ಕರ್ನಾಟಕದ ಐವರು ಪರಿಶಿಷ್ಟ ಯುವತಿಯರ ಸಾಹಸದ ಚಾರಣ..

Source: SO News | By Laxmi Tanaya | Published on 22nd October 2021, 9:20 PM | National News | Special Report |

ಕಾರವಾರ : ರಾಜ್ಯದ ಐವರು ಯುವತಿಯರು ಹಿಮಾಲಯದ ಪರ್ವತ ಏರಿ, ಸಾವಿರಾರು ಕಿ.ಮೀ ಸೈಕ್ಲಿಂಗ್ ಮಾಡಿ ಬಳಿಕ ಅರಬ್ಬಿ ಸಮುದ್ರದಲ್ಲಿ ಕಯಾಕಿಂಗ್ ನಡೆಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮೈಸೂರಿನ ಬಿಂದು ಎನ್ (25)ನಾಯಕತ್ವದಲ್ಲಿ, ಶಿವಮೊಗ್ಗದ ಐಶ್ವರ್ಯಾ ವಿ(19), ಧನಲಕ್ಷ್ಮೀ(22), ಬೆಂಗಳೂರಿನ ಆಶಾ ವೈ(20),  ಕೊಡಗಿನ ಪುಷ್ಪಾ ಎಸ್ ಎಂ(23) ಸರ್ಕಾರದ ಎಸ್‌ಸಿಪಿ,ಟಿಎಸ್‌ಪಿ ಅನುದಾನದಲ್ಲಿ  ಇಂಡಿಯನ್ ಮೌಂಟೇನಿಯರಿಂಗ್ ಫೌಂಡೇಶನ್, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಸಹಕಾರದೊಂದಿಗೆ  `ಶಿಖರದಿಂದ ಸಾಗರದವರೆಗೆ' ಎಂಬ ಸಾಹಸಿ ಅಭಿಯಾನದಲ್ಲಿ ಸಾಧನೆ ಮಾಡಿದವರಾಗಿದ್ದಾರೆ.

ಕಾರವಾರಕ್ಕೆ ಆಗಮಿಸಿದ ಅವರನ್ನ ಜಿಲ್ಲಾಡಳಿತದಿಂದ ಹಾರ್ದಿಕವಾಗಿ ಬರಮಾಡಿಕೊಳ್ಳಲಾಯಿತು. ಶಿಖರದಿಂದ ಸಾಗರದವರೆಗೆ ಚಾರಣ ಸಾಹಸಕ್ಕೆ ಐವರು ಮುಂದಾಗಿದ್ದಾರೆ. ಅಗಸ್ಟ್ 22ಕ್ಕೆ  ಕಾಶ್ಮೀರದ 5425 ಮೀಟರ್ ಎತ್ತರದ ಕೊಲೈಪಿಕ್ ಎಂಬ  ಹಿಮಪರ್ವತವನ್ನು ಏರಿ ಸಾಹಸ ಮಾಡಿದ್ದಾರೆ. ಸಪ್ಟೆಂಬರ್ ನಾಲ್ಕರಂದು ಲಡಾಕ್ ನಿಂದ ಸೈಕಲ್ ಪ್ರಯಾಣ ಆರಂಭಿಸಿ ಕಾರವಾರದವರೆಗೆ 3350 ಕಿಲೋಮೀಟರ್ ಕ್ರಮಿಸಿ ಬಂದಿದ್ದಾರೆ. 

ಇದೀಗ ಅರಬ್ಬಿಸಮುದ್ರದಲ್ಲಿ ಕಾರವಾರದಿಂದ ಮಂಗಳೂರಿನ ಉಳ್ಳಾಲವರೆಗೆ ಕಯಾಕಿಂಗ್ ಮಾಡಲು ಮುಂದಾಗಿದ್ದಾರೆ. 

'ತಾವು  ಸಾಹಸಯಾನ ಕೈಗೊಳ್ಳುವುದಕ್ಕೆ ಆರಂಭದಲ್ಲಿ ಮನೆಯವರು ಒಪ್ಪಿರಲಿಲ್ಲ.  ಹಿಮದಿಂದಾವೃತವಾದ  ಪರ್ವತಾರೋಹಣದಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿ ಸಮಸ್ಯೆಯಾಗಿತ್ತು.  ಆದರೂ ಛಲ ಬಿಡದೆ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದೇವೆ.  ಒಂದೊಂದು ದಿನ ಸುಮಾರು 200 ಕಿಲೋಮೀಟರ್ ಸೈಕ್ಲಿಂಗ್ ಮಾಡಿದ್ದೇವೆ.  ತುಂಬಾ ಸುಸ್ತಾದರೂ ಕೂಡ ನಾವೇ ಟೆಂಟ್ ಹಾಕಿ, ನಾವೇ ಅಡುಗೆ ಮಾಡಿ ತಿನ್ನಬೇಕಾಗಿತ್ತು. ಆದರೂ ಈ ಸಾಹಸದ  ಪ್ರಯಾಣ ನಮಗೆ ಅದ್ಭುತ ಅನುಭವ ನೀಡಿದೆ ಎಂದು ಯುವತಿಯರು ತಮ್ಮ ಅನುಭವ ಹೇಳಿದ್ದಾರೆ.

 ಕಾರವಾರಕ್ಕೆ ಬಂದ ಯುವತಿಯರನ್ನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಪ್ರಿಯಾಂಗ  ಸೈಕ್ಲಿಸ್ಟ್ಗಳಿಗೆ ಹಾರ ಹಾಕಿ ಸ್ವಾಗತಿಸಿದರು. ಅಲ್ಲದೇ ಯುವತಿಯರ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. 

Read These Next

ಭಟ್ಕಳದಲ್ಲಿ ಹಾಳುಮೂಳು ಹೆದ್ದಾರಿ ಕಾಮಗಾರಿ; ಸಂಪರ್ಕ ರಸ್ತೆಯೂ ಇಲ್ಲ, ಸರ್ವೀಸ್ ರಸ್ತೆಯೂ ಇಲ್ಲ ! ಇದು ಐಆರ್‍ಬಿ ಆಘಾತ ; ನಿಲ್ಲುವ ಹಾಗಿಲ್ಲ ಅಪಘಾತ

ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭವಾಗಿ 8 ವರ್ಷಗಳೇ ಕಳೆದಿವೆ. ಹೆದ್ದಾರಿ ಕಾಮಗಾರಿ ಮುಗಿಯುವ ಮುನ್ನವೇ ...

ಪ್ರತಿಭಟನೆಗಳು, ವಿಫಲ ಮಾತುಕತೆಗಳು, ಹಿಂಸಾಚಾರ, ಸಾವುಗಳ ನಡುವೆ ಕೃಷಿ ಕಾಯ್ದೆಗಳು ಮತ್ತು ರೈತರ ಆಂದೋಲನ ಸಾಗಿ ಬಂದ ದಾರಿ.....

2020, ಜೂ.5: ಮೋದಿ ಸರಕಾರದಿಂದ ಬೆಲೆ ಭರವಸೆ ಕುರಿತು ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ;ರೈತರ ...

ದಸರಾ ರಜೆಗೆ ಮುರುಡೇಶ್ವರವನ್ನು ತುಂಬಿಕೊಂಡ ಪ್ರವಾಸಿಗರು; ಕಡಲತಡಿಯಲ್ಲಿ ಜನವೋ ಜನ; ವಾಹನ ದಟ್ಟಣೆ ನಿಭಾಯಿಸಲು ಪೊಲೀಸ್ ಸಾಹಸ

ಸರಣಿ ರಜೆಯಿಂದಾಗಿ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರ ಪ್ರವಾಸಿಗರಿಂದ ತುಂಬಿ ಹೋಗಿದೆ. ಕಡಲ ತಡಿಯಲ್ಲಿ ಕಣ್ಣು ...

ಭಟ್ಕಳ: 100 ಬೆಡ್ಡಿನ ಸರಕಾರಿ ಆಸ್ಪತ್ರೆಯಲ್ಲಿ ಬೆಡ್ಡು ಇದೆ ಕೋಣೆ ಇಲ್ಲ! ಮೀಟಿಂಗ್ ಹಾಲ್‍ನಲ್ಲಿ ರೋಗಿಗಳು ; ಕಟ್ಟಡಕ್ಕಾಗಿ ದಾನಿಗಳತ್ತ ಮುಖ

ತಾಲೂಕಿನ ಸರಕಾರಿ ಆಸ್ಪತ್ರೆ ಸುಧಾರಣೆ ಕಾಣುತ್ತಿದ್ದಂತೆಯೇ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಕ್ಕಪಕ್ಕದ ...