ಜಗ ಮೆಚ್ಚಿದ ಅಟಲ್ ಬಿಹಾರಿ ವಾಜಪೇಯಿ 92ನೇ ಜನ್ಮದಿನ -ಭಾರತದದ್ಯಾಂತ "ಉತ್ತಮ ಆಡಳಿತ ದಿವಸ" ಸಂಭ್ರಮ

Source: ಬಿ. ಕೆ. ಗಣೇಶ್ ರೈ | By Arshad Koppa | Published on 25th December 2016, 10:20 AM | National News | Special Report | Guest Editorial |

ಭಾರತ ದೇಶ ಕಂಡ ದೀಮಂತ ನಾಯಕ, ಪೂರ್ವ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಡಿಸೆಂಬರ್ 25 ಈ ದಿನವನ್ನು "ಉತ್ತಮ ಆಡಳಿತ ದಿವಸ" "Good Governance Day"  ಎಂದು ಭಾರತಾದ್ಯಂತ 2014 ರಿಂದ ಆಚರಿಸಲಾಗುತ್ತಿದೆ.

ವಿಶ್ವದ ಅತ್ಯುತ್ತಮ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಸಕ್ರಿಯಾ ರಾಜಕಾರಣಿ, ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ, ನುಡಿದಂತೆ ನಡೆಯುವ ಮಾನವತಾವಾದಿಯ ಜನ್ಮ ದಿನದ ಈ ಶುಭ ಸಂದರ್ಭದಲ್ಲಿ ಅವರ ಹೆಜ್ಜೆ ಗುರುತನ್ನು ದಾಖಲಿಸುವ ವಿಶೇಷ ಲೇಖನ...

ಸನ್ಮಾನ್ಯ ವಾಜಪೇಯಿಯವರು 1924 ಡಿಸೆಂಬರ್ 25 ರಂದು ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ 'ಶಿಂದೆ ಕಿ ಚವ್ವಾಣಿ' ಗ್ರಾಮದಲ್ಲಿ ಶ್ರೀ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಶ್ರೀಮತಿ ಕೃಷ್ಣದೇವಿ ದಂಪತಿಗಳ ಮಗನಾಗಿ ಜನಿಸಿದರು. ತಂದೆಯವರು ಶಾಲಾ ಮಾಸ್ತರ್ ಹಾಗೂ ಕವಿಯಾಗಿದ್ದರು. ಪ್ರೌಢ ವಿದ್ಯಾಭ್ಯಾಸದ ನಂತರ ಗ್ವಾಲಿಯರ್‍ನ ವಿಕ್ಟೊರಿಯಾ ಕಾಲೇಜ್ (ಇವಾಗ ಲಕ್ಷ್ಮೀಬಾಯಿ ಕಾಲೇಜು) ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪದವಿಯನ್ನು ಪಡೆದರು. ಖಾನ್ಪುರ್ ದಯಾನಂದ್ ಅಂಗ್ಲೊ ವೇದಿಕ್ ಕಾಲೇಜಿನಲ್ಲಿ ಎಂ.ಎ. ರಾಜನೀತಿ ಶಾಸ್ತ್ರ ಸ್ನಾತಕೋತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಗಳಿಸಿದರು.

 

ಆರ್ಯ ಸಮಾಜದ ಘಟಕದ ಆಶ್ರಮದಲ್ಲಿ ಆರ್ಯಕುಮಾರ ಸಭಾದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ 1944 ರಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡರು. 1939ರಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸ್ವಯಂ ಸೇವಕನಾಗಿ ಪಡೆದ ಅನುಭವ, ಅಧಿಕಾರಿಗಳ ತರಭೇತಿಯನ್ನು ಪಡೆದು 1940-44ರ ಅವಧಿಯಲ್ಲಿ ಪೂರ್ಣ ಅವಧಿಯ ಕಾರ್ಯಕರ್ತರಾದರು. ನಂತರ ವಿಸ್ತಾರಕ್ (ಪ್ರಾಚಾರಕ) ರಾಗಿ ಬಡ್ತಿ ಪಡೆದರು. ಜೊತೆಯಲ್ಲಿ ದೀನ್ ದಯಾಳ್ ಉಪಾದ್ಯಾಯರವರ ಹಿಂದಿ ಮಾಸಿಕ 'ಪಾಂಚಜನ್ಯ' ಹಿಂದಿ ವಾರಪತ್ರಿಕೆ 'ಸ್ವದೇಶ್' ವೀರ ಅರ್ಜುನ್ ದಿನಪತ್ರಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಡರು.

1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಮೂಲಕ ಗುರುತಿಸಿಕೊಂಡ ವಾಜಪೇಯಿಯವರು 1951ರಲ್ಲಿ ಜನಸಂಘ ಹಿಂದೂ ಬಲ ಪಂಕ್ತಿಯ ರಾಜಕೀಯ ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1957ರಲ್ಲಿ ಬಲರಾಂಪುರದಿಂದ ಲೋಕಸಭೆಗೆ ಆಯ್ಕೆಯಾದ ವಾಜಪೇಯಿಯವರ ವಾಕ್ಚಾತುರ್ಯದ ಮೂಲಕ ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರು ರವರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ದೀನದಯಾಳ್ ಉಪಾದ್ಯಾಯರವರ ನಿಧನದ ನಂತರ ಜನಸಂಘದ ನಾಯಕತ್ವ ವಾಜಪೇಯಿಯವರ ಜವಬ್ಧಾರಿಗೆ ಬಂದಿತು. 1968ರ ಸಮಯದಲ್ಲಿ   ಎಲ್. ಕೆ. ಅದ್ವಾನಿಯವರು ಇವರ ಜೊತೆಗೂಡಿದರು.

1975-77 ರ ಅವಧಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನಿಭವಿಸಿದರು. 1977ರಲ್ಲಿ ಜಯಪ್ರಕಾಶ್ ನಾರಾಯಣರವರ ಮಾರ್ಗದರ್ಶನದಲ್ಲಿ ಜನಸಂಘ ಮತ್ತು ಇನ್ನಿತರ ಪಕ್ಷಗಳನ್ನು ವಿಲೀನವಾಗಿ "ಜನತಾ ಪಕ್ಷ" ಉದಯವಾಯಿತು. ಲೋಕಸಭಾ ಚುನಾವಣೆಯಲ್ಲಿ ಜಯಭೇರಿಗಳಿಸಿದ "ಜನತಾಪಕ್ಷ" ಅಧಿಕಾರಕ್ಕೆ ಬಂದು ಶ್ರೀ ಮೋರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾದರು. ಮಾನ್ಯ ವಾಜಪೇಯಿಯವರು ವಿದೇಶಾಂಗ ಸಚಿವರಾದರು. ಯು.ಎನ್.ಒ. ದಲ್ಲಿ ಪ್ರಥಮಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿದ ನಂತರ ಭಾರತದ ವಿದೇಶಾಂಗ ನೀತಿಯಲ್ಲಿ ಹೆಚ್ಚಿನ ಬಲ ಪಡೆದು ಭಾರತದ ಹೆಸರಿಗೆ ಗೌರವ ದೊರೆಯುವಂತಾಯಿತು.

1980 ರಲ್ಲಿ ಜನತಾ ಪಕ್ಷ ಭಾರತೀಯ ಜನತಾಪಕ್ಷವಾಗಿ ರೂಪುಗೊಂಡಿತು. ಭಾರತೀಯ ಜನತಾಪಕ್ಷದ ಪ್ರಥಮ ರಾಷ್ಟ್ರೀಯ ಅಧ್ಯಕ್ಷರಾಗಿ ಜವಬ್ಧಾರಿಯನ್ನು ವಹಿಸಿಕೊಂಡರು. ಶ್ರೀಮತಿ ಇಂದಿರಾಗಾಂಧಿ ಮತ್ತು ನಂತರದ ಪ್ರಧಾನಮಂತ್ರಿಗಳ ಅವಧಿಯಲ್ಲಿ ವಿರೋಧಪಕ್ಷದ ನಾಯಕರಾಗಿ ಪಾರ್ಲಿಮೆಂಟಿನಲ್ಲಿ ಪ್ರಜಾಪ್ರಭುತ್ವದ ಘನತೆಗೌರವವನ್ನು ಎತ್ತಿಹಿಡಿದರು. ಇವರ ಕಾರ್ಯವೈಖರಿಗೆ ಆಡಳಿತ ಪಕ್ಷವು ಸಹ ತಲೆಬಾಗಿ ಗೌರವಿಸುತಿದ್ದದ್ದು ಅಂದಿನ ದಿನಗಳಲ್ಲಿ ದಾಖಲೆಯಾಗಿದೆ. 

1996 ರಲ್ಲಿ ಭಾರತೀಯ ಜನತಾಪಕ್ಷ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೆಯನ್ನು ಏರಿ, ಮಾನ್ಯ ವಾಜಪೇಯಿಯವರು ಭಾರತದ 11ನೇ ಪ್ರಧಾನಮಂತ್ರಿಯಾದರು. ಲೋಕಸಭೆಯಲ್ಲಿ ಬಹುಮತ ಸಾಬಿತುಪಡಿಸುವಲ್ಲಿ ವಿಫಲರಾಗಿ ಕೇವಲ ಹದಿಮೂರು ದಿನದಲ್ಲೇ ರಾಜಿನಾಮೆಯನ್ನು ನೀಡಬೇಕಾಯಿತು.

1998 ರಲ್ಲಿ ನಡೆದ ಸಾರ್ವರ್ತಿಕ ಚುನಾವಣೆಯಲ್ಲಿ ಮತ್ತೊಮ್ಮೆ ಎನ್.ಡಿ.ಎ. ಪಕ್ಷಗಳ ಸಹಕಾರದೊಂದಿಗೆ ದ್ವಿತೀಯ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1999 ರಲ್ಲಿ ಮತ್ತೊಮ್ಮೆ ರಾಜಕೀಯ ಚದುರಂಗದಾಟದಲ್ಲಿ ಎ.ಐ.ಡಿ.ಎಂ.ಕೆ. ತನ್ನ ಬೆಂಬಲ ಹಿಂಪಡೆದ ಪರಿಣಾಮವಾಗಿ ಲೋಕಸಭೆ ವಿಸರ್ಜನೆಯಾಯಿತು.

1999ರಲ್ಲಿ ನಡೆದ ಚುನಾವಣೆಯಲ್ಲಿ ವಾಜಪೇಯಿಯವರು ಮೂರನೆಯ ಬಾರಿಗೆ ಪ್ರಧಾನಮಂತ್ರಿಯಾಗಿ 2004ರ ವರೆಗೆ ಪೂರ್ಣ ಅವಧಿಯ ಆಡಳಿತವನ್ನು ನಡೆಸಿದರು.

ಭಾರತ ದೇಶದ ಅಭಿವೃದ್ಧಿಗೆ ವಾಜಪೇಯಿಯವರ ಕೊಡುಗೆ...

 

ಬಹುದೂರದರ್ಶಿತ್ವ ಹೊಂದಿದ ವಾಜಪೇಯಿಯವರು ತಮ್ಮ ಆಡಳಿತದ ಅವಧಿಯಲ್ಲಿ ಹಾಕಿಕೊಂಡ ಬೃಹತ್ ಯೋಜನೆಗಳು ಅನುಷ್ಠಾನಗೊಂಡು ವಿಶ್ವ ದಾಖಲೆಯನ್ನು ನಿರ್ಮಿಸಿದೆ.

1998 ಮೇ ತಿಂಗಳಿನಲ್ಲಿ ರಾಜಸ್ಥಾನ್ - ಪೊಕ್ರಾನ್ ನಲ್ಲಿ ಭೂಮಿಯ ಅಡಿಯಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆ  ಪೋಕ್ರಾನ್- 1, ಪೋಕ್ರಾನ್-2 ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ರಶ್ಯಾ, ಫ್ರಾನ್ಸ್, ಯು.ಎಸ್.ಎ., ಕೆನಡಾ, ಜಪಾನ್, ಬ್ರಿಟನ್, ಯೂರೋಪ್ ರಾಷ್ಟ್ರಗಳು ಬೆಕ್ಕಸ ಬೆರಗಾಗಿ ನೋಡುವಂತೆ ಮಾಡಿತ್ತು.

1999ರಲ್ಲಿ ಡೆಲ್ಲಿ ಲಾಹೋರ್ ಬಸ್ ಸಂಚಾರ ಪ್ರಾರಂಭಿಸಿ ಭಾರತ ಪಾಕಿಸ್ಥಾನ ಸ್ನೇಹ ಸಂವರ್ಧನೆಗೆ ಅವಕಾಶ ಕಲ್ಪಿಸಿದ್ದು.

1999ರಲ್ಲಿ ಅನೀರಿಕ್ಷಿತ ಕಾರ್ಗಿಲ್ ಯುದ್ಧ ಘೋಷಣೆಯಾದಾಗ "ಅಪರೇಶನ್ ವಿಜಯ್" ಮೂಲಕ ಶತ್ರು ಪಡೆಗಳನ್ನು ಹಿಮ್ಮೆಟಿಸಿ, ಆಕ್ರಮಿತ ನೆಲವನ್ನು ಸ್ವಾದೀನ ಪಡಿಸಿಕೊಂಡು ಜಯ ಸಾಧಿಸಿದ್ದು. ಭಾರತೀಯರಲ್ಲಿ ಸೇನೆಯ ಬಗ್ಗೆ ಅಭಿಮಾನ, ಗೌರವ ಹಿಮ್ಮಡಿಯಾಗಿ ಮೂಡಿಸಿ, ದೇಶ ಭಕ್ತಿ ಜಾಗೃತಿ ಗೊಳಿಸಿದ್ದು ವಾಜಪೇಯಿಯವರ ಸಾಧನೆಯನ್ನು ಭಾರತೀಯರು ಎಂದೆಂದಿಗೂ ಮರೆಯಲಾರರು.

1999ರಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಿಸಿದ ಸಂದರ್ಭದಲ್ಲಿ, ಬೇಡಿಕೆಗೆ ಒಪ್ಪಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ತಾಯಿನಾಡಿಗೆ ಕರೆತಂದ ಸಾಹಸ ಇವರದ್ದು.

2000 ರಲ್ಲಿ ಅಮೇರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದು, 22 ವರ್ಷಗಳ ನಂತರ ಅಮೇರಿಕಾ ಅಧ್ಯಕ್ಷರ ಭೇಟಿಯು ಭಾರತ, ಅಮೇರಿಕಾ, ಸ್ನೇಹ ಭಾಂದವ್ಯ ವೃದ್ಧಿಗೊಂಡಿದು ಭಾರತದ ಗೌರವಕ್ಕೆ ಇನ್ನಷ್ಟು ಹೆಚ್ಚಿನ ಮಾನ್ಯತೆ ದೊರೆಯುವಂತಾಗಿದ್ದು ಇಡಿ ವಿಶ್ವ ಗೌರವ ನೀಡುವಂತಾಯಿತು.

ದೇಶದ ನಾಲ್ಕು ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15ಸಾವಿರ ಕಿ.ಮಿ. ಉದ್ದದ "ಸುವರ್ಣ ಚತುಷ್ಪತ" ಹೆದ್ದಾರಿಯನ್ನು ದಾಖಲೆಯ ಸಮಯದಲ್ಲೇ ಪೂರ್ತಿಗೊಳಿಸಿದ  ಸಾಧನೆ ವಾಜಪೇಯಿಯವರದ್ದು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಳ್ಳಿ ಹಳ್ಳಿಗೂ ರಸ್ತೆಯನ್ನು ಒದಗಿಸಿದ್ದು ಇನ್ನೊಂದು ಸಾಧನೆ.

2001ರಲ್ಲಿ “ಸರ್ವ ಶಿಕ್ಷಣ ಅಭಿಯಾನ” ಪ್ರಾರಂಭಿಸಿ ಪ್ರಾಥಮಿಕ, ಪ್ರೌಢಶಾಲಾ ಮಟ್ಟದ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವ ಯೋಜನೆಯನ್ನು ಹಾಕಿ ಕಾರ್ಯರೂಪಕ್ಕೆ ತಂದಿರುವುದು. "ಸರ್ವಶಿಕ್ಷಣ ಅಭಿಯಾನ" ದೇಶದ ಎಲ್ಲಾ ಭಾಗದಲ್ಲಿರುವ ಶಾಲೆಗಳಿಗೆ ಹೋಗಲಾಗದ ಮಕ್ಕಳನ್ನು "ಸರ್ವ ಶಿಕ್ಷಣ ಅಭಿಯಾನ" ಮೂಲಕ ಕಡ್ಡಾಯವಾಗಿ ಶಾಲೆಗೆ ಹೋಗಿ ಕಲಿಯುವ ಮೂಲಕ ಎಲ್ಲರೂ ಸಾಕ್ಷರರನ್ನಾಗಿ ಮಾಡುವ ಯೋಜನೆ ವಾಜಪೇಯಿಯವರು ದೂರದೃಷ್ಠಿ ಹೊಂದಿದ ನಾಯಕರಾಗಿದ್ದಾರೆ.

1951 ರಿಂದ 2005 ರವರೆಗೆ ಹಲವಾರು ಪ್ರತಿಷ್ಠಿತ ಸಮಿತಿಗಳಿಗೆ ನಾಯಕತ್ವದ ಜವಬ್ಧಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಸಾಧನೆ ಇವರದ್ದು.

"ಭಾರತೀಯ ರಾಜಕೀಯಾ ರಂಗದ ಭೀಷ್ಮ ಪಿತಾಮಹ" ಎಂದೇ ಕರೆಯಲ್ಪಡುತಿದ್ದರು.

ವಾಜಪೇಯಿಯವರು ರಾಜಕಾರಣಿಯಲ್ಲದೆ ಕವಿಯೂ ಆಗಿದ್ದರು. ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಇವರ ಇಪ್ಪತೊಂದು ಕವಿತೆಗಳ ಸಂಕಲನ - ಅಂಗ್ಲ ಭಾಷೆಗೆ ಅನುವಾದ ಗೊಂಡಿದೆ. ಸಾಹಿತಿಯಾಗಿಯೂ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ದೇಶ ವಿದೇಶಗಳಲ್ಲಿ ಹಲವು ಬಾರಿ ಸನ್ಮಾನ ಗೌರವಗಳನ್ನು ಪಡೆದು ಪ್ರಶಸ್ತಿಗಳ ಸರಮಾಲೆಯನ್ನು ಧರಿಸುವ ವಾಜಪೇಯಿಯವರಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಗೌರವ 1992ರಲ್ಲಿ "ಪದ್ಮ ವಿಭೂಷಣ" 1994 ರಲ್ಲಿ "ಲೋಕಮಾನ್ಯ ತಿಲಕ್ ಪ್ರಶಸ್ತಿ" , "ಉತ್ತಮ ರಾಜಕೀಯ ಪಟು" , "ಪಂಡಿತ್ ಗೋವಿಂದ್ ವಲ್ಲಭ ಪಂತ್ ಪ್ರಶಸ್ತಿ" ಭಾರತ ಪರಮೋಚ್ಚ ಗೌರವ 2015 ರಲ್ಲಿ "ಭಾರತ ರತ್ನ ಪ್ರಶಸ್ತಿ" ಮತ್ತು "ಬಾಂಗ್ಲ ವಿಮೋಚನ ಪ್ರಶಸ್ತಿ" ಗಳನ್ನು ನೀಡಿ ಗೌರವಿಸಲಾಗಿದೆ. 

2005 ಡಿಸೆಂಬರ್ ನಲ್ಲಿ ರಾಜಕೀಯಾ ನಿವೃತಿಯನ್ನು ಘೋಷಿಸಿದ ನಂತರ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.

92ನೇ ಹುಟ್ಟುಹಬವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಸಮಸ್ತ ಭಾರತೀಯರ ಪರವಾಗಿ ಹಿರಿಯ ಮುತ್ಸದ್ಧಿ, ಅಪ್ಪಟ ದೇಶಾಭಿಮಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಹಾರ್ದಿಕ ಶುಭಾಶಯಗಳು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...