಅಶ್ರುವಾಯು ಪ್ರಯೋಗ ಮತ್ತು ಲಾಠಿ ಪ್ರಹಾರ, ಕೆಂಪುಕೋಟೆಯಲ್ಲಿ ಕೆಲವು ಪ್ರತಿಭಟನಾಕಾರರಿಂದ ಸಿಖ್ ಧ್ವಜ ನಿರಾನ್ ಸಾಹಿಬ್” ಆರೋಹಣ, ಕೋಲಾಹಲದಲ್ಲಿ ಓರ್ವ ಪ್ರತಿಭಟನಾಕಾರನ ಮೃತ್ಯು. ಹಿಂಸಾಚಾರದಿಂದ ಅಂತರ ಕಾಯ್ದುಕೊಂಡ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್ ಕೆಎಂ) ದಿಂದ ಸಮಾಜ ವಿರೋಧಿ ಶಕ್ತಿಗಳು ಗ್ಯಾಲಿಯಲ್ಲಿ ನುಸುಳಿದ್ದವು ಎಂದು ಆರೋಪ

ಜ.27: ಗಣತಂತ್ರ ದಿನದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೈತನಾಯಕ ರಾಕೇಶ್ ಟಿಕಾಯತ್ ಮತ್ತು ಇತರರ ವಿರುದ್ದ ದಿಲ್ಲಿ ಪೊಲೀಸರಿಂದ 22 ಎಫ್ ಐಆರ್‌ಗಳು ದಾಖಲು

ಜ.28: ಫೆ.1ರಂದು ಸಂಸತ್ತಿಗೆ ಜಾಥಾದ ತನ್ನ ಕರೆಯನ್ನು ವಾಪಸ್ ಪಡೆದ ಎಸ್‌ಎಂ, ಪ್ರತಿಭಟನೆಯನ್ನು ಅಂತ್ಯಗೊಳಿಸಿದ ಎರಡು ರೈತ ಸಂಘಟನೆಗಳಿಂದ ಮುಷ್ಕರದಿಂದ ದೂರವುಳಿಯಲು ನಿರ್ಧಾರ, ನೆರೆಯ ಉತ್ತರ ಪ್ರದೇಶದ ಘಾಝಿಯಾಬಾದ್ ಆಡಳಿತವು ರಾತ್ರಿಯೊಳಗೆ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸುವಂತೆ ಆದೇಶಿಸಿದ ಬಳಿಕ ದಿಲ್ಲಿಯ ಗಾಝಿಪುರ ಗಡಿಯಲ್ಲಿ ಹಚ್ಚಿದ ಉದಿಗಳ ಆದೇಶಕ್ಕೆ ಮಣಿಯಲು ಟೆಕಾಯತ್ ಮತ್ತು ಅವರ ಬೆಂಬಲಿಗರ ನಿರಾಕರಣೆ

ಫೆ.4: ರೈತರ ಪರವಾಗಿ ಮಾತನಾಡಿದ ಪಾಪ್ ತಾರೆ ರಿಹಾನ್ನಾಪರಿಸರ ಕಾರ್ಯಕರ್ತೆ ಗ್ರೆಟಾ ಥನ್ ಬರ್ಗ್,ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂಬಂಧಿ ನ್ಯಾಯವಾದಿ-ಲೇಖಕಿ ಮೀನಾ

ಫೆ.5: ಥನ್‌ಬರ್ಗ್ ಶೇರ್ ಮಾಡಿಕೊಂಡಿದ್ದ ಟೂಲ್‌ಕಿಟ್‌ನ ಸೃಷ್ಟಿಕರ್ತರ ವಿರುದ್ಧ ದೇಶದ್ರೋಹ, ಕ್ರಿಮಿನಲ್ ಒಳಸಂಚು ಮತ್ತು ದ್ವೇಷವನ್ನು ಉತ್ತೇಜಿಸಿದ ಆರೋಪದಲ್ಲಿ ದಿಲ್ಲಿ ಪೊಲೀಸ್‌ನ ಸೈಬರ್ ಅಪರಾಧಗಳ ಘಟಕದಿಂದ ಎಫ್‌ಐಆರ್‌ ದಾಖಲು

ಫೆ.9: ದಿಲ್ಲಿ ಪೊಲೀಸ್ ವಿಶೇಷ ಘಟಕದಿಂದ ಗಣತಂತ್ರ ದಿನದ ಹಿಂಸಾಚಾರ ಪ್ರಕರಣದಲ್ಲಿಯ ಆರೋಪಿ ಪಂಜಾಬ್‌ನ ನಟ-ಸಾಮಾಜಿಕ ಕಾರ್ಯಕರ್ತ ದೀಪ ಸಿಧು ಬಂಧನ

ಫೆ.14: ಫನ್‌ಬರ್ಗ್ ಶೇರ್ ಮಾಡಿಕೊಂಡಿದ್ದ ಟೂಲ್‌ಕಿಟ್‌ನ್ನು ಎಡಿಟ್ ಮಾಡಿದ್ದ ಆರೋಪದಲ್ಲಿ ದಿಲ್ಲಿ ಪೊಲೀಸರಿಂದ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನ

ಮಾ.5: ರೈತರು ಮತ್ತು ಪಂಜಾಬ್‌ನ ಹಿತಾಸಕ್ತಿಯಿಂದ ಬೇಷರತ್ತಾಗಿ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವಂತೆ ಕೋರಿ ಮತ್ತು ಕನಿಷ್ಠ ಬೆಂಬಲ ಬೆಲೆ ಆಧಾರಿತ ಆಹಾರ ಧಾನ್ಯಗಳ ಸರಕಾರಿ ಖರೀದಿಯ ಹಾಲಿ ವ್ಯವಸ್ಥೆಯನ್ನು ಮುಂದುವರಿಸಲು ಪಂಚಾಬ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಮಾ.6: ದಿಲ್ಲಿ ಗಡಿಗಳಲ್ಲಿ ರೈತರ ಪ್ರತಿಭಟನೆಗಳಿಗೆ ನೂರು ದಿನ

ಎ.15: ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ಪುನರಾರಂಭಿಸುವಂತೆ ಆಗ್ರಹಿಸಿ ಹರ್ಯಾಣ ಉಪ ಮುಖ್ಯಮಂತ್ರಿ ದುಷ್ಯಂತ ಚೌಟಾಲಾ ಅವರಿಂದ ಪ್ರಧಾನಿಗೆ ಪತ್ರ

ಮೇ 27:ರೈತರ ಪ್ರತಿಭಟನೆಗೆ ಆರು ತಿಂಗಳು, ಕರಾಳ ದಿನಾಚರಣೆ

ಜೂ.5: ಕೃಷಿ ಕಾನೂನುಗಳ ಪ್ರಕಟನೆಯ ಮೊದಲ ವರ್ಷದ ಅಂಗವಾಗಿ ರೈತರಿಂದ ಸಂಪೂರ್ಣ ಕ್ರಾಂತಿಕಾರಿ ದಿವಸ್ ಆಚರಣೆ

ಜುಲೈ: ರೈತರಿಂದ ಸಂಸತ್ ಭವನಕ್ಕೆ ಸಮೀಪ 'ಕಿಸಾನ್‌ ಸಂಸದ್' ಹೆಸರಿನಲ್ಲಿ ಸಮಾನಾಂತರ 'ಮಳೆಗಾಲದ ಅಧಿವೇಶನ ಆರಂಭ

ಆ.7: ಸಂಸತ್ ಭವನದಲ್ಲಿ ಸಭೆ ಸೇರಿದ 14 ಪ್ರತಿಪಕ್ಷಗಳ ನಾಯಕರಿಂದ ದಿಲ್ಲಿಯ ಜಂತರ್ ಮಂತರ್ ನ ಕಿಸಾನ್ ಸಂಸದ್‌ಗೆ ಭೇಟಿ ನೀಡಲು ನಿರ್ಧಾರ

ಆ.28: ಕರ್ನಾಲ್‌ನಲ್ಲಿ ಮುಖ್ಯಮಂತ್ರಿ ಎಂ.ಎಲ್ ಖಟ್ಟರ್‌ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಸಭೆಯಲ್ಲಿ ರೈತರ ಮೇಲೆ ಹರ್ಯಾಣ ಪೊಲೀಸರಿಂದ ಹಿಂಸಾತ್ಮಕ ದಾಳಿ ಲಾಠಿ ಪ್ರಹಾರದಿಂದ ಹಲವರಿಗೆ ಗಾಯ. ಭದ್ರತಾ ತಡೆಯನ್ನು ಉಲ್ಲಂಘಿಸುವ ರೈತರ ತಲೆ ಒಡೆಯಿರಿ ಎಂದು ಐಎಎಸ್ ಅಧಿಕಾರಿ ಆಯುಷ ಸಿನ್ಹಾ ಪೊಲೀಸರಿಗೆ ಆದೇಶಿಸಿದ್ದ ದೃಶ್ಯ ವೀಡಿಯೊದಲ್ಲಿ

ಸೆ.5: ಮುಝಫರ್‌ನಗರದಲ್ಲಿ ರೈತ ನಾಯಕ ಟಿಕಾಯತ್ ಅವರ ತವರೂರಿನಲ್ಲಿ ಕಿಸಾನ ಮಹಾಪಂಚಾಯತ್ ನಡೆಸಿದ ರೈತರು

ಸೆ.17: ಕೃಷಿಕಾಯ್ದೆಗಳ ಅಂಗೀಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳಿಂದ ಭಾರತ

ಅ.3: ಉ.ಪ್ರದೇಶದ ಲಖಿಂಪುರ ಬೇರಿಯಲ್ಲಿ ಹಿಂಸಾಚಾರ, ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವು

ಅ.9: ಲಖಿಂಪುರ ಸೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಹಾಯಕ ಗೃಹಸಚಿವ ಅಜಯ್‌ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಬಂಧನ |

ಅ.22: ಪ್ರತಿಭಟನಾಕಾರರು ಸಾರ್ವಜನಿಕ ರಸ್ತೆಗಳನ್ನು ಅನಿರ್ದಿಷ್ಟವಾಗಿ ಬಂದ್ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದ ಸರ್ವೋಚ್ಚ ನ್ಯಾಯಾಲಯ

ಅ.29: ರೈತರ ಪ್ರತಿಭಟನೆ ಮುಂದುವರಿದಿದ್ದರೂ ದಿಲ್ಲಿಯ ವಿವಿಧ ಗಡಿ ಗಳಲ್ಲಿ ಬ್ಯಾರಿಕೇಡ್‌ಗಳು ಮತ್ತು ಇತರ ತಡೆಗಳನ್ನು ತೆಗೆಯಲು ಆರಂಭಿಸಿದ ದಿಲ್ಲಿ ಪೊಲೀಸರು

ನ.19: ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳುವುದಾಗಿ ಪ್ರಧಾನಿ ಮೋದಿ ಘೋಷಣೆ.

Read These Next

ತಿಹಾರ್ ಜೈಲಿನಿಂದ ಹೊರಬಂದ ಕೇಜ್ರಿವಾಲ್ ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸಬೇಕಿದೆ: ದಿಲ್ಲಿ ಸಿಎಂ

ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಬಳಿಕ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು ಶುಕ್ರವಾರ ತಿಹಾರ್ ಜೈಲಿನಿಂದ ...

ಕೇಜ್ರವಾಲ್‌ಗೆ ಜೂ.1ರವರೆಗೆ ಮಧ್ಯಂತರ ಜಾಮೀನು; ಮುಖ್ಯಮಂತ್ರಿ ಕಚೇರಿಗೆ ಹೋಗಬಾರದು: ಸುಪ್ರೀಂ ಕೋರ್ಟ್

ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ...

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಭಟ್ಕಳ ತಾಲೂಕು

ನೀರಿನ ಸಮಸ್ಯೆಯಿಂದಾಗಿ ಭಟ್ಕಳದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿಗಾಗಿ ಸರತಿ ...

ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ

“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...