ಕಾಂಗ್ರೇಸ್‍ನದ್ದು ಎಂಜಲು ಊಟ ಮಾಡುವ ಸಂಸ್ಕೃತಿ-ಸಚಿವ ಅನಂತ್

Source: sonews | By sub editor | Published on 2nd May 2018, 7:10 PM | Coastal News | State News | Don't Miss |


•    ಉ.ಕ.ಜಿಲ್ಲಾ ಬಿಜೆಪಿ ಪ್ರಣಾಳಿಕೆ ಬಿಡುಗಡೆಯಲ್ಲಿ ಕೇಂದ್ರ ಸಚಿವ ಹೆಗಡೆ ಮಾತಿನ ಚಾಟಿ
•    ಕಾಂಗ್ರೇಸ್ ಪ್ರಣಾಳಿಕೆ ಬೊಗಳೆ ಪತ್ರಿಕೆ ಎಂದ ಸಂಸದ ಅನಂತ್ ಕುಮಾರ್ ಹೆಗಡೆ

ಭಟ್ಕಳ: ಬಿಜೆಪಿ ಮಾಡಿದ ಸಾಧನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳುವುದರ ಮೂಲಕ ಕಾಂಗ್ರೇಸ್ ಪಕ್ಷ ಎಂಜಲು ಊಟ ಮಾಡುವ ಸಂಸ್ಕೃತಿ ಎಂಬುದನ್ನು ಸಾಬೀತು ಮಾಡಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕಾಂಗ್ರೇಸ್ ಪ್ರಣಾಳಿಕೆಯ ವಿರುದ್ಧ ತಮ್ಮ ಮಾತಿನ ಚಾಟಿ ಬೀಸಿದರು. 

ಅವರು ಬುಧವಾರ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಉತ್ತರಕನ್ನಡ ಜಿಲ್ಲಾ ಬಿಜೆಪಿ ಚುನಾವಣ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು. 

ಉತ್ತರಕನ್ನಡ ಜಿಲ್ಲಾ ಬಿಜೆಪಿ ಪಕ್ಷವು ಜಿಲ್ಲೆಯ ಸಮಗ್ರ ಕಲ್ಪನೆ, ಇಲ್ಲಿನ ಭೌಗೋಳಿಕ ಪರಿಸರ,ಜನಜೀವನ, ಸಾಮಾಜಿಕ ಸ್ಥರಗಳು, ನೈಸರ್ಗಿಕ ಸಂಪನ್ಮೂಲಗಳನ್ನು ಗುರುತಿಸಿ ಮಾದರಿ ಪ್ರಣಾಳಿಕೆಯನ್ನು ಸಿದ್ಧಗೊಳಿಸಿದ್ದು ಇದು ನಮ್ಮ ವಾಗ್ಧಾನ ಹಾಗೂ ನಮ್ಮ ಅಭ್ಯರ್ಥಿಗಳ ಸಂವಿಧಾನವಾಗಿದೆ ಎಂದರು. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಯೋಜನೆಯ ನೆರಳಿನಲ್ಲಿ ಮುಂದೆ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಕೇಂದ್ರ ಹಾಗೂ ರಾಜ್ಯಸರ್ಕಾರದ ಪರಸ್ಪರ ಸಹಕಾರದೊಂದಿಗೆ ನಾನು ನಮ್ಮ ಗುರಿಯನ್ನು ಸುಲಭವಾಗಿ ತಲುಪುತ್ತೇವೆ ಎಂದ ಅವರು ಜಿಲ್ಲೆಯಲ್ಲಿ ತೋಟಗಾರಿಕಾ ಕ್ಷೇತ್ರದಲ್ಲ ಗಮನಾರ್ಹವಾದ ಬೆಳವಣೆಗೆ ತರುವ ಪ್ರಯತ್ನ ನಾವು ಮಾಡಿದ್ದೇವೆ. ಕೃಷಿಯಲ್ಲಿ ಉನ್ನತ ತಂತ್ರಜ್ಞಾನದ ಬಳಕೆ, ದಿ ಗ್ರೇಟ್ ಕೆನರಾ ಟ್ರೇನ್ ಕಲ್ಪನೆ,ಗ್ರಾಮೀಣ ಪ್ರವಾಸೋಧ್ಯಮದ ಬೆಳವಣೆ, ಸಹಕಾರಿ ಕ್ಷೇತ್ರದಲ್ಲಿ ಹೊಸತಲೆಮಾರಿನ ಯೋಚನೆ, ಅರಣ್ಯ ಸಂರಕ್ಷಣೆ, ಪರಿಸರ ಸಂರಕ್ಷಣೆ ಒತ್ತು ಫಿಶ್ ಲ್ಯಾಂಡಿಂಗ್ ಫೆಸಲಿಟಿ ಉದ್ಯೋಗವಕಾಶ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಹಾಕಿಕೊಳ್ಳಲಾಗಿದೆ ಎಂದ ಅವರು ಕಾಂಗ್ರೇಸ್ ಪಕ್ಷ 5ವರ್ಷದ ಆಳ್ವಿಕೆಯಲ್ಲಿ ಜಿಲ್ಲೆಯಲ್ಲಿ ಒಂದು ಕೈಗಾರಿಕೆಯನ್ನು ಸ್ಥಾಪಿಲಿಲ್ಲ ಉಸ್ತವಾರಿ ಸಚಿವ ದೇಶಪಾಂಡೆ ಪ್ರತಿನಿಧಿಸುವ ಕ್ಷೇತ್ರವನ್ನು ನಾವು ಕೌಶಲ್ಯಾಭಿವೃಧ್ಧಿ ಕೇಂದ್ರವನ್ನಾಗಿ ಮಾಡಿದ್ದೇವೆ ಆದರೆ ದೇಶಪಾಂಡೆ ಸುಳ್ಳನ್ನು ಹೇಳುತ್ತ ಬಂದಿದ್ದು 5ವರ್ಷ ಕಾಲಹರಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಯಡಿಯೂರಪ್ಪ ಸರ್ಕಾರವಿದ್ದಾಗ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೇಸ್ ಪಕ್ಷದಿಂದ ಮುಂದುವರೆಸಿಕೊಂಡು ಹೋಗಲು ಆಗಲಿಲ್ಲ. ಯಾವು ಮೊಖವಿಟ್ಟುಕೊಂಡು ಮತಕೇಳಲು ಹೋಗುತ್ತಿರಾ ಎಂದ ಅವರು ಕಾಂಗ್ರೇಸ್ ಪಕ್ಷ ಜಿಲ್ಲೆಯಿಂದ ಜಾಗ ಖಾಲಿ ಮಾಡಲಿ ಎಂದರು. 

ಭಟ್ಕಳದಲ್ಲಿ ಜೆ.ಡಿ.ಎಸ್. ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದು ಬಿಜೆಪಿ ಜೆಡಿಎಸ್ ನೊಂದಿಗೆ ಹೊಂದಾಣಿಕೆಯೇನಾದರೂ ಮಾಡಿಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಜೆ.ಡಿ.ಎಸ್ ಈಗಾಗಲೆ ನಮ್ಮ ಶಕ್ತಿಗೆ ಬೆದರಿ ಕಾಲ್ಕಿತ್ತಿದೆ ಸಧ್ಯದಲ್ಲೇ ಕಾಂಗ್ರೇಸ್ ಪಕ್ಷ ಕೂಡ ಕಾಲ್ಕೀಳಲಿದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನಿಸಿಕೊಂಡು ಜೆ.ಡಿಎಸ್ ಮತದಾರರು ಬಿಜೆಪಿಗೆ ಮತಹಾಕಿ ಎಂದು ಕರೆಕೊಟ್ಟರು. 

ಈ ಸಂದರ್ಭದಲ್ಲಿ ಭಟ್ಕಳ ಮಂಡಳ ಅಧ್ಯಕ್ಷ ರಾಜೇಶ್ ನಾಯ್ಕ, ಅಭ್ಯರ್ಥಿ ಸುನಿಲ್ ನಾಯ್ಕ ಸೇರಿದಂತೆ ಬಿಜೆಪಿ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು. 
 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...