94 ಸಿ ಅರ್ಜಿದಾರರ ಜಮೀನು ಮಂಜೂರಾತಿಗೆ ಅರಣ್ಯಾಧಿಕಾರಿ ತಡೆ!

Source: SO News | By Laxmi Tanaya | Published on 25th November 2023, 11:08 PM | Coastal News | Don't Miss |

ಉಡುಪಿ: ಸರ್ಕಾರಿ ಜಾಗದಲ್ಲಿ ಸುಮಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿರುವ ಬಡ ಕುಟುಂಬಗಳು ತಮ್ಮ ಜಾಗದ ಹಕ್ಕುಪತ್ರದ ನಿರೀಕ್ಷೆಯಲ್ಲಿದ್ದಾರೆ. 

ಸರ್ಕಾರಿ ಜಮೀನು ಮಂಜೂರಾತಿಗೆ ಅರಣ್ಯಾಧಿಕಾರಿಗಳ ಆದೇಶ ಅಡ್ಡಿಯಾಗಿದ್ದು, ಇದರಿಂದ 94ಸಿ ಅರ್ಜಿದಾರರಿಗೆ ತೊಂದರೆ ಆಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಸರ್ವೇನಂ. 307 ರಲ್ಲಿ94 ಸಿ ಯೋಜನೆಯ ಬಡ ಅರ್ಜಿದಾರರಿಗೆ ಜಮೀನು ಮಂಜೂರಾತಿಗೊಳಿಸದಂತೆ ಆದೇಶ ನೀಡಿರುವ ಕುಂದಾಪುರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಯ ಆದೇಶದ ವಿರುದ್ಧ ಮಾಜಿ ಸಚಿವ, ಶಾಸಕ ವಿ. ಸುನಿಲಕುಮಾರ ಅವರು ಡಿ.ಎಫ್.ಒ. ಗಣಪತಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲಾ ಕೆ.ಡಿ.ಪಿ ಸಭೆಯಲ್ಲಿ ನಡೆಯಿತು.

ಉಡುಪಿಯಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುನಿಲ್ ಕುಮಾರ್, ಅರಣ್ಯಾಧಿಕಾರಿಗಳೇ ನೀವು ತಪ್ಪು ಮಾಹಿತಿ ಆಧರಿಸಿ ಆದೇಶ ನೀಡುವ ಅಗತ್ಯವಿಲ್ಲ. ಸರಕಾರದ ಕಂದಾಯ ಇಲಾಖೆಯ ಜಂಟಿಕಾರ್ಯದರ್ಶಿಯವರು ಈ ಹಿಂದೆಹೊರಡಿಸಿದ್ದ ಆದೇಶಕ್ಕೆ ನಿಮ್ಮ ಪ್ರಕಾರ ಬೆಲೆ ಇಲ್ಲವೆ? ಎಂದು ಅರಣ್ಯಾಧಿಕಾರಿಯನ್ನು ಪ್ರಶ್ನಿಸಿ, ಬಡವರ ವಿರೋಧಿಯಾಗಿ ನೀವು ನಡೆದುಕೊಳ್ಳುತ್ತಿದ್ದಿರಾ? ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿ ವಾಸ್ತವ್ಯ ಹೂಡಿದವರಿಗೆ ಹಕ್ಕುಪತ್ರವಿಲ್ಲದೆ ಸರ್ಕಾರದ ಸವಲತ್ತುಗಳು ಸಿಗುತಿಲ್ಲ. ಬಡವರು 94ಸಿ ಯೋಜನೆಯಿಂದ ಸರಕಾರದ ಸೌಲಭ್ಯ ಪಡೆಯುವಂತಾಗಬೇಕೆಂದು ಸರಕಾರಯೋಜನೆ ಜಾರಿಗೆ ತಂದರೆ ಅದಕ್ಕೆ ಅರಣ್ಯಾಧಿಕಾರಿಗಳಾದ ನೀವು ಕಾನೂನಿನ ನೆಪವೊಡ್ಡಿ ಸರ್ಕಾರದ ಆದೇಶದ ವಿರುದ್ಧವಾಗಿ ತಹಶೀಲ್ದಾರರಿಗೆ ನೀವು ಆದೇಶ ನೀಡುವಮುಖಾಂತರ ಜಮೀನು ಮಂಜೂರಾತಿಗೆ ತಡೆ ಆಗುತ್ತಿದ್ದೀರಿ. ನಿಮ್ಮ ಆದೇಶದಿಂದ ಜಿಲ್ಲೆಯ ಸಹಸ್ರಾರು ಮಂದಿಯ ಜಮೀನು ಮಂಜೂರಾತಿಗೆ ತೊಂದರೆಯಾಗಿದ್ದು ಬಡವರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಯ ಆದೇಶದ ವಿರುದ್ಧಕೆಂಡಾಮಂಡಲರಾದರು.

ರಾಜ್ಯದ 9.94 ಲಕ್ಷ ಹೆಕ್ಟೇರ್ ಪರಿಭಾವಿತ ಅರಣ್ಯದಲ್ಲಿ 6.64 ಲಕ್ಷ ಹೆಕ್ಟೇರ್ ಭಾಗವನ್ನು ಹೊರಗಿಟ್ಟು 3,30,186.93 ಹೆ. ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಆಗಿಸಿ ಸರಕಾರ 2022 ಮೇ ತಿಂಗಳಲ್ಲಿ ಅಧಿಸೂಚಿಸಿದೆ.ಪರಿಭಾವಿತ ಅರಣ್ಯವೆಂದು ಪರಿಗಣಿಸಿರುವ ಜಮೀನುಗಳನ್ನು ಹೊರತುಪಡಿಸಿ ಇನ್ನುಳಿದ ಜಮೀನುಗಳನ್ನು ಅವುಗಳ ಹಿಂದಿನ ಸ್ಥಿತಿಯಲ್ಲಿಯೆ ಮುಂದುವರೆಸಲಾಗುತ್ತದೆ. ಅರಣ್ಯಾಧಿಕಾರಿ ಅರ್ಜಿದಾರರಿಗೆ ಮಂಜೂರಾತಿ ನೀಡುವಲ್ಲಿನ ಜಾಗ ಸರ್ವೊಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಪಟ್ಟಿಯಲ್ಲಿ ಸೇರಿಲ್ಲ. ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿ ಸೇರಿರುವ ಅರಣ್ಯ ಜಮೀನು ಮಂಜೂರಾತಿ ಅವಕಾಶವಿಲ್ಲ ಎಂದು ಆದೇಶ ನೀಡಿದ್ದಾರೆ. ಈ ಜಮೀನನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ಕೈ ಬಿಡುವ ಬಗ್ಗೆ ಸರ್ವೊಚ್ಚ ನ್ಯಾಯಲಯದಿಂದ ಅಂತಿಮ ಆದೇಶ ಆಗುವವರೆಗೂ ಅರಣ್ಯೇತರ ಚಟುವಟಿಕೆಗೆ ಜಮೀನು ಮಂಜೂರಾತಿ ಅವಕಾಶವಿಲ್ಲ ಎಂದಿರುವುದರಲ್ಲಿ ಅರ್ಥವಿಲ್ಲ. ಅರಣ್ಯಾಧಿಕಾರಿಯ ಈಆದೇಶವನ್ನು ವಾಪಸ್ಪಡೆಯಬೇಕು ಹಾಗೂ ಈ ಕಾರಣಕ್ಕಾಗಿ ಯಾವುದೇ 94ಸಿ ಅರ್ಜಿಯನ್ನು ತಿರಸ್ಕರಿಸದಂತೆ ಒತ್ತಾಯಿಸಿದರಲ್ಲದೆ ಅಧಿಕಾರಿಗಳಿಂದ ನಿರ್ಣಯವನ್ನು ಬರೆಸಿದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...