ಭಟ್ಕಳ ತಾಲೂಕಾ ಆಡಳಿತ ವತಿಯಿಂದ ನಡೆದ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ

Source: so news | By MV Bhatkal | Published on 26th January 2023, 12:41 AM | Coastal News | Don't Miss |

ಭಟ್ಕಳ:ತಾಲೂಕಾ ಆಡಳಿತ, ಭಾರತ ಚುನಾವಣಾ ಆಯೋಗ ಇವುಗಳ ಸಂಯುಕ್ತ ಆಶ್ರಯದಲ್ಲಿ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2023ನೇದನ್ನು ಇಲ್ಲಿನ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. 
ಕಾರ್ಯಕ್ರಮವನ್ನ ಉದ್ಘಾಟಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಮತದಾನ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಕೂಡಾ ಸಂವಿಧಾನ ನೀಡಿದ ಹಕ್ಕಾಗಿದ್ದು ಪ್ರತಿಯೋರ್ವರೂ ಕೂಡಾ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಕರೆ ನೀಡಿದರು. 
ಯುವ ಪೀಳಿಗೆಯು ರಾಷ್ಟ್ರದ ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗಿದ್ದು ಎಲ್ಲರೂ ಕೂಡಾ ಮತದಾನದ ಮಹತ್ವವನ್ನು ತಿಳಿದುಕೊಳ್ಳಬೇಕು. ಮತದಾನ ಒಂದು ಪವಿತ್ರ ಕಾರ್ಯವಾಗಿದ್ದು ಇಲ್ಲಿ ಯಾವುದೇ ಬೇದಭಾವವಿಲ್ಲ, ಪ್ರತಿಯೋರ್ವರಿಗೂ ಕೂಡಾ ಒಂದೇ ಮತದ ಹಕ್ಕಿದ್ದು ಯಾವುದೇ ಹುದ್ದೆಯಲ್ಲಿರುವ ವ್ಯಕ್ತಿಗೂ  ಜನ ಸಾಮಾನ್ಯನಿಗೂ ಕೂಡಾ ಒಂದೇ ರೀತಿಯ ಹಕ್ಕು ಇದೆ. ನಮ್ಮ ದೇಶದಲ್ಲಿ ಇಂದು ಮತದಾನವಾಗುತ್ತಿರುವುದನ್ನು ನೋಡಿದಾಗ ಸರಾಸರಿ ಶೇ.60ರಷ್ಟು ಮತದಾನವಾಗುತ್ತಿದೆ. ಇದು ಸರಿಯಲ್ಲಿ ಪ್ರತಿಯೋರ್ವ ಅರ್ಹ ಮತದಾರರೂ ಮತದಾನ ಮೂಡುವ ಮೂಲಕ ಉತ್ತಮರು  ಆಡಳಿತ ನೋಡಿಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಮಾತನಾಡಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ 13 ವರ್ಷಗಳಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು ಮತದಾರರು ಜಾಗೃತರಾಗ ಬೇಕು ಎನ್ನುವುದೇ ಇದರ ಉದ್ದೇಶವಾಗಿದೆ ಎಂದರು. 
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ ಬಾಳನಾಯ್ಕ ಮತಚಲಾವಣೆ ಎಲ್ಲರ ಕರ್ತವ್ಯವಾಗಿದ್ದು ಮತಗಟ್ಟೆಗಳಲ್ಲಿ ಶಿಸ್ತುಪಾಲನೆ ಮಾಡುವುದು ಕೂಡಾ ಮತದಾರರ ಕರ್ತವ್ಯವಾಗಿದೆ. ಪ್ರತಿ ಮತದಾನವೂ ಕೂಡಾ ಬೆಳಿಗ್ಗೆಯಿಂದಲೇ ಆರಂಭವಾಗುತ್ತಿದ್ದು ಪ್ರತಿಯೋರ್ವರೂ ಕೂಡಾ ತಮ್ಮ ತಮ್ಮ ಸಮಯದಲ್ಲಿ ಹೋಗಿ ಮತದಾನ ಮಾಡಿ ಬರಬೇಕು. ಸಂಜೆಯ ತನಕ ಮತದಾನಕ್ಕಾಗಿ ಕಾಯುವುದರಿಂದ ಒಮ್ಮೆಲೇ ಮತಗಟ್ಟೆಯಲ್ಲಿ ನೂಕು ನುಗ್ಗಲು ಉಂಟಾಗುವ ಸಾಧ್ಯತೆ ಇರುವುದರಿಂದ ಸೂಕ್ತ ಸಮಯಕ್ಕೆ ಹೋಗಿ ಮತದಾನ ಮಾಡುವಂತೆ ಕರೆ ನೀಡಿದರು. 
ಇನ್ನೋರ್ವ ಮುಖ್ಯ ಅತಿಥಿ ವಕೀಲರ ಸಂಘದ ಆಧ್ಯಕ್ಷ ಪಾಂಡು ನಾಯ್ಕ ಮಾತನಾಡಿದರು. ಉಪನ್ಯಾಸಕ ಶಿವಾನಂದ ಭಟ್ಟ ಮತದಾನ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಶೋಕ ಭಟ್ಟ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ನಗರ ಠಾಣೆ ಸಬ್ ಇನ್ಸಪೆಕ್ಟರ್ ಸುಮಾ ಬಿ., ಮುಂತಾದವರು ಉಪಸ್ಥಿತರಿದ್ದರು.

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...